ಸಾರಾಂಶ
ಸಂಘಟನೆಯ ಪರಿಕಲ್ಪನೆಯ ಆಧಾರದ ಮೇಲೆ ನಮ್ಮ ಪಕ್ಷದ ಕಾರ್ಯವನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ನಾವು ಯಾವಾಗಲೂ ತತ್ವಗಳ ಆಧಾರದ ಮೇಲೆ ನಮ್ಮ ನೀತಿಗಳನ್ನು ರೂಪಿಸಿಕೊಂಡಿದ್ದೇವೆ. ದೇಶ ಮತ್ತು ಅದರ ಜನರ ಹಿತದೃಷ್ಟಿಯಿಂದ ನಾವು ಅತ್ಯಂತ ಕಠಿಣ ಹೋರಾಟಗಳನ್ನು ಮಾಡಿದ್ದೇವೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ತನ್ನ ಕಾಲ ಮೇಲೆ ಬಲವಾಗಿ ನಿಂತಿದೆ ಮತ್ತು ಅದಕ್ಕೆ ಯಾವುದೇ ಬೆಂಬಲ ಅಗತ್ಯವಿಲ್ಲ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬೂತ್ ಮಟ್ಟದ ಅಧ್ಯಕ್ಷ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಬಹುದಾದ ದೇಶದ ಏಕೈಕ ರಾಜಕೀಯ ಪಕ್ಷ ಬಿಜೆಪಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.ನಗರದ ಸಂಸದರ ಗೃಹ ಕಚೇರಿಯಲ್ಲಿನ ಸೋಮವಾರ ಸಂಜೆ ನಡೆದ ಭಾರತೀಯ ಜನತಾ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಬೂತ್ ಮಟ್ಟದ ಏಜೆಂಟರ ಕಚೇರಿಯ ಸಭೆಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ ಬೂತ್ ಅಧ್ಯಕ್ಷ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಬಹುದು ಎಂದರು.ಪ್ರಜಾಪ್ರಭುತ್ವ ತತ್ವ ಪಾಲನೆ
ಇದಕ್ಕೆ ದೊಡ್ಡ ಉದಾಹರಣೆ ಎಂದರೆ ಇದುವರೆಗೂ ಬೂತ್ ಅಧ್ಯಕ್ಷರಾಗಿ ನಿರ್ವಹಿಸಿರುವವರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲು ಅವಕಾಶ ನೀಡಿರುವುದು. ಇದು ನಮ್ಮ ಪಕ್ಷವು ವಂಶಪಾರಂಪರ್ಯ ತತ್ವಗಳ ಮೇಲೆ ಕೆಲಸ ಮಾಡುವುದಿಲ್ಲ, ಬದಲಾಗಿ ಪ್ರಜಾಪ್ರಭುತ್ವ ತತ್ವಗಳ ಮೇಲೆ ಕೆಲಸ ಮಾಡುತ್ತಿದೆ ಎಂಬುದನ್ನು ಹೇಳುತ್ತದೆ " ಎಂದರು.ಪಕ್ಷದ ತತ್ವಗಳ ಮೇಲೆ ಶ್ರಮಿಸುವ ಮತ್ತು ಮುಂದುವರಿಯುವವನು, ಸಾಧನೆ ಮಾಡುವವನು ಪಕ್ಷದಲ್ಲಿ ದೊಡ್ಡ ನಾಯಕನಾಗಬಹುದು. ದೇಶದಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುವುದಿಲ್ಲ ಮತ್ತು ಕಾರ್ಯಕ್ಷಮತೆಯ ರಾಜಕೀಯವನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ನಾವು ಸಾಬೀತುಪಡಿಸಿದ್ದೇವೆ. ಪ್ರಧಾನಿ ನರೇಂದ್ರಮೋದಿ ಜಿ ಇದಕ್ಕೆ ದೊಡ್ಡ ಉದಾಹರಣೆ ಎಂದರು.ಜನತೆಗಾಗಿ ಹೋರಾಟ
