ಕನ್ನಡಪ್ರಭ ವಾರ್ತೆ ಯಮಕನಮರಡಿ ಸಮಾಜಕ್ಕೆ ದೇವರು ಬೇಕು. ಆದರೆ ಕೇವಲ ದೇವರನ್ನು ಪೂಜಿಸುತ್ತಾ ತಂದೆ ತಾಯಿಯನ್ನು, ಗುರುಹಿರಿಯರನ್ನು ಮರೆಯುತ್ತಿರುವುದು ಸರಿಯಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಮಾಜಕ್ಕೆ ದೇವರು ಬೇಕು. ಆದರೆ ಕೇವಲ ದೇವರನ್ನು ಪೂಜಿಸುತ್ತಾ ತಂದೆ ತಾಯಿಯನ್ನು, ಗುರುಹಿರಿಯರನ್ನು ಮರೆಯುತ್ತಿರುವುದು ಸರಿಯಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಹುಕ್ಕೇರಿ ತಾಲೂಕಿನ ಗಜಪತಿ ಗ್ರಾಮದ ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನ್ಮ ನೀಡಿದ ತಂದೆ ತಾಯಿಯರನ್ನು ಮರೆಯುತ್ತಿರುವುದರಿಂದ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿತು ತಂದೆ ತಾಯಿಯರನ್ನು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಠಾಧೀಶರು, ಗುರುಹಿರಿಯರು ಯುವಕರಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದು ತಿಳಿಸಿದರು.ಚಿಕ್ಕಲದಿನ್ನಿ, ತೋಲಿಗಿಯ ಅದೃಶ್ಯಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಭಕ್ತಿ ಭಾವ ಧಾರ್ಮಿಕ ಭಾವನೆ ಮೂಡುತ್ತದೆ. ಸನಾತನ ಧರ್ಮ ಉಳಿಯುವುದು ಸಂಸ್ಕಾರಯುತ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವದರಿಂದ ಎಂದರು.ಗೋಕಾಕ್ ಫಾಲ್ಸ್‌ನ ಡಾ.ರವಿಶಂಕರ ಗುರೂಜಿ, ಗುಟುಗುದ್ದಿ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಈ ವೇಳೆ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ಯಮಕನಮರಡಿ ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ಅಪ್ಪಯ್ಯ ಜಾಜರಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಬಸವರಾಜ ಲಂಕೆಪ್ಪಗೋಳ, ಯಲ್ಲಪ್ಪ ಗಡಕರಿ, ಬಾಳಯ್ಯ ತವಗಮಠ, ಶಂಕರ ಗುಡಸ, ಅಯೂಬಖಾನ ವಂಟಿಗಾರ, ಕಾಡಪ್ಪ ಜಿಂಡ್ರಾಳಿ, ಮಲ್ಲಿಕಾರ್ಜುನ ಮಹಾಜನಶೆಟ್ಟಿ, ಬಾಳಪ್ಪ ಬಾಗರಾಯಿ, ಲಗಮಪ್ಪ ಪೂಜಾರಿ ಹಾಗೂ ಗ್ರಾಮಸ್ಥರು ಇದ್ದರು. ಡಿ.21ರಂದು ಕುಂಭಮೇಳ ಮತ್ತು ಡೊಳ್ಳಿನ ವಾಲಗ ಜರುಗಿತು. ಟಗರಿನ ಕಾಳಗ ನಡೆಯಿತು. ಸುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.