ಸಾರ್ವಜನಿಕರು ಪೌರಪ್ರಜ್ಞೆ ಬೆಳೆಸಿಕೊಳ್ಳಬೇಕು

| Published : Nov 05 2025, 12:15 AM IST

ಸಾರ್ವಜನಿಕರು ಪೌರಪ್ರಜ್ಞೆ ಬೆಳೆಸಿಕೊಳ್ಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಲ್ಲಿ ಕಸ ನೋಡುವ ದೃಷ್ಟಿ ಬದಲಾಯಿಸುವ ಕೆಲಸವನ್ನು ಸಮುದಾಯ ಸಂಘಟಕರು ಮಾಡಬೇಕಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಕೆಲಸ ಮಾಡುತ್ತಿರುತ್ತಾರೆ ಅದನ್ನು ಸಮುದಾಯದ ಸಂಘಟಕರು ಗಮನಿಸಿ ಅವರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಇನ್ನೊಮ್ಮೆ ಕಸ ಎಲ್ಲಿಂದರಲ್ಲಿ ಸುರಿಯದಂತೆ ಮಾಹಿತಿ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಸಾರ್ವಜನಿಕರು ಪೌರಪ್ರಜ್ಞೆ ಬೆಳೆಸಿಕೊಳ್ಳಬೇಕು, ಕಸವನ್ನು ಮೂಲದಲ್ಲೇ ಬೇರ್ಪಡಿಸಿ ವಿಲೇವಾರಿ ಮಾಡಬೇಕು. ಕುರಿತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಘಟಕರು ಯಾವ ರೀತಿ ಒಣ ಕಸ ಮತ್ತು ಹಸಿಕಸ ವಿಂಗಡಣೆ ಮಾಡಬೇಕು ಮತ್ತು ಅದರಿಂದ ಸಮಾಜದಲ್ಲಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂಬುದನ್ನು ಜಿಲ್ಲಾಧಿಕಾರಿ ಎಂ.ಆರ್.ರವಿ ವಿವರಿಸಿದರು. ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಕೋಲಾರ ಜಿಲ್ಲಾ ನಗರಾಭಿವೃದ್ಧಿ ಕೋಶ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ ಮಿಷನ್ ೨.೦ ಅಡಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಅಧಿಕಾರಿ-ಸಿಬ್ಬಂದಿ ವರ್ಗದವರಿಗೆ ಮತ್ತು ಐ.ಇ.ಸಿ ಚಟುವಟಿಕೆಗಾಗಿ ನೇಮಕವಾದ ಸಮುದಾಯ ಸಂಘಟಕರಿಗೆ ಜಿಲ್ಲಾ ಮಟ್ಟದ ಘನ ತ್ಯಾಜ್ಯ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು.ಪರಿಸರ ಮಾಲಿನ್ಯ ತಡೆಗಟ್ಟಿ

ಘನ ತ್ಯಾಜ್ಯ ನಿರ್ವಹಣೆ ಕುರಿತು ಪೌರಕಾರ್ಮಿಕರಿಗೆ ಕಾರ್ಯಾಗಾರ ಏರ್ಪಡಿಸುವುದು ಅತ್ಯಂತ ಮುಖ್ಯ ವಿಷಯವಾಗಿದೆ, ಈ ಕಾರ್ಯಾಗಾರವು ಪೌರಕಾರ್ಮಿಕರಿಗೆ ಘನ ತ್ಯಾಜ್ಯ ನಿರ್ವಹಣೆಯ ವಿಧಾನಗಳು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತರಬೇತಿ ನೀಡುತ್ತದೆ. ಘನ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು, ಘನ ತ್ಯಾಜ್ಯದ ಸುರಕ್ಷಿತ ವಿಲೇವಾರಿ ಖಚಿತಪಡಿಸುವುದು, ಪರಿಸರ ಮಾಲಿನ್ಯ ತಡೆಗಟ್ಟುವುದು, ಸಾರ್ವಜನಿಕ ಆರೋಗ್ಯ ರಕ್ಷಿಸುವುದು ಘನ ತ್ಯಾಜ್ಯ ನಿರ್ವಹಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಲ್ಲಿ ಕಸ ನೋಡುವ ದೃಷ್ಟಿ ಬದಲಾಯಿಸುವ ಕೆಲಸವನ್ನು ಸಮುದಾಯ ಸಂಘಟಕರು ಮಾಡಬೇಕಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಕೆಲಸ ಮಾಡುತ್ತಿರುತ್ತಾರೆ ಅದನ್ನು ಸಮುದಾಯದ ಸಂಘಟಕರು ಗಮನಿಸಿ ಅವರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಇನ್ನೊಮ್ಮೆ ಕಸ ಎಲ್ಲಿಂದರಲ್ಲಿ ಸುರಿಯದಂತೆ ಮಾಹಿತಿ ನೀಡಬೇಕು ಎಂದರು.

