ರಾಮನ ಆದರ್ಶಗಳು ಮೈಗೂಡಿ ನೆಮ್ಮದಿ, ಬದುಕು ರೂಪಿಸಿಕೊಳ್ಳಿ: ಡಾ.ಚೆನ್ನವೀರರು

| Published : Jan 23 2024, 01:46 AM IST

ರಾಮನ ಆದರ್ಶಗಳು ಮೈಗೂಡಿ ನೆಮ್ಮದಿ, ಬದುಕು ರೂಪಿಸಿಕೊಳ್ಳಿ: ಡಾ.ಚೆನ್ನವೀರರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಲೋಕಾರ್ಪಣೆಯಾದ ಭವ್ಯ ರಾಮಮಂದಿರ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಈ ಸುದಿನ ಭಾರತ ಮತ್ತು ವಿಶ್ವದ ರಾಮ ಭಕ್ತರಿಗೆಲ್ಲ ವರ್ಣನೆಗೆ ನಿಲುಕದ ಅತಿ ಆನಂದದ ಸುವರ್ಣ ದಿನವಾಗಿದೆ. ರಾಮನ ಶ್ರೇಷ್ಠ ಆದರ್ಶಗಳು ಮೈಗೂಡಿಸಿಕೊಂಡು ಶಾಂತಿ, ನೆಮ್ಮದಿ ಬದುಕು ರೂಪಿಸಿಕೊಳ್ಳಿ ಎಂದು ಡಾ.ಚೆನ್ನವೀರ ಶಿವಚಾರ್ಯರು ನುಡಿದರು.

ಬಸವಕಲ್ಯಾಣ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಲೋಕಾರ್ಪಣೆಯಾದ ಭವ್ಯ ರಾಮಮಂದಿರ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಈ ಸುದಿನ ಭಾರತ ಮತ್ತು ವಿಶ್ವದ ರಾಮ ಭಕ್ತರಿಗೆಲ್ಲ ವರ್ಣನೆಗೆ ನಿಲುಕದ ಅತಿ ಆನಂದದ ಸುವರ್ಣ ದಿನವಾಗಿದೆ. ರಾಮನ ಶ್ರೇಷ್ಠ ಆದರ್ಶಗಳು ಮೈಗೂಡಿಸಿಕೊಂಡು ಶಾಂತಿ, ನೆಮ್ಮದಿ ಬದುಕು ರೂಪಿಸಿಕೊಳ್ಳಿ ಎಂದು ಡಾ.ಚೆನ್ನವೀರ ಶಿವಚಾರ್ಯರು ನುಡಿದರು.

ಸುಕ್ಷೇತ್ರ ಹಾರಕೂಡದ ದಾಸೋಹ ರತ್ನ ಮಹಾಮನೆಯಲ್ಲಿ ಆಯೋಜಿಸಿದ ರಾಮ ಪೂಜೆ, ರಾಮೋತ್ಸವದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಶುಭ ಮುಹೂರ್ತ ಪ್ರತಿ ಭಾರತೀಯನಲ್ಲೂ, ಸತ್ಯ ವಾಕ್ಯ ಪರಿಪಾಲಕ, ರಾಮನ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ರಾಮನಲ್ಲಿರುವ ಸಮಚಿತ್ತ, ಸ್ಥಿತಪ್ರಜ್ಞತೆ ಆತ್ಮದರ್ಶನ ಮತ್ತು ಜೀವನ ದರ್ಶನದ ಇವೆಲ್ಲವುಗಳು ಇಂದಿಗೂ ಪ್ರಸ್ತುತ, ಹಾಗಾಗಿ ರಾಮ ಮನುಕುಲದ ಮುಕುಟಪ್ರಾಯ ಎನ್ನುವಲ್ಲಿ ಎರಡು ಮಾತಿಲ್ಲ ಎಂದರು. ಅಯೋಧ್ಯೆಯಲ್ಲಿ ಪ್ರತಿಷ್ಠಾಪಿತಗೊಂಡಿರುವ ರಾಮಲಲ್ಲಾ ನಿರಂತರ ನಂದಾದೀಪವಾಗಿ ದೇಶವನ್ನು ಬೆಳಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಗನ್ನಾಥ ಪಾಟೀಲ ಮಂಠಾಳ, ಮಲ್ಲಿನಾಥ ಹಿರೇಮಠ, ಹೇಮಲತಾ ಮಲ್ಲಿನಾಥ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.