ಸಾರಾಂಶ
ಸ್ವದೇಶ ಮತ್ತು ವಿದೇಶಗಳಲ್ಲಿ ನಿಧಾನಕ್ಕೆ ತನ್ನ ಪ್ರಾಬಲ್ಯ ವಿಸ್ತರಿಸಿಕೊಳ್ಳುತ್ತಿರುವ ಪಾಕ್ ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಜ. ಆಸೀಮ್ ಮುನೀರ್‌ಗಾಗಿ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ಸಂವಿಧಾನವನ್ನೇ ತಿದ್ದುಪಡಿ ಮಾಡಲು ಮುಂದಾಗಿದೆ.
ಇಸ್ಲಾಮಾಬಾದ್: ಸ್ವದೇಶ ಮತ್ತು ವಿದೇಶಗಳಲ್ಲಿ ನಿಧಾನಕ್ಕೆ ತನ್ನ ಪ್ರಾಬಲ್ಯ ವಿಸ್ತರಿಸಿಕೊಳ್ಳುತ್ತಿರುವ ಪಾಕ್ ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಜ. ಆಸೀಮ್ ಮುನೀರ್‌ಗಾಗಿ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ಸಂವಿಧಾನವನ್ನೇ ತಿದ್ದುಪಡಿ ಮಾಡಲು ಮುಂದಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ ಸೇನಾ ಮುಖ್ಯಸ್ಥಗೆ ಇತಿಹಾಸದಲ್ಲಿಯೇ ಕಂಡು ಕೇಳರಿಯದ, ಅಧ್ಯಕ್ಷರಿಗಿಂತಲೂ ಹೆಚ್ಚಿನ ಅಧಿಕಾರ ನೀಡಲು ನಿರ್ಧರಿಸಿದೆ.
243ನೇ ವಿಧಿ ಬದಲಿಸಲು 27ನೇ ತಿದ್ದುಪಡಿ
ಪಾಕಿಸ್ತಾನ ಸರ್ಕಾರವು ಸಂವಿಧಾನದಲ್ಲಿ 243ನೇ ವಿಧಿ ಬದಲಿಸಲು 27ನೇ ತಿದ್ದುಪಡಿಗೆ ಮುಂದಾಗಿದೆ. ಒಂದು ವೇಳೆ ಸಂವಿಧಾನ ಅಂಗೀಕಾರವಾದರೆ ಯಾವುದೆಲ್ಲ ಸೂಪರ್ ಪವರ್ ಮುನೀರ್ ಪಾಲಾಗಲಿದೆ ಎನ್ನುವುದನ್ನು ನೋಡುವುದಾದರೆ,
* ಫೀಲ್ಡ್ ಮಾರ್ಷಲ್ ಹುದ್ದೆಗೆ ಹಾಲಿ ಮಾನ್ಯತೆಯಿಲ್ಲ. ಆದರೆ ಇನ್ಮುಂದೆ ಸಾಂವಿಧಾನಿಕ ಸ್ಥಾನಮಾನ ಸಿಗಲಿದೆ.
ಮುನೀರ್ ಅವಧಿ ಈ 28ಕ್ಕೆ ಕೊನೆ
* ಮುನೀರ್ ಅವಧಿ ಈ 28ಕ್ಕೆ ಕೊನೆ ಅಂತ್ಯಗೊಳ್ಳಬೇಕಿದೆ. ವಿಸ್ತರಣೆಗೆ ಇನ್ನು ಅವಕಾಶ ಇಲ್ಲ. ಹೊಸ ಕಾನೂನು ಅಂಗೀಕಾರವಾದರೆ ಅವರಿಗೆ ಆಜೀವ ಪರ್ಯಂತ ಅಧಿಕಾರ.
* ಅಧಿಕಾರದ ಅವಧಿಯಲ್ಲಿ ನ್ಯಾಯಾಂಗ ಅಥವಾ ಕಾರ್ಯಾಂಗಕ್ಕೆ ಫೀಲ್ಡ್ ಮಾರ್ಷಲ್ ಕಿತ್ತು ಹಾಕುವ ಅಧಿಕಾರ ಇರುವುದಿಲ್ಲ.
* ಮುನೀರ್‌ಗೆ ಮೂರು ಸೇನಾ ಪಡೆಯ ಮುಖ್ಯಸ್ಥರು, ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ನೇಮಕದ ಅಧಿಕಾರ.

;Resize=(128,128))
;Resize=(128,128))
;Resize=(128,128))