- ಕರ್ತವ್ಯಾಧಿಕಾರಿ ಆಗಿ ನೇಮಕವಾಗಿದ್ದ ಪಂಡಿತ್- ಮಿತ್ರರ ಆಕ್ರೋಶಕ್ಕೆ ಮಣಿದು ನೇಮಕ ವಾಪಸ್--ವಿಜಯ್‌ಗೆ ಸುಲಭವಿಶ್ವಾಸಮತ!ಚೆನ್ನೈ: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲದೊಂದಿಗೆ ವಿಶ್ವಾಸಮತ ಸಾಬೀತುಪಡಿಸಿದೆ. 234 ಸದಸ್ಯ ಬಲದ ಸದನದಲ್ಲಿ ಬಹುಮತಕ್ಕೆ 118 ಮತ ಬೇಕಿತ್ತು. ಟಿವಿಕೆ 144 ಮತ ಪಡೆದು ಸುಲಭವಾಗಿ ಅಗ್ನಿಪರೀಕ್ಷೆ ಪಾಸಾಗಿದೆ. 25 ಅಣ್ಣಾಡಿಎಂಕೆ ಶಾಸಕರು ವಿಜಯ್ ಪರ ಅಡ್ಡಮತ ಹಾಕಿದ್ದೇ ಇದಕ್ಕೆ ಕಾರಣ.--ಚೆನ್ನೈ: ಜ್ಯೋತಿಷಿ ರಿಕಿ ರಾಧನ್ ಪಂಡಿತ್ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಕಾರಿಯಾಗಿ ನೇಮಿಸಿಕೊಂಡಿದ್ದ ತಮಿಳುನಾಡು ನೂತನ ಸಿಎಂ ವಿಜಯ್, ಒಂದೇ ದಿನದಲ್ಲಿ ನೇಮಕಾತಿ ರದ್ದು ಮಾಡಿದ್ದಾರೆ. ಮಿತ್ರ ಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಿಕಿ ನೇಮಕ ರದ್ದಾಗಿದೆ.ಚುನಾವಣೆಗೂ ಮುನ್ನ ವಿಜಯ್ ಅವರ ಟಿವಿಕೆ ಪಕ್ಷ ಭರ್ಜರಿ ಗೆಲುವು ಸಾಧಿಸುತ್ತದೆ ಎಂದು ರಿಕಿ ಭವಿಷ್ಯ ನುಡಿದಿದ್ದರು. ಅಚ್ಚರಿ ರೀತಿಯಲ್ಲಿ ಮಂಗಳವಾರ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಯಾಗಿ ವಿಜಯ್ ನೇಮಕ ಮಾಡಿದ್ದರು. ಮಹತ್ವದ ಆಡಳಿತಾತ್ಮಕ ಹುದ್ದೆಗೆ ಜ್ಯೋತಿಷಿ ನೇಮಕವನ್ನು ಹಲವು ರಾಜಕೀಯ ನೇತಾರರು ಪ್ರಶ್ನಿಸಿದ್ದರು. ಅದರ ಬೆನ್ನಲ್ಲೇ ನೇಮಕ ಆದೇಶ ಹಿಂದಕ್ಕೆ ಪಡೆಯಲಾಗಿದೆ.--
ವಿಜಯ್‌ಗೆ ಮೊದಲ ಬಿಸಿ:ಜ್ಯೋತಿಷಿ ನೇಮಕ ರದ್ದು!
ಜ್ಯೋತಿಷಿ ರಿಕಿ ರಾಧನ್ ಪಂಡಿತ್ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿಕಾರಿಯಾಗಿ ನೇಮಿಸಿಕೊಂಡಿದ್ದ ತಮಿಳುನಾಡು ನೂತನ ಸಿಎಂ ವಿಜಯ್, ಒಂದೇ ದಿನದಲ್ಲಿ ನೇಮಕಾತಿ ರದ್ದು ಮಾಡಿದ್ದಾರೆ. ಮಿತ್ರ ಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಿಕಿ ನೇಮಕ ರದ್ದಾಗಿದೆ.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.