ಕನ್ನಡಪ್ರಭ ವಾರ್ತೆ ಹುಕ್ಕೇರಿ ಮಕ್ಕಳಲ್ಲಿ ಅಡಗಿರುವ ವಿವಿಧ ಕಲಾ ಪ್ರಕಾರಗಳು, ಪ್ರತಿಭೆಗಳನ್ನು ಹೊರತರುವಲ್ಲಿ ಮತ್ತು ಸೂಕ್ತ ವೇದಿಕೆ ನೀಡುವಲ್ಲಿ ನಾಡಿನ ಹೆಮ್ಮೆಯ ಕನ್ನಡಪ್ರಭ ದಿನಪತ್ರಿಕೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಮಕ್ಕಳಲ್ಲಿ ಅಡಗಿರುವ ವಿವಿಧ ಕಲಾ ಪ್ರಕಾರಗಳು, ಪ್ರತಿಭೆಗಳನ್ನು ಹೊರತರುವಲ್ಲಿ ಮತ್ತು ಸೂಕ್ತ ವೇದಿಕೆ ನೀಡುವಲ್ಲಿ ನಾಡಿನ ಹೆಮ್ಮೆಯ ಕನ್ನಡಪ್ರಭ ದಿನಪತ್ರಿಕೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಮಂಗಳವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಅರಣ್ಯ ಇಲಾಖೆ ಹಾಗೂ ಚಿತ್ರಕಲಾ ಪರಿಷತ್ ಸಹಯೋಗದೊಂದಿಗೆ ಕನ್ನಡಪ್ರಭ-ಏಷಿಯಾನೆಟ್ ಸುವರ್ಣನ್ಯೂಸ್‌ನಿಂದ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹುಕ್ಕೇರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಉತ್ತಮ ಭವಿಷ್ಯ ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಾನವನ ಅತಿಯಾದ ದುರಾಸೆಯಿಂದ ನಿಸರ್ಗ ಸಂಪತ್ತು ದಿನೇ ದಿನೇ ನಶಿಸುತ್ತಿದೆ. ಇದರಿಂದ ಮುಂದಿನ ಪೀಳಿಗೆಗೆ ಅನೇಕ ದುಷ್ಟರಿಣಾಮ ಎದುರಾಗಲಿದೆ. ಹಾಗಾಗಿ ಅರಣ್ಯೀಕರಣ ಹೆಚ್ಚಿಸುವಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಪ್ರತಿಯೊಬ್ಬರಿಗೂ ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಪ್ರಜ್ಞೆ ಮೂಡಿಸಬೇಕಿದೆ. ಜೊತೆಗೆ ಚಿತ್ರಕಲೆ, ಸಂಸ್ಕೃತಿ, ಜಾನಪದ ಕಲೆ ಮುಂತಾದ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಯಭಾರಿಗಳಾದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸಿ ಅವರನ್ನು ಉತ್ತೇಜಿಸುವ ಕೆಲಸವನ್ನು ಕನ್ನಡಪ್ರಭ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸಿದರು.ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿದ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಕಲ್ಪನೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಚಿತ್ರಕಲೆ ಸೂಕ್ತ ವೇದಿಕೆ ಎನಿಸಿದೆ. ಮನುಷ್ಯನ ಕ್ರಿಯಾಶೀಲತೆಗೆ, ಜೀವಂತಿಕೆಗೆ ಚಿತ್ರಕಲೆ ಅಗತ್ಯ. ಅದಕ್ಕಾಗಿ ಇಂತ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಇಒ ಟಿ.ಆರ್.