ಸಾರಾಂಶ
ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ‘ಕಾನೂನುಬದ್ಧ ಹೋರಾಟ’ ಎಂದು ಬಣ್ಣಿಸಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀ।ಮಾ।ಜ। ಅಸಿಮ್ ಮುನೀರ್, ತಮ್ಮ ದೇಶವು ಯಾವಾಗಲೂ ಕಾಶ್ಮೀರದ ಜನರ ಹೋರಾಟದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್ : ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ‘ಕಾನೂನುಬದ್ಧ ಹೋರಾಟ’ ಎಂದು ಬಣ್ಣಿಸಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀ।ಮಾ।ಜ। ಅಸಿಮ್ ಮುನೀರ್, ತಮ್ಮ ದೇಶವು ಯಾವಾಗಲೂ ಕಾಶ್ಮೀರದ ಜನರ ಹೋರಾಟದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಎರಡೂ ರಾಷ್ಟ್ರಗಳು ಇತ್ತೀಚೆಗೆ ಪರಸ್ಪರ ಯುದ್ಧ ಮಾಡುವ ಮುನ್ನ ಮುನೀರ್, ಕಾಶ್ಮೀರವು ಪಾಕ್‌ನ ರಕ್ತನಾಳ ಎಂದು ಹೇಳಿ ಉಗ್ರರನ್ನು ಪ್ರಚೋದಿಸಿದ್ದರು. ಇದೀಗ ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ಸ್ವಾತಂತ್ರ್ಯ ಹೋರಾಟವನ್ನು ಅಂತಾರಾಷ್ಟ್ರೀಯ ಕಾನೂನುಗಳೇ ಕಾನೂನುಬದ್ಧ ಎನ್ನುತ್ತವೆ. ಆದರೆ ಅದನ್ನೇ ಭಾರತವು ಭಯೋತ್ಪಾದನೆ ಎನ್ನುತ್ತದೆ’ ಎಂದರು.
‘ಭವಿಷ್ಯದಲ್ಲಿ ಯಾವುದೇ ದಾಳಿ ನಡೆದರೆ ಭಾರತಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ’ ಎಂದೂ ಜ। ಮುನೀರ್ ಎಚ್ಚರಿಸಿದರು.