ಸಾರಾಂಶ
ವಿಸರ್ಜನಾ ಮಹೋತ್ಸವದ ಅಂಗವಾಗಿ ಗೌರಿ, ಗಣಪತಿಗೆ ಬೆಳಗ್ಗೆ ಪೆಂಡಾಲಿನಲ್ಲಿ ಹೋಮ ಸೇರಿದಂತೆ ಪೂಜಾ ವಿಧಿವಿಧಾನಗಳು ಜರುಗಿದವು. ಮಹಾ ಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ರಸ್ತೆಗಳ ಅಕ್ಕಪಕ್ಕದಲ್ಲಿ ಬಂಟಿಂಗ್ಸ್ ಹಾಕಿ ಅಲಂಕರಿಸಲಾಗಿತ್ತು. ಬಣ್ಣ ಬಣ್ಣದ ಹೂವು, ಹಾರಗಳಿಂದ ಅಲಂಕೃತಗೊಂಡಿದ್ದ ಗೌರಿ, ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿರಥ ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು.
ಆಲೂರು: ಪಟ್ಟಣದ ಕೆಇಬಿ ವೃತ್ತದಲ್ಲಿ ವಿನಾಯಕ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಮೂರನೇ ವರ್ಷದ ಗೌರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ವಿಸರ್ಜನಾ ಮಹೋತ್ಸವದ ಅಂಗವಾಗಿ ಗೌರಿ, ಗಣಪತಿಗೆ ಬೆಳಗ್ಗೆ ಪೆಂಡಾಲಿನಲ್ಲಿ ಹೋಮ ಸೇರಿದಂತೆ ಪೂಜಾ ವಿಧಿವಿಧಾನಗಳು ಜರುಗಿದವು. ಮಹಾ ಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾನ ನೆರವೇರಿಸಲಾಯಿತು. ರಸ್ತೆಗಳ ಅಕ್ಕಪಕ್ಕದಲ್ಲಿ ಬಂಟಿಂಗ್ಸ್ ಹಾಕಿ ಅಲಂಕರಿಸಲಾಗಿತ್ತು. ಬಣ್ಣ ಬಣ್ಣದ ಹೂವು, ಹಾರಗಳಿಂದ ಅಲಂಕೃತಗೊಂಡಿದ್ದ ಗೌರಿ, ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿರಥ ಅಲಂಕೃತಗೊಂಡ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯಲ್ಲಿ ಶ್ರೀರಾಮ, ಆಂಜನೇಯ ಬೃಹತ್ ವಿಗ್ರಹಗಳ ಮೆರವಣಿಗೆ ಆಕರ್ಷಣೀಯವಾಗಿತ್ತು. ನಾಸಿಕ್ ಡೋಲು, ನಂದಿಧ್ವಜ, ವೀರಗಾಸೆ, ಮಂಗಳವಾದ್ಯ ನಾದಸ್ವರ, ಬೆಳ್ಳಿರಥ, ವಿಶೇಷ ತಮಟೆ ವಾದ್ಯ, ಡಿ.ಜೆ ಹಾಗೂ ಪಟಾಕಿ ಸಿಡಿತ ಎಲ್ಲರ ಮನಸೂರೆಗೊಂಡಿತು.
ಮೆರವಣಿಗೆಯಲ್ಲಿ ಸಾವಿರಾರು ಯುವಕ, ಯುವತಿಯರು ಕೇಸರಿ ಶಾಲು ಹಾಕಿಕೊಂಡು ಯುವತಿಯರು ಬಾರಿಸುತ್ತಿದ್ದ ತಮಟೆ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಹಳೆ ಕೋರ್ಟ್ ಸರ್ಕಲ್ ಬಳಿ ಇರುವ ಕಲ್ಯಾಣಿಯಲ್ಲಿ ಗೌರಿ, ಗಣಪತಿ ಮೂರ್ತಿಗಳನ್ನು ಭಕ್ತಿಯಂದ ವಿಸರ್ಜಿಸಲಾಯಿತು. ಭಾರಿ ಪೊಲೀಸ್ ಬಂದೋಬಸ್ತ್ ನೆರವೇರಿಸಲಾಗಿತ್ತು.