ಎಐನಿಂದ ರಚಿಸಿದ ಅಸ್ತಿತ್ವದಲ್ಲಿಲ್ಲದ, ನಕಲಿ ಮತ್ತು ಕಾಲ್ಪನಿಕ ತೀರ್ಪುಗಳನ್ನು ಸಹಿಸಲು ಸಾಧ್ಯವಿಲ್ಲ. ಇಂಥ ತೀರ್ಪುಗಳು ಬಹಳ ಅಪಾಯಕಾರಿ. ಅದು ನ್ಯಾಯದ ಜೀವನಾಡಿಯನ್ನೇ ನಾಶಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀಕ್ಷ್ಣವಾಗಿ ನುಡಿದಿದೆ.
-ಎಐ ಬಳಸಿ ನೀಡಿದ್ದ ಎನ್‌ಸಿಎಲ್‌ಟಿ ಆದೇಶ ರದ್ದುಪಡಿಸಿದ ಕೋರ್ಟ್
-ಇಂಥ ಕ್ರಮ ನ್ಯಾಯದ ಜೀವನಾಡಿಯನ್ನೇ ನಾಶಪಡಿಸುತ್ತದೆ: ಗರಂಪಿಟಿಐ ನವದೆಹಲಿಎಐನಿಂದ ರಚಿಸಿದ ಅಸ್ತಿತ್ವದಲ್ಲಿಲ್ಲದ, ನಕಲಿ ಮತ್ತು ಕಾಲ್ಪನಿಕ ತೀರ್ಪುಗಳನ್ನು ಸಹಿಸಲು ಸಾಧ್ಯವಿಲ್ಲ. ಇಂಥ ತೀರ್ಪುಗಳು ಬಹಳ ಅಪಾಯಕಾರಿ. ಅದು ನ್ಯಾಯದ ಜೀವನಾಡಿಯನ್ನೇ ನಾಶಪಡಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀಕ್ಷ್ಣವಾಗಿ ನುಡಿದಿದೆ. ಇದೇ ವೇಳೆ, ಎಐ ಬಳಸಿ ನಕಲಿ ತೀರ್ಪು ನೀಡಿದ ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್‌ನ (ಎನ್‌ಸಿಎಲ್‌ಟಿ) ಆದೇಶವನ್ನೇ ರದ್ದುಗೊಳಿಸಿದೆ. ಪೂಜಾ ರಮೇಶ್ ಸಿಂಗ್ ಮತ್ತು ಜಮ್ಮು-ಕಾಶ್ಮೀರ ಬ್ಯಾಂಕ್ ನಡುವಿನ ದಿವಾಳಿತನ ಪ್ರಕರಣದಲ್ಲಿ, ಎನ್‌ಸಿಎಲ್‌ಟಿಯ ಮುಂಬೈ ಪೀಠ ಎಐ ಬಳಸಿ ತೀರ್ಪು ನೀಡಿತ್ತು. ಬಳಿಕ ತೀರ್ಪಿನಲ್ಲಿ ಉಲ್ಲೇಖಿಸಿದ ಅಂಶಗಳು ಸಂಪೂರ್ಣ ನಕಲಿ ಎಂದು ತಿಳಿದುಬಂದಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ. ಎಸ್. ನರಸಿಂಹ ಹಾಗೂ ನ್ಯಾ. ಅಲೋಕ್ ಆರಾಧೆ ಅವರ ಪೀಠ, ‘ಕಾನೂನು ಕ್ಷೇತ್ರದಲ್ಲಿ ಎಐನಿಂದ ನಕಲಿ, ಅಸ್ತಿತ್ವದಲ್ಲಿಲ್ಲದ ಮತ್ತು ಕಾಲ್ಪನಿಕ ಅಂಶಗಳನ್ನು ಸೃಷ್ಟಿಸಿ ಅವುಗಳನ್ನು ತೀರ್ಪುಗಳಂತೆ ಬಳಸುವುದು ಮಿಥೈಲ್ ಐಸೋಸಯನೇಟ್ ಅನಿಲ ಬಿಡುಗಡೆ ಮಾಡಿದಂತೆ. ಅದು ಕಣ್ಣಿಗೆ ಕಾಣುವುದಿಲ್ಲ, ಆದರೆ ಬಹಳ ಅಪಾಯಕಾರಿ. ಅದು ನ್ಯಾಯದ ಜೀವನಾಡಿಯನ್ನೇ ನಾಶಪಡಿಸುತ್ತದೆ. ಕೋರ್ಟುಗಳು ಎಐನ ನಕಲಿ ತೀರ್ಪುಗಳನ್ನು ಉಲ್ಲೇಖಿಸುವುದನ್ನು ಅಥವಾ ಬಳಸುವುದನ್ನು ಸಹಿಸಲಾಗದು’ ಎಂದು ಸ್ಪಷ್ಟಪಡಿಸಿದೆ.