ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ 1,50,184 ಮತದಾರರು: ಕೃಷ್ಣ ಭಾಜಪೇಯಿ

| Published : Jan 02 2024, 02:15 AM IST

ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ 1,50,184 ಮತದಾರರು: ಕೃಷ್ಣ ಭಾಜಪೇಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು ಕಲಬುರಗಿಯಲ್ಲಿ ಹೆಚ್ಚು, ಯಾದಗಿರಿಯಲ್ಲಿ ಕಡಿಮೆ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ 1.11.2023ರಂತೆ ಅಂತಿಮ ಮತದಾರರರ ಪಟ್ಟಿಯನ್ನು ಪ್ರಕಟಗೊಳಿಸಿದ್ದು, 95,184 ಪುರುಷರು, 54,980 ಮಹಿಳೆಯರು ಹಾಗೂ ಇತರೆ 20 ಸೇರಿ ಒಟ್ಟಾರೆ 1,50,184 ಜನರು ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಕಳೆದ ನ.23ಕ್ಕೆ ಪ್ರಕಟಿಸಿದ ಕರಡು ಪಟ್ಟಿಯಲ್ಲಿ 89,162 ಪುರುಷರು, 51,241 ಮಹಿಳೆಯರು ಹಾಗೂ ಇತರೆ 20 ಸೇರಿ ಒಟ್ಟಾರೆ 1,40,423 ಜನ ಮತದಾರರಿದ್ದರು. ಇದರಲ್ಲಿ ಎರಡೆರಡು ಕಡೆ ಹೆಸರು ನೋಂದಣಿ ಮಾಡಿಕೊಂಡ 1,452 ಪುರುಷರು, 781 ಮಹಿಳೆಯರು ಹಾಗೂ 1 ಇತರೆ ಸೇರಿದಂತೆ ಒಟ್ಟು 2,234 ದ್ವಿಮತದಾರರನ್ನು ತೆಗೆದು ಹಾಕಲಾಯಿತು. ನಿರಂತರ ಪ್ರಕ್ರಿಯೆಯಲ್ಲಿ 7474 ಪುರುಷ, 4520 ಮಹಿಳೆಯರು ಹಾಗೂ 1 ಇತರೆ ಸೇರಿದಂತೆ ಒಟ್ಟು 11,955 ಮತದಾರರರು ಹೆಸರು ಸೇರ್ಪಡೆ ಮಾಡಿಕೊಂಡ ಪರಿಣಾಮ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟಾರೆ 1,50,184 ಜನ ಸೇರಿದ್ದಾರೆ.

2017ನೇ ಸಾಲಿನ ಕರಡು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಅವಲೋಕಿಸಿದಾಗ ಪ್ರಸ್ತುತ ಅಂತಿಮ ಮತದಾರರ ಪಟ್ಟಿಯಲ್ಲಿ ಕಳೆದ ಬಾರಿಗಿಂತ ಶೇ.185 ಮತದಾರರ ನೊಂದಣಿಯಲ್ಲಿ ವೃದ್ಧಿಯಾಗಿರುವುದು ವಿಶೇಷತೆಯಾಗಿರುತ್ತದೆ.

ಕಲಬುರಗಿಯಲ್ಲಿ ಹೆಚ್ಚು, ಯಾದಗಿರಿಯಲ್ಲಿ ಕಡಿಮೆ ನೋಂದಣಿ:

ಅಂತಿಮ ಮತದಾರರ ಪಟ್ಟಿಯಂತೆ ಕ್ಷೇತ್ರದ ಜಿಲ್ಲಾವಾರು ಅಂಕಿ ಸಂಖ್ಯೆ ನೋಡಿದಾಗ ಕಲಬುರಗಿ ಜಿಲ್ಲೆಯಲ್ಲಿ 21,990 ಪುರುಷ, 15,272 ಮಹಿಳೆ, ಇತರೆ-5 ಸೇರಿ 37,267 ಅತಿ ಹೆಚ್ಚು ಜನ ನೋಂದಣಿಯಾದರೆ, ಯಾದಗಿರಿ ಜಿಲ್ಲೆಯಲ್ಲಿ 10,122 ಪುರುಷ, 4,525 ಮಹಿಳೆ, ಇತರೆ-3 ಸೇರಿ 14,650 ಜನ ಅತಿ ಕಡಿಮೆ ನೋಂದಣಿಯಾಗಿದೆ.

ಉಳಿದಂತೆ ಬೀದರ್ ಜಿಲ್ಲೆಯಲ್ಲಿ 16,142 ಪುರುಷ, 9,849 ಮಹಿಳೆ ಸೇರಿ 25,991, ಬಳ್ಳಾರಿ ಜಿಲ್ಲೆಯಲ್ಲಿ 11,922 ಪುರುಷ, 7,092 ಮಹಿಳೆ, ಇತರೆ-4 ಸೇರಿ 19,018, ರಾಯಚೂರು ಜಿಲ್ಲೆಯಲ್ಲಿ 12,947 ಪುರುಷ, 6,442 ಮಹಿಳೆ, ಇತರೆ-5 ಸೇರಿ 19,394, ಕೊಪ್ಪಳ ಜಿಲ್ಲೆಯಲ್ಲಿ 10,983 ಪುರುಷ, 5,881 ಮಹಿಳೆ, ಇತರೆ-1 ಸೇರಿ 16,865 ಹಾಗೂ ವಿಜಯನಗರ ಜಿಲ್ಲೆಯಲ್ಲಿ 11,078 ಪುರುಷ, 5,919 ಮಹಿಳೆ, ಇತರೆ-2 ಸೇರಿ 16,999 ಜನ ಕರಡು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಕಲಬುರಗಿಯಲ್ಲಿ ಹೆಚ್ಚು 1,094 ಮತ್ತು ವಿಜಯನಗರದಲ್ಲಿ ಕಡಿಮೆ 21 ದ್ವಿಮತದಾರರ ಹೆಸರು ತೆಗೆದು ಹಾಕಲಾಗಿದೆ. ಇನ್ನೂ ಕ್ಷೇತ್ರದಲ್ಲಿ ಒಟ್ಟಾರೆ 160 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.