ಸಾರಾಂಶ
ಸಾರಾಬಾಯ್ ವರ್ಸಸ್ ಸಾರಾಭಾಯ್, ಅನುಪಮಾ ಧಾರಾವಾಹಿಗಳಲ್ಲಿ ತಮ್ಮ ಪಾತ್ರಗಳ ಮೂಲಕ ಖ್ಯಾತಿ ಗಳಿಸಿರುವ ಖ್ಯಾತ ಕಿರುತೆರೆ ನಟಿ ರೂಪಾಲಿ ಗಂಗೂಲಿ ಹಾಗೂ ಮಹಾರಾಷ್ಟ್ರದ ಪ್ರಖ್ಯಾತ ಜ್ಯೋತಿಷಿ ಅಮೇಯಾ ಜೋಶಿ ಬುಧವಾರ ಬಿಜೆಪಿ ಸೇರಿದ್ದಾರೆ.
ನವದೆಹಲಿ: ಸಾರಾಬಾಯ್ ವರ್ಸಸ್ ಸಾರಾಭಾಯ್, ಅನುಪಮಾ ಧಾರಾವಾಹಿಗಳಲ್ಲಿ ತಮ್ಮ ಪಾತ್ರಗಳ ಮೂಲಕ ಖ್ಯಾತಿ ಗಳಿಸಿರುವ ಖ್ಯಾತ ಕಿರುತೆರೆ ನಟಿ ರೂಪಾಲಿ ಗಂಗೂಲಿ ಹಾಗೂ ಮಹಾರಾಷ್ಟ್ರದ ಪ್ರಖ್ಯಾತ ಜ್ಯೋತಿಷಿ ಅಮೇಯಾ ಜೋಶಿ ಬುಧವಾರ ಬಿಜೆಪಿ ಸೇರಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಹಾಗೂ ಮಾಧ್ಯಮ ಉಸ್ತುವಾರಿ ಅನಿಲ್ ಬಲೂನಿ ನೇತೃತ್ವದಲ್ಲಿ ಇಬ್ಬರು ದಿಗ್ಗಜರೂ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ನಡುವೆ ರೂಪಾಲಿ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಪ್ರಿಯಾಂಕಾ ಕಣಕ್ಕೆ ಇಳಿದರೆ ಅವರ ವಿರುದ್ಧ ರೂಪಾಲಿ ಕಣಕ್ಕೆ ಇಳಿಸಲು ಬಿಜೆಪಿ ಚಿಂತಿಸಿದೆ ಎನ್ನಲಾಗುತ್ತಿದೆ.