ಸಾರಾಂಶ
, ವಕೀಲಿ ವೃತ್ತಿಯಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸುವ ನೀಟ್ಟಿನಲ್ಲಿ ಪ್ರಯತ್ನಿಸ ಬೇಕು. 
ಕನ್ನಡಪ್ರಭ ವಾರ್ತೆ ಚಿಕ್ಕೋಡಿಶಿಸ್ತಿನ ವಕೀಲರಾಗಲು ವಿದ್ಯಾರ್ಥಿಗಳಿಗೆ ಉತ್ತಮ ನಡುವಳಿಕೆ ಅವಶ್ಯಕ ಎಂದು ಬೆಳಗಾವಿಯ ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಸಮಿನಾ ನಾಹಿದ್ ಬೇಗ ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯ, ಚಿಕ್ಕೋಡಿಯಲ್ಲಿ ಅಣಕು ನ್ಯಾಯಾಲಯ, ವಿಚಾರಣೆ ವಕೀಲ ಮತ್ತು ನ್ಯಾಯಾಲಯದ ನಡುವಳಿಕೆ ದೃಷ್ಟಿಕೋನ ಕಾರ್ಯಕ್ರಮ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ವಕೀಲಿ ವೃತ್ತಿಯಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸುವ ನೀಟ್ಟಿನಲ್ಲಿ ಪ್ರಯತ್ನಿಸ ಬೇಕು ಎಂದರು.ಕೆ.ಎಲ್.ಇ. ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಡಿ.ಬಿ. ಸೊಲಾಪುರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಣಕು ನ್ಯಾಯಾಲಯದ ಮಹಾವಿದ್ಯಾಲಯದ ಉಪನ್ಯಾಸಕ ವಿ. ಎಸ್. ಬಿಳಗಿ, ದೀಪಾಲಿ ಪಾಟೀಲ, ಎಸ್.ಬಿ. ನಾಗರಾಳೆ, ಪ್ರೀಯಾಂಕ ಚವಾನ, ದಿವ್ಯಾ ರಾವಟೆ, ಎಸ್.ಡಿ.ಕಾಜಿ, ಪ್ರಭಾಕರ ಕಮತೆ, ಕೆ.ಎಲ್. ಕಾಂಬಳೆ, ಎಂ.ಎಂ. ಪಾಟಿಲ, ಆರ್.ಎಸ್. ಮುರದುಂಡೆ, ಎಸ್. ಡಿ. ಶಿರಹಟ್ಟಿ ಇದ್ದರು. ಎಲ್.ಎ. ಸರದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದಶಿ ದಿತ್ಯಾ. ಪಾಟೀಲ ವಂದಿಸಿದರು.
;Resize=(128,128))
;Resize=(128,128))
;Resize=(128,128))