16ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವ ಅವಕಾಶ ನಿರಾಕರಿಸುವ ಮಹತ್ವದ ಕಾನೂನು ಆಸ್ಟ್ರೇಲಿಯಾದಲ್ಲಿ ಬುಧವಾರದಿಂದ ಜಾರಿಗೆ ಬಂದಿದೆ. ಮಕ್ಕಳನ್ನು ಮಕ್ಕಳಾಗಿಯೇ ಇರಿಸುವ, ಅವರನ್ನು ಸಾಮಾಜಿಕ ಜಾಲತಾಣದ ಅನಾಹುತಗಳಿಂದ ಕಾಪಾಡುವ ನಿಟ್ಟಿನಲ್ಲಿ ಜಾರಿಗೆ ತರಲಾದ ಈ ಕಾಯ್ದೆ ವಿಶ್ವದಲ್ಲೇ ಮೊದಲು.
16ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನ್ವಯ
ನಿಯಮ ಉಲ್ಲಂಘಿಸಿದ ಕಂಪನಿಗಳಿಗೆ ದಂಡಮಕ್ಕಳನ್ನು ಮಕ್ಕಳಾಗಿಯೇ ಇರಿಸಲು ಕ್ರಮ
ನವದೆಹಲಿ: 16ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವ ಅವಕಾಶ ನಿರಾಕರಿಸುವ ಮಹತ್ವದ ಕಾನೂನು ಆಸ್ಟ್ರೇಲಿಯಾದಲ್ಲಿ ಬುಧವಾರದಿಂದ ಜಾರಿಗೆ ಬಂದಿದೆ. ಮಕ್ಕಳನ್ನು ಮಕ್ಕಳಾಗಿಯೇ ಇರಿಸುವ, ಅವರನ್ನು ಸಾಮಾಜಿಕ ಜಾಲತಾಣದ ಅನಾಹುತಗಳಿಂದ ಕಾಪಾಡುವ ನಿಟ್ಟಿನಲ್ಲಿ ಜಾರಿಗೆ ತರಲಾದ ಈ ಕಾಯ್ದೆ ವಿಶ್ವದಲ್ಲೇ ಮೊದಲು.ಕಳೆದ ವರ್ಷ ಆಸ್ಟ್ರೇಲಿಯಾ ರಾಜ್ಯಗಳಲ್ಲಿ ಸಣ್ಣದಾಗಿ ಅಭಿಯಾನ ಇದೀಗ ದೇಶವ್ಯಾಪಿ ವ್ಯಾಪಿಸಿದ್ದು, ಲಕ್ಷಾಂತರ ಮಕ್ಕಳಿಗೆ ಬುಧವಾರದಿಂದ ಜಾಲತಾಣ ಖಾತೆ ನಿಷೇಧಿಸಲ್ಪಟ್ಟಿದೆ. ಈಗಾಗಲೇ 10 ಜಾಲತಾಣಗಳಲ್ಲಿ ಖಾತೆ ಹೊಂದಿದ್ದ ಮಕ್ಕಳ ಖಾತೆ ಈಗಾಗಲೇ ರದ್ದುಪಡಿಸಲಾಗಿದ್ದು, ಹೊಸಬರಿಗೂ ಕಠಿಣ ನಿಯಮಗಳ ಮೂಲಕವೇ ಖಾತೆ ತೆರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಒಂದು ವೇಳೆ ಜಾಲತಾಣ ಕಂಪನಿಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಖಾತೆ ನಿಷೇಧಿಸದೇ ಇದ್ದರೆ ಮತ್ತು ಹೊಸದಾಗಿ ಈ ವಯೋಮಾನದ ಮಕ್ಕಳಿಗೆ ಖಾತೆ ತೆರೆಯಲು ಅವಕಾಶ ನೀಡಿದರೆ ಅಂಥ ಕಂಪನಿಗಳಿಗೆ 290 ಕೋಟಿ ರು.ವರೆಗೆ ದಂಡ ವಿಧಿಸಲಾಗುವುದು.
ಯಾವ್ಯಾವ ತಾಣ ನಿಷೇಧ?:ಫೇಸ್‌ಬುಕ್, ಇನ್ಸ್ಟಾಗ್ರಾಂ, ಥ್ರೆಡ್ಸ್, ಎಕ್ಸ್, ಯುಟ್ಯೂಬ್, ಸ್ನಾಪ್‌ಚಾಟ್, ರೆಡ್ಡಿಟ್, ಕಿಕ್, ಟ್ವಿಚ್ ಮತ್ತು ಟಿಕ್‌ಟಾಕ್.
ಮಕ್ಕಳಿಗೆ ನಿಷೇಧ ಯಾಕೆ?:2023ರ ಸಮೀಕ್ಷೆಯ ಅನ್ವಯ 8-16ರ ವಯೋಮಾನದ ಶೇ.80ರಷ್ಟು ಮಕ್ಕಳು ಜಾಲತಾಣ ಬಳಸುತ್ತಿದ್ದರು. ಇವರ ಜಾಲತಾಣ ಬಳಕೆಯ ಸರಾಸರಿ ವಯಸ್ಸು 8-12 ವರ್ಷ. ಇದು ಬಹಳ ಚಿಕ್ಕ ವಯಸ್ಸಿನಲ್ಲೇಗೆ ಮಕ್ಕಳು ಜಾಲತಾಣಗಳಿಗೆ ದಾಸರಾಗುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿತ್ತು. ಅಲ್ಲದೆ ತಮ್ಮ ವಯಸ್ಸಿನಲ್ಲಿ ಮಾಡಬೇಕಾದ ದೈಹಿಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಜಾಲತಾಣದಲ್ಲಿ ವಿಷಯಗಳು ಮಕ್ಕಳ ವಯಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಕ್ಕಳ ಆತ್ಮಹತ್ಯೆಗೂ ಕಾರಣವಾಗುತ್ತಿದೆ. ಮಕ್ಕಳ ಮೇಲೆ ಜಾಲತಾಣಗಳ ಮೂಲಕ ಕಿರುಕುಳ, ಮಕ್ಕಳ ಶೋಷಣೆ ಹೆಚ್ಚಾಗಿದ್ದವು. ಹೀಗಾಗಿ ಮಕ್ಕಳನ್ನು ಮಕ್ಕಳಾಗಿಯೇ ಇರಿಸಲು ಈ ಕಾನೂನು ಅಗತ್ಯ ಎಂಬುದು ಸರ್ಕಾರದ ವಾದ.
