ಬಿಹಾರ ಎನ್ ಡಿಎ ಗೆಲುವು: ಕಡೂರು ಬಿಜೆಪಿ ವಿಜಯೋತ್ಸವ ಆಚರಣೆ

| Published : Nov 16 2025, 02:00 AM IST

ಬಿಹಾರ ಎನ್ ಡಿಎ ಗೆಲುವು: ಕಡೂರು ಬಿಜೆಪಿ ವಿಜಯೋತ್ಸವ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುದೇಶದ ಸಮಗ್ರತೆ ಮತ್ತು ಸುಭದ್ರತೆ ದೃಷ್ಟಿಯಿಂದ ಬಿಹಾರ ಮತದಾರರು ಎನ್ ಡಿಎಗೆ ಅಭೂತಪೂರ್ವ ಗೆಲುವು ನೀಡುವ ಮೂಲಕ ಎಸ್ಐಆರ್ ವಿರುದ್ಧ ವಿಪಕ್ಷಗಳು ಮಾಡಿದ ಟೀಕೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ದೇವಾನಂದ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಕಡೂರು

ದೇಶದ ಸಮಗ್ರತೆ ಮತ್ತು ಸುಭದ್ರತೆ ದೃಷ್ಟಿಯಿಂದ ಬಿಹಾರ ಮತದಾರರು ಎನ್ ಡಿಎಗೆ ಅಭೂತಪೂರ್ವ ಗೆಲುವು ನೀಡುವ ಮೂಲಕ ಎಸ್ಐಆರ್ ವಿರುದ್ಧ ವಿಪಕ್ಷಗಳು ಮಾಡಿದ ಟೀಕೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ದೇವಾನಂದ್ ಅಭಿಪ್ರಾಯಪಟ್ಟರು.ಕಡೂರು ಬಿಜೆಪಿ ಕಚೇರಿಯಲ್ಲಿ ಬಿಹಾರ ಗೆಲುವಿನ ಸಂಭ್ರಮಾಚರಣೆ ನಡೆಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಪತ್ರಕರ್ತರೊಂದಿಗೆ ಮಾತನಾಡಿದರು. ಬಿಹಾರದಲ್ಲಿ ನಿತೀಶ್ ಕುಮಾರ್ ಜನಪರ ಆಡಳಿತ, ದೇಶದಲ್ಲಿ ಮೋದಿ ಅವರ ನಾಯಕತ್ವವನ್ನು ಜನರು ಮೆಚ್ಚಿ ಎನ್ ಡಿಎಗೆ ನಿರೀಕ್ಷೆಗೂ ಮೀರಿ ಬೆಂಬಲ ಸೂಚಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಅಸಂಗತ ಆರೋಪಗಳನ್ನು ಮಾಡಿದ ವಿಪಕ್ಷಗಳ ನಡೆ ತಿರಸ್ಕರಿಸಿರುವ ಬಿಹಾರ ಜನರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಟಿ.ಆರ್.ಲಕ್ಕಪ್ಪ ಮಾತನಾಡಿ, ಎನ್ ಡಿಎ ಗೆಲುವಿಗೆ ನಿತೀಶ್ಅವರ ಆಡಳಿತ, ಮೋದಿ, ಅಮಿತ್ ಶಾರವರ ಮಾರ್ಗದರ್ಶನ ಕಾರಣವಾಗಿದೆ. ಮಹಾ ಘಟಬಂಧನ ಅಪಕ್ವ ರಾಜಕಾರಣಿಗಳ ಒಕ್ಕೂಟ ಎನ್ನು ವುದನ್ನು ಮನಗಂಡು ಬಿಹಾರ ಮತದಾರ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕಾರಣದಲ್ಲಿಯೂ ಇಂತಹದೇ ಗೆಲುವು ಬಿಜೆಪಿ - ಜೆಡಿಎಸ್ಒಕ್ಕೂಟಕ್ಕೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೇಶ, ಪಕ್ಷ ಮತ್ತು ಮುಖಂಡರ ಪರ ಜಯಘೋಷಗಳ ಮೂಲಕ ಬಿಜೆಪಿ ಕಾರ್ಯಕರ್ತರು ಸಂಭ್ರಮಿ ಸಿದರು. ಎಚ್.ಎಂ.ರೇವಣ್ಣಯ್ಯ, ಶಾಮಿಯಾನಾ ಚಂದ್ರು, ಬಿ.ಎಸ್.ಸತೀಶ್, ಮಣಿ, ಗೋವಿಂದ್, ಚಿನ್ನರಾಜು, ಸಂದೇಶ್ ಕುಮಾರ್, ಕಾವೇರಿ ಲಕ್ಕಪ್ಪ, ಚಿನ್ನು ದೇವರಾಜ್, ಪೃಥ್ವಿಕ್, ವೈ.ಜಿ.ಕುಮಾರ್, ಶ್ರೀನಿವಾಸ್ ನಾಯಕ್, ಪ್ರಸನ್ನ ಬಾಸೂರು ಮತ್ತಿತರರು ಇದ್ದರು.14ಕೆಕೆಡಿಯು1 ಬಿಹಾರದಲ್ಲಿ ಎನ್ ಡಿಎ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಡೂರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.