ಸಾರಾಂಶ
ಹವಾಮಾನ ವೈಪರಿತ್ಯದಿಂದ ಲಕ್ಷಾಂತರ ಹಾನಿಯಾಗಿರುವ ನಮಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಮನವಿ
ಕನಕಗಿರಿ: ಧಾರಾಕಾರ ಮಳೆಗೆ 21 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಗುಡದೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
ಸೆ.26 ಹಾಗೂ 27ರಂದು ಬಿಟ್ಟು ಬಿಡದೆ ಮಳೆ ಸುರಿದಿದ್ದರಿಂದ ಗುಡದೂರು ಗ್ರಾಮದ ಕುರಿಗಾಹಿಗಳಾದ ಯಂಕಪ್ಪ ಮಂದಲಾರಗೆ ಸೇರಿದ 11, ಹಿರೇ ಹನುಮಂತಪ್ಪನವು 9 ಹಾಗೂ ಸಣ್ಣ ಯಂಕಪ್ಪನಿಗೆ ಸೇರಿದ 1ಕುರಿ ಸೇರಿದಂತೆ ಒಟ್ಟು 21 ಕುರಿಗಳು ಅತಿಯಾದ ಮಳೆಗೆ ಮೃತಪಟ್ಟಿವೆ.ಕುರಿಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಂದಾಯ ನೀರಿಕ್ಷಕ ರವಿ ನಾಯಕ, ಗ್ರಾಮ ಆಡಳಿತ ಅಧಿಕಾರಿ ರಾಜು ಚವ್ಹಾಣ್, ಪಶು ವೈದ್ಯ ಚನ್ನವೀರ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 21 ಕುರಿಗಳ ಪಂಚನಾಮ ವರದಿ ಮಾಡಿಕೊಂಡಿದ್ದಾರೆ.
ಹವಾಮಾನ ವೈಪರಿತ್ಯದಿಂದ ಲಕ್ಷಾಂತರ ಹಾನಿಯಾಗಿರುವ ನಮಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಕುರಿಗಾಹಿ ಯಂಕಪ್ಪ ಮಂದಲಾರ ದೂರು ದಾಖಲಿಸಿದ್ದಾರೆ.