ಹಸಿ- ಒಣ ಕಸ ಬೇರ್ಪಡಿಸಿ

ನಗರಸಭೆಯ ಕಸ ಸಂಗ್ರಹಿಸುವ ವಾಹನವು ನಿಮ್ಮ ಮನೆಗಳ ಬಳಿ ಬಂದಾಗ ಹಸಿ ಕಸ ಮತ್ತು ಒಣಕಸ ಬೇರ್ಪಡಿಸಿ ವಾಹನಕ್ಕೆ ನೀಡಬೇಕೆಂಬ ಮಾಹಿತಿ ಎಲ್ಲಾ ಸಮುದಾಯದ ಸಂಘಟಕರು ತಮಗೆ ನೀಡಿರುವ ವ್ಯಾಪ್ತಿಯ ಜನರಿಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಮಾಡಬೇಕು ಮತ್ತು ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು ನಾಯಕ ಕಸವನ್ನು ಬೀದಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸ್ಥಳೀಯ ಸಂಸ್ಥೆಗಳು ಕಸ ಸಂಗ್ರಹಣೆ ಮಾಡಲು ಕ್ರಿಯಾಯೋಚನೆ ರೂಪಿಸಿಕೊಳ್ಳಬೇಕು ಮತ್ತು ಕಸವನ್ನು ಸಂಗ್ರಹಣೆ ಮಾಡಿ ಒಂದು ಕಡೆಯಿಂದ ಸಂಗ್ರಹಿಸಿ ಅದನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ಸಾಗಿಸಬಾರದು ಇದು ಕಾನೂನು ಬಾಹಿರವಾಗುತ್ತದೆ ಆದ್ದರಿಂದ ಎಲ್ಲ ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿ ಗ್ರಾಪಂ ಅಧಿಕಾರಿಗಳು ಟಾರ್ಪಲ್ ಬಳಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಾವಯವ ಗೊಬ್ಬರ ಉತ್ಪಾದನೆಕೋಲಾರ ನಗರಸಭೆಯು ಈಗಾಗಲೇ ನಗರದ ತ್ಯಾಜ್ಯ ವಿಲೇವಾರಿ ಮಾಡಿ ರೈತರಿಗೆ ಬೇಕಾದ ಸಾವಯವ ಗೊಬ್ಬರ ಒದಗಿಸಿ ಇದರಿಂದ ನಗರಸಭೆಗೆ ಸಂಪನ್ಮೂಲವು ಬರುತ್ತಿದೆ. ಈ ರೀತಿಯ ಕೆಲಸ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು ಆದ್ದರಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳು ಮಾಡಬೇಕಾಗಿದೆ ಎಂದರು.

ಸಾಮಾಜಿಕ ಜವಾಬ್ದಾರಿನಮ್ಮ ನಗರಗಳನ್ನು ಹೆಚ್ಚು ಶುದ್ಧವಾಗಿ ಮತ್ತು ಸ್ವಚ್ಛ ಸುಂದರವಾಗಿ ಕಾಪಾಡಿಕೊಳ್ಳಬೇಕು ಶುದ್ಧವಾದ ನೀರು ಗಾಳಿ ಇವೆಲ್ಲ ನಮ್ಮ ಮೂಲಭೂತ ಹಕ್ಕುಗಳಾಗಿವೆ. ಅದನ್ನು ನಾವು ಹಾಳು ಮಾಡುವುದು ಬೇಡ ನಾವು ಯಾರನ್ನು ಕೇಳಬೇಕು. ಇದು ನಮ್ಮ ಸಾಮಾಜಿಕ ಜವಾಬ್ದಾರಿ ಆದ್ದರಿಂದ ಆರೋಗ್ಯಕರ ನಗರವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್, ಕೋಲಾರ ನಗರಸಭಾ ಆಯುಕ್ತ ನವೀನ್ ಚಂದ್ರ ಇದ್ದರು.