ಸಾರಾಂಶ
ಸಿರವಾರ ತಾಲೂಕಿನ ನವಲಕಲ್ ಗ್ರಾಮದಲ್ಲಿ ಬಿಜೆಪಿ ರೈತಮೋರ್ಚಾ ಘಟಕದಿಂದ ಗ್ರಾಮ ಪರಿಕ್ರಮ ಯಾತ್ರೆ ನಡೆಯಿತು
ಸಿರವಾರ: ಕಾಂಗ್ರೆಸ್ ಸರ್ಕಾರ ರೈತ ಸಮೂಹವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ, ರೈತ ಪರ ಯೋಜನೆ ನಿಲ್ಲಿಸಿ, ರೈತ ವಿರೋಧಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಘಟಕದ ಅಧ್ಯಕ್ಷ ಸಿದ್ದನಗೌಡ ನೆಲಹಾಳ ಆರೋಪಿಸಿದರು।
ತಾಲೂಕಿನ ನವಲಕಲ್ ಗ್ರಾಮದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸೋಮವಾರ ''''''''ಗ್ರಾಮ ಪರಿಕ್ರಮ ಯಾತ್ರೆ'''''''' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರ ಇಂದಿನ ಸಂಕಷ್ಟದ ಸ್ಥಿತಿ ಅರಿತು ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯ ನಾವೆಲ್ಲರೂ ಮಾಡುವ ಅಗತ್ಯವಿದೆ ಎಂದು ಮಾಜಿ ಶಾಸಕ ಗಂಗಾಧರ ನಾಯಕ ಹೇಳಿದರು.ಬಿಜೆಪಿ ಸಿರವಾರ ಮಂಡಲ ಅಧ್ಯಕ್ಷ ಜೆ.ದೇವರಾಜಗೌಡ, ಮುಖಂಡರಾದ ಶರಣಪ್ಪಗೌಡ ನಕ್ಕುಂದಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಸುರೇಶಗೌಡ ನವಲಕಲ್ಲು, ವೀರೇಶ ನಾಯಕ ಬೆಟ್ಟದೂರು, ಶರಣಗೌಡ ಶಾಖಾಪೂರು, ವೀರನಗೌಡ ಗಣದಿನ್ನಿ, ಶಿವಲಿಂಗಯ್ಯ ಸ್ವಾಮಿ, ಗುರುಗೌಡ ಕಣ್ಣೂರು, ರಾಜಗೋಪಾಲ ನಾಯಕ ಕುರುಕುಂದಾ, ಸೇರಿ ಯುವ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು.