ಒಂದೇ ದಿನದಲ್ಲಿ11 ಲಕ್ಷ ಸಸಿ ನೆಟ್ಟು ವಿಶ್ವ ದಾಖಲೆ

| Published : Jul 15 2024, 01:46 AM IST / Updated: Jul 15 2024, 05:03 AM IST

ಸಾರಾಂಶ

ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ‘ತಾಯಿಯ ಹೆಸರಲ್ಲಿ ಒಂದು ಸಸಿ’ ನೆಡುವಂತೆ ಕರೆ ನೀಡಿದ ಭಾಗವಾಗಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ವಿಶ್ವ ದಾಖಲೆ ನಿರ್ಮಿಸಲಾಗಿದೆ.

ಇಂದೋರ್: ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ‘ತಾಯಿಯ ಹೆಸರಲ್ಲಿ ಒಂದು ಸಸಿ’ ನೆಡುವಂತೆ ಕರೆ ನೀಡಿದ ಭಾಗವಾಗಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ಒಂದೇ ದಿನದಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ವಿಶ್ವ ದಾಖಲೆ ನಿರ್ಮಿಸಲಾಗಿದೆ.

ಈ ಮೊದಲು ಅಸ್ಸಾಂನಲ್ಲಿ ಒಂದು ದಿನದಲ್ಲಿ 9.26 ಲಕ್ಷ ಸಸಿ ನೆಟ್ಟು ದಾಖಲೆ ನಿರ್ಮಿಸಲಾಗಿತ್ತು. ಆ ದಾಖಲೆಯನ್ನು ಈಗ ಮುರಿಯಲಾಗಿದೆ.

ಗಡಿ ಭದ್ರತಾ ಪಡೆಯ ರೇವತಿ ಫೈರಿಂಗ್ ರೇಂಜ್ ಮೈದಾನದಲ್ಲಿ ಗಿಡ ನೆಡಲಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘11 ಲಕ್ಷ ಸಸಿ ನೆಡುವ ಮೂಲಕ ಇಂದೋರ್‌ನ ಜನ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ’ ಎಂದು ಹೇಳಿದ್ದಾರೆ.ಎಲ್ಲಾ ವಯಸ್ಸಿನ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮದ್ಯಾಹ್ನದ ಹೊತ್ತಿಗೆ 7 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಸಂಜೆ ವೇಳೆಗೆ ಸಂಖ್ಯೆ 11 ಲಕ್ಷ ದಾಟಿತು ಎಂದು ಇಂದೋರ್‌ನ ಮೇಯರ್ ಪುಷ್ಯಮಿತ್ರ ಭಾರ್ಗವ ಹೇಳಿದ್ದಾರೆ. ಈ ಸಂದರ್ಭದಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಸಲಹೆಗಾರ ನಿಶ್ಚಲ್ ಬರೋಟ್ ಹಾಗೂ 300 ಜನ ಸ್ವಯಂಸೆವಕರು ಉಪಸ್ಥಿತರಿದ್ದರು.