ಹೊಸದಾಗಿ 21,919 ಯುವ ಮತದಾರರು ಸೇರ್ಪಡೆ: ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ.

| Published : Jan 23 2024, 01:46 AM IST

ಹೊಸದಾಗಿ 21,919 ಯುವ ಮತದಾರರು ಸೇರ್ಪಡೆ: ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ.
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 21,919 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಪರಿಷ್ಕೃತ ಮತದಾರರ ಪಟ್ಟಿ ವಿತರಿಸಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 1726 ಮತಗಟ್ಟೆಗಳಿದ್ದು, ಒಟ್ಟು 15,91,208 ಮತದಾರರಿದ್ದಾರೆ. ಈ ಪೈಕಿ 7,88,051 ಪುರುಷ ಮತದಾರರು, 8,03,068 ಮಹಿಳಾ ಮತದಾರರು ಹಾಗೂ 89 ತೃತೀಯ ಲಿಂಗ ಮತದಾರರು ಇದ್ದಾರೆ. ಲಿಂಗಾನುಪಾತ ಪ್ರತಿ 1000 ಪುರುಷ ಮತದಾರರಿಗೆ 874 ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ ಒಟ್ಟು 21,919 ಯುವ ಮತದಾರರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಪರಿಷ್ಕೃತ ಮತದಾರರ ಪಟ್ಟಿ ವಿತರಿಸಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 1726 ಮತಗಟ್ಟೆಗಳಿದ್ದು, ಒಟ್ಟು 15,91,208 ಮತದಾರರಿದ್ದಾರೆ. ಈ ಪೈಕಿ 7,88,051 ಪುರುಷ ಮತದಾರರು, 8,03,068 ಮಹಿಳಾ ಮತದಾರರು ಹಾಗೂ 89 ತೃತೀಯ ಲಿಂಗ ಮತದಾರರು ಇದ್ದಾರೆ. ಲಿಂಗಾನುಪಾತ ಪ್ರತಿ 1000 ಪುರುಷ ಮತದಾರರಿಗೆ 874 ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದರು.

2023ರ ಅಕ್ಟೋಬರ್‌ 27ರಂದು ಪ್ರಚುರಪಡಿಸಿರುವ ಕರಡು ಮತದಾರರ ಪಟ್ಟಿ ಹಾಗೂ ಜನವರಿ 22ರಂದು ಪ್ರಚುರಪಡಿಸಿರುವ ಅಂತಿಮ ಮತದಾರರ ಪಟ್ಟಿಗೆ ಹೋಲಿಕೆ ಮಾಡಿದಾಗ ಜಿಲ್ಲೆಯಲ್ಲಿ ಒಟ್ಟು 21,919 ಮತದಾರರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಮತದಾರರ ಪೈಕಿ 5,647 ಪುರುಷ ಮತದಾರರು ಹಾಗೂ 16,270 ಮಹಿಳಾ ಮತದಾರರು ಹಾಗೂ 2 ತೃತೀಯ ಲಿಂಗ ಮತದಾರರು ಇದ್ದಾರೆ ಎಂದರು.

ಚುನಾವಣಾ ಆಯೋಗದ ನಿರ್ದೇಶನದಂತೆ 2023 ಅಕ್ಟೋಬರ್‌ 27 ರಿಂದ 2024ರ ಜನವರಿ 12ವರೆಗೆ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿತ್ತು. ಹಕ್ಕು ಮತ್ತು ಆಕ್ಷೇಪಣೆಗೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳು ನಿರ್ದೇಶನದಂತೆ 2023ರ ನವೆಂಬರ್‌ 18, 19, ಡಿಸೆಂಬರ್‌ 2 ಮತ್ತು 3 ರಂದು ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ 18 ರಿಂದ 19 ವಯಸ್ಸಿನೊಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಮತದಾರರ ಪಟ್ಟಿಗಳಲ್ಲಿ ಲಿಂಗಾನುಪಾತ ವ್ಯತ್ಯಾಸ ಸರಿದೂಗಿಸುವ ನಿಟ್ಟಿನಲ್ಲಿ 2023ರ ಡಿಸೆಂಬರ್‌ 1 ರಂದು ಮಹಿಳಾ ಮತದಾರರ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಂಡು 1,998 ಮಹಿಳಾ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಜಿಲ್ಲಾದ್ಯಂತ ಅಂತಿಮ ಮತದಾರರ ಪಟ್ಟಿಗಳನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ಪ್ರಚುರ ಪಡಿಸಲಾಗಿದೆ. ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಗಳಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾರ್ಯ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ಅಮರೇಶ ಪಮ್ಮಾರ, ಚುನಾವಣಾ ವಿಭಾಗದ ತಹಸೀಲ್ದಾರ್‌ ಪುರಂದರ, ಶಿರಸ್ತೇದಾರರಾದ ರಜಪೂತ, ಮಹೇಶ ಪಾಂಡವ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಯಲ್ಲಪ್ಪ ಸನಕ್ಯಾನವರ, ಆನಂದ ಶಿಲ್ಪಿ ಇತರರು ಉಪಸ್ಥಿತರಿದ್ದರು.

-------

ಮತಕ್ಷೇತ್ರವಾರು ಮತದಾರರ ವಿವರ: ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲಯಲ್ಲಿ ಒಟ್ಟು 15,91,208 ಮತದಾರರಿದ್ದು, ಇದರಲ್ಲಿ 7,88,051 ಪುರುಷ, 8,03,068 ಮಹಿಳಾ ಹಾಗೂ 89 ಇತರೆ ಮತದಾರರಿದ್ದಾರೆ. ಲಿಂಗಾನುಪಾತ ಪ್ರತಿ 1000 ಪುರುಷ ಮತದಾರರಿಗೆ 874 ಮಹಿಳಾ ಮತದಾರರಿದ್ದಾರೆ. ಮುಧೋಳ ಮೀಸಲು ಮತಕ್ಷೇತ್ರದಲ್ಲಿ 100517 ಪುರುಷ, 105257 ಮಹಿಳಾ ಮತದಾರರು, ಇತರೆ 6 ಸೇರಿ ಒಟ್ಟು 2,05,780 ಮತದಾರರಿದ್ದರೆ, ತೇರದಾಳ- 115655 ಪುರುಷ, 117003 ಮಹಿಳಾ, ಇತರೆ 13 ಸೇರಿ ಒಟ್ಟು 232671, ಜಮಖಂಡಿ-109117 ಪುರುಷ, 111014 ಮಹಿಳಾ, ಇತರೆ 7 ಸೇರಿ ಒಟ್ಟು 220138 ಇದ್ದಾರೆ. ಬೀಳಗಿ-114784 ಪುರುಷ, 118094 ಮಹಿಳಾ ಇತರೆ 16 ಸೇರಿ ಒಟ್ಟು 232894, ಬಾದಾಮಿ-112449 ಪುರುಷ, 111713 ಮಹಿಳಾ ಇತರೆ 14 ಸೇರಿ ಒಟ್ಟು 224176, ಬಾಗಲಕೋಟೆ-123276 ಪುರುಷ, 126089 ಮಹಿಳಾ, 20 ಇತರೆ ಸೇರಿ ಒಟ್ಟು 249385 ಹಾಗೂ ಹುನಗುಂದ ಕ್ಷೇತ್ರದಲ್ಲಿ 112253 ಪುರುಷ, 113898 ಮಹಿಳಾ, 13 ಇತರೆ ಸೇರಿ ಒಟ್ಟು 226164 ಮತದಾರರಿದ್ದಾರೆ.