ಮಲ್ಲಾಡದ ಮಾತನಾಡಿ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅದು ಎಲ್ಲೆಡೆ ಇದೆ. ಆ ಪ್ರತಿಭೆಯನ್ನು ಗುರುತಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ಕಲಿಕೆಯಲ್ಲಿ ತಲ್ಲೀನರಾಗದೇ ಕಲೆ, ಸಾಹಿತ್ಯ, ಸಂಸ್ಕೃತಿಗಳತ್ತ ಒಲವು ಹೊಂದಿರಬೇಕು ಎಂದು ಹೇಳಿದರು.ಬಿಆರ್‌ಸಿ ಎ.ಎಸ್.ಪದ್ಮಣ್ಣವರ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಹೊಂದಬೇಕು. ಕನ್ನಡಪ್ರಭದ ಈ ಪ್ರಯತ್ನ ಮಕ್ಕಳ ಪ್ರತಿಭೆಗೆ ಪ್ರೇರಣೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರೇಮಠದ ನಿಶಾಂತ ಶಾಸ್ತ್ರೀಗಳು ಸಾನಿಧ್ಯ ವಹಿಸಿದ್ದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ, ವಲಯ ಅರಣ್ಯ ಅಧಿಕಾರಿ ಬಿ.ಎಲ್.ಸನದಿ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ವರದಿಗಾರ ರವಿ ಕಾಂಬಳೆ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಉಪ ವಲಯ ಅರಣ್ಯಾಧಿಕಾರಿಗಳಾದ ವಿಷ್ಣು ನಾಯ್ಕ, ಸಂಜು ಕೋರಿ, ಶಿಕ್ಷಣ ಸಂಯೋಜಕ ಎಂ.ಡಿ.ಬಡಿಗೇರ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಬಡಿಗೇರ, ಮುಖಂಡರಾದ ಅಪ್ಪುಶ್ ತುಬಚಿ, ಮಧುಕರ ಕರನಿಂಗ, ಭೀಮಶಿ ಗೋರಖನಾಥ, ಸತ್ಯಪ್ಪ ಹಾಲಟ್ಟಿ, ಅಪ್ಪಾಸಾಹೇಬ ಕಾಂಬಳೆ, ಸತೀಶ ದಿನ್ನಿಮನಿ, ಕಿರಣ ಬೆಳವಿ, ಪಿಂಟು ಹೊನ್ನಳ್ಳಿ, ಶಂಕರ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ಕುಮಾರ ಬಡಿಗೇರ ನಿರೂಪಿಸಿದರು. ಮುಖ್ಯ ಶಿಕ್ಷಕ ಎಸ್.ಬಿ.ಜಿನರಾಳಿ ವರದಿ ವಾಚಿಸಿದರು. ಪತ್ರಕರ್ತರಾದ ಮಹಾದೇವ ನಾಯಿಕ ಮತ್ತು ವಿಶ್ವನಾಥ ನಾಯಿಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಎ.ಎಂ.ಕರ್ನಾಚಿ ವಂದಿಸಿದರು.------
ಬಾಕ್ಸ್ಸ್ಪರ್ಧೆಯಲ್ಲಿ ಮಕ್ಕಳ ಉತ್ಸಾವಹುಕ್ಕೇರಿ ತಾಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ತಾಲೂಕಿನ ವಿವಿಧೆಡೆಯಿಂದ ಮಕ್ಕಳು ಆಗಮಿಸಿದ್ದರಿಂದ ವಿವೇಕಾನಂದ ಸಭಾಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಕ್ಕಳ ಕಲರವ ಕೇಳಿ ಬಂದಿತು. ಇದರೊಂದಿಗೆ ಕಲಿಕಾ ಶಿಕ್ಷಕರು ಮಕ್ಕಳ ಆಸಕ್ತಿಯನ್ನು ಉತ್ತೇಜಿಸಿದರು. ಗ್ರಾಮೀಣ ಶಾಲಾ ಮಕ್ಕಳು ಮುಖ್ಯೋಪಾಧ್ಯಾಯ, ಶಿಕ್ಷಕರ ಜೊತೆ ಚಳಿಯನ್ನೇ ಲೆಕ್ಕಿಸದೇ, ಹುಕ್ಕೇರಿಗೆ ಬರಲು ಅತ್ಯುತ್ಸಾಹ ತೋರಿದರು.