ವಯೋಮಿತಿ ಪರೀಕ್ಷೆ:ಮಕ್ಕಳ ಗುರುತಿನ ಚೀಟಿ, ಮುಖಚಹರೆ ಪರೀಕ್ಷೆ, ಕಾಲಕಾಲಕ್ಕೆ ಸರ್ಕಾರ, ಕಂಪನಿಗಳು ಸೂಚಿಸಿದ ನಿಯಮಗಳ ಅನ್ವಯ ಮಕ್ಕಳ ವಯೋಮಿತಿ ಖಚಿತಪಡಿಸಿಕೊಂಡು ಅವರಿಗೆ ಜಾಲತಾಣದಲ್ಲಿ ಖಾತೆ ತೆರೆಯಲು ಅವಕಾಶ ನೀಡಬೇಕೋ? ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ.
10 ಲಕ್ಷ ಖಾತೆ ರದ್ದು:16ಕ್ಕಿಂತ ಕಡಿಮೆ ವಯಸ್ಸಿನ ಅಂದಾಜು 10 ಲಕ್ಷ ಜಾಲತಾಣ ಖಾತೆಗಳು ಬುಧವಾರ ರದ್ದಾಗಿವೆ ಎಂಬ ಅಂದಾಜಿದೆ.
==ಸೌದಿಯಲ್ಲಿ ಮದ್ಯ ಖರೀದಿಗೆ ವೇತನ ದಾಖಲೆ ಕಡ್ಡಾಯ!
11 ಲಕ್ಷ ವೇತನದ ವಿದೇಶಿಗರಿಗೆ ಅವಕಾಶ
ರಿಯಾದ್: ವಿದೇಶಿ ರಾಯಭಾರ ಸಿಬ್ಬಂದಿಗೆ ಮಾತ್ರವೇ ಇದ್ದ ಮದ್ಯ ಖರೀದಿ ಅವಕಾಶವನ್ನು ಇದೀಗ ಜನಸಾಮಾನ್ಯರಿಗೂ ವಿಸ್ತರಣೆ ಮಾಡಲು ಸೌದಿ ಅರೇಬಿಯಾ ನಿರ್ಧರಿಸಿದೆ. ಆದರೆ ಈ ಸೌಲಭ್ಯ ಸೌದಿ ಪ್ರಜೆಗಳಿಗೆ ಇಲ್ಲ. ಬದಲಾಗಿ ಮುಸ್ಲಿಮೇತರ ವಿದೇಶಿಯರಿಗೆ ಮಾತ್ರ ಇರಲಿದೆ.ಆದರೆ ಹೀಗೆ ಅವಕಾಶ ನೀಡುವ ವೇಳೆಯೂ ಸೌದಿ ಸರ್ಕಾರ ಒಂದಷ್ಟು ನಿಯಮ, ಷರತ್ತು ಹಾಕಿದೆ. ಅದೇನೆಂದರೆ ನೀವು ಮಾಸಿಕ 11 ಲಕ್ಷ ರು.ಗಿಂತ ಹೆಚ್ಚಿನ ಆದಾಯ ಹೊಂದಿದ್ದು, ಆ ಕುರಿತ ದಾಖಲೆ ಪತ್ರಗಳನ್ನು ಮದ್ಯದಂಗಡಿಯಲ್ಲಿ ಖರೀದಿ ವೇಳೆ ತೋರಿಸಬೇಕು!
ಹೌದು, ಮದ್ಯ ಮಾರಾಟ ನಿಷೇಧ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಏಕೈದ ಮದ್ಯ ಮಾರಾಟ ಮಳಿಗೆ ಇದೆ. ಅದರಲ್ಲಿ ಇದುವರೆಗೆ ವಿದೇಶಿ ರಾಜತಾಂತ್ರಿಕ ಸಿಬ್ಬಂದಿಗೆ ಮಾತ್ರ ಅವಕಾಶ ಇತ್ತು. ಇದನ್ನು ಇದೀಗ ಹೆಚ್ಚು ವೇತನ ಹೊಂದಿರುವ ಮುಸ್ಲಿಮೇತರ ವಿದೇಶಿ ನಾಗರಿಕರಿಗೂ ಸರ್ಕಾರ ವಿಸ್ತರಣೆ ಮಾಡಿದೆ. ಮಾಸಿಕ 11 ಲಕ್ಷ ರು.ಗಿಂತ ಹೆಚ್ಚಿನ ವೇತನ ಹೊಂದಿರುವವರು ದಾಖಲೆ ತೋರಿಸಿ ಮದ್ಯ ಖರೀದಿಸಬಹುದು.