ಸಂಘಟನೆಯ ಪರಿಕಲ್ಪನೆಯ ಆಧಾರದ ಮೇಲೆ ನಮ್ಮ ಪಕ್ಷದ ಕಾರ್ಯವನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ನಾವು ಯಾವಾಗಲೂ ತತ್ವಗಳ ಆಧಾರದ ಮೇಲೆ ನಮ್ಮ ನೀತಿಗಳನ್ನು ರೂಪಿಸಿಕೊಂಡಿದ್ದೇವೆ. ದೇಶ ಮತ್ತು ಅದರ ಜನರ ಹಿತದೃಷ್ಟಿಯಿಂದ ನಾವು ಅತ್ಯಂತ ಕಠಿಣ ಹೋರಾಟಗಳನ್ನು ಮಾಡಿದ್ದೇವೆ. ಈ ಮೂರು ಉದ್ದೇಶಗಳನ್ನು ಪೂರೈಸುವ ಸ್ಥಳ ಬಿಜೆಪಿ ಕಚೇರಿ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ತನ್ನ ಕಾಲ ಮೇಲೆ ಬಲವಾಗಿ ನಿಂತಿದೆ ಮತ್ತು ಅದಕ್ಕೆ ಯಾವುದೇ ಬೆಂಬಲ ಅಗತ್ಯವಿಲ್ಲ ಎಂದರು.ಸ್ವದೇಶಿ ನಮ್ಮ ಜೀವನ ಮಂತ್ರ
ಬಿಎಲ್ಎ ಸಭೆಗೂ ಮುನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಕಾರ್ಯಾಗಾರ ಹಾಗೂ ಮಹಿಳಾ ಮತ್ತು ಯುವ ಸಮ್ಮೇಳನದಲ್ಲಿ ಪಾಲ್ಗೊಂಡು ಆತ್ಮನಿರ್ಭರ ಭಾರತ ಸಂಕಲ್ಪದ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿರುವಂತೆ ಸ್ವದೇಶಿ ನಮ್ಮ ಜೀವನ ಮಂತ್ರ ಆಗಬೇಕು. ನಾವೆಲ್ಲರೂ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ನಮ್ಮ ದೇಶದಲ್ಲೇ ತಯಾರಾದ ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು. ನಾವು ಸ್ವದೇಶಿ ಸಂಶೋಧನೆ, ಸ್ವದೇಶಿ ವಿನ್ಯಾಸ ಮತ್ತು ಸ್ವದೇಶಿ ಉತ್ಪಾದನೆಯ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ರೂಪಿಸಬೇಕು ಎಂದರು. ನಾವು ಬಳಸುವ ಆಹಾರ ಪದಾರ್ಥಗಳು, ಬಟ್ಟೆಗಳು, ವಾಹನಗಳು, ಯಂತ್ರೋಪಕರಣಗಳು ಎಲ್ಲವೂ ಸ್ವದೇಶಿ ಆದಾಗ ಮಾತ್ರ ವಿಕಸಿತ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಸಾಧ್ಯ. ಅದಷ್ಟೂ ಸ್ವದೇಶಿ ವಸ್ತುಗಳನ್ನೇ ಬಳಸುವ ಸಂಕಲ್ಪ ಮಾಡುವ ಮೂಲಕ ಪ್ರತಿಯೊಬ್ಬ ಭಾರತೀಯನ ಪ್ರಗತಿಗೆ ಕೈಜೋಡಿಸೋಣ ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ರಾಜ್ಯ ಬಿಎಲ್ಎ ಸಂಚಾಲಕ ಜಗದೀಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್.ಮುರಳೀಧರ್, ಕೆ.ಬಿ. ಮುರಳಿ, ಮಧು ರವಿನಾರಾಯಣರೆಡ್ಡಿ, ಮುಖಂಡರಾದ ಸೀಕಲ್ ಆನಂದಗೌಡ, ಮರಳಕುಂಟೆ ಕೃಷ್ಣಮೂರ್ತಿ, ಆರ್.ಹೆಚ್.ಎನ್.ಅಶೋಕ್ ಕುಮಾರ್, ಸಂತೋಷ್, ಮಧುಚಂದ್ರ, ಮಂಚನಬಲೆ ಶ್ರೀನಿವಾಸ್, ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))