-------ಬಾಕ್ಸ್
ಮಕ್ಕಳ ಕಲ್ಪನೆಯಲ್ಲಿ ಅರಳಿದ ದೃಶ್ಯಾವಳಿಇದರಿಂದ ಚಿತ್ರಕಲಾ ಸ್ಪರ್ಧೆಯ ಮೆರಗು ಮತ್ತಷ್ಟು ಹೆಚ್ಚಿಸಿತು. ಇದರೊಂದಿಗೆ ಬಣ್ಣದ ಲೋಕಕ್ಕೆ ಸಾಕ್ಷಿಯಾಗಿ ಕರ್ನಾಟಕದ ಅರಣ್ಯ, ವನ್ಯಜೀವಿ ಕುರಿತು ಅರಿವು ಮೂಡಿಸುವ ಕನ್ನಡಪ್ರಭದ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾಯಿತು. ಸ್ಪರ್ಧೆಯ ಅಂಗವಾಗಿ ಚಿಣ್ಣರ ಕೈಚಳಕದಲ್ಲಿ ಮೂಡಿ ಬಂದ ವಿವಿಧ ದೃಶ್ಯಾವಳಿಗಳು ಗಮನ ಸೆಳೆದವು.ಇದರೊಂದಿಗೆ ಅರಣ್ಯ ಸಂಪತ್ತಿನ ವೈಭವ ಮನಸೂರೆಗೊಂಡಿತು. ಹಲವು ಚಿತ್ರಗಳು ವೀಕ್ಷಕರನ್ನು ಆಕರ್ಷಿಸಿದವು. ವನ್ಯ ಜೀವಿಗಳ ರಕ್ಷಣೆಯ ಜಾಗೃತಿಯನ್ನು ಕನ್ನಡಪ್ರಭ ಪರಿಣಾಮಕಾರಿಯಾಗಿ ಮಾಡಿತು.
------ಬಾಕ್ಸ್
ಯಾರ್‍ಯಾರು ವಿಜೇತರು..?8ನೇ ತರಗತಿ
ಗಿರೀಶ ಸುತಾರ- ಸರಕಾರಿ ಪ್ರೌಢಶಾಲೆ ನೇರಲಿ, ಪ್ರಥಮಸಾಗರ ರಕ್ಷಿ- ಭರತೇಶ ವಿದ್ಯಾಲಯ ಬೆ.ಬಾಗೇವಾಡಿ, ದ್ವಿತೀಯ
ಸೃಷ್ಟಿ ಬೆನ್ನಳ್ಳಿ- ಸರಕಾರಿ ಪ್ರೌಢಶಾಲೆ ಗುಡಸ, ತೃತೀಯ9ನೇ ತರಗತಿ
ಬಸವರಾಜ ನಾಯಿಕ- ಸರಕಾರಿ ಪ್ರೌಢಶಾಲೆ ಗುಡಸ, ಪ್ರಥಮವಿವೇಕ ಬಾದವಾನಮಠ- ಸರಕಾರಿ ಪ್ರೌಢಶಾಲೆ ಹುಲ್ಲೋಳಿ, ದ್ವಿತೀಯ
ವಿನಾಯಕ ಬಾಳಿಕಾಯಿ- ಸರಕಾರಿ ಪ್ರೌಢಶಾಲೆ ಹುಲ್ಲೋಳಿ, ತೃತೀಯ10ನೇ ತರಗತಿ
ಅಭಿಷೇಕ ಕುಪಾಟಿ- ಸರಕಾರಿ ಪ್ರೌಢಶಾಲೆ ಎಲಿಮುನ್ನೋಳಿ, ಪ್ರಥಮಕಾರ್ತಿಕ ನಾಯಿಕ- ಸರಕಾರಿ ಪ್ರೌಢಶಾಲೆ ಗುಡಸ, ದ್ವಿತೀಯ
ಕಾಡೇಶ ನಾಶಿಪುಡಿ- ಗಂಗಾದೇವಿ ಪ್ರೌಢ ಶಾಲೆ ಕುರಣಿ, ತೃತೀಯ----------