ಸಾರಾಂಶ
ಕನ್ನಡಪ್ರಭ ವಾರ್ತೆ ಕಾಳಗಿ
ಕೆಲಸ ತುಂಬಾ ನಿಷ್ಠೆಯಿಂದ ಕೆಲಸ ಮಾಡಿದರೂ, ಸರ್ಕಾರಿ ಅಧಿಕಾರಿಗಳಿಗೆ ರಾಜಕೀಯ ವ್ಯಕ್ತಿಗಳು, ವಿವಿಧ ಸಂಘಟನೆಗಳು, ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಸೇರಿದಂತೆ ಬಹುತೇಕರು ಅಧಿಕಾರಿಗಳನ್ನು ಹೊಗಳುವುದುಕ್ಕಿಂತ ತೆಗಳುವವರೇ ಹೆಚ್ಚಿರುವ ಪರಿಸ್ಥಿತಿಯಲ್ಲಿ, ಕಾಳಗಿ ಪಪಂ ಮುಖ್ಯಾಧಿಕಾರಿಯಾಗಿ 5 ವರ್ಷ ಸೇವೆ ನೀಡಿದ ವೆಂಕಟೇಶ ತೆಲಂಗ ಅವರಿಗೆ ಇಲ್ಲಿ ಸರ್ವ ಪಕ್ಷಗಳ ಮುಖಂಡರು, ಪ್ರಮುಖರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವ-ಸಹಾಯ ಸಂಘ, ಬಾಜಾರ್ ಯೂನಿಯನ್, ಕನ್ನಡಪರ ಸಂಘಟನೆಗಳು, ಅಂಗವಿಕಲರ ಸಮೂಹಗಳು, ಉದ್ಯಮಿಗಳು, ಪಪಂ, ಗ್ರಾಪಂ.ನ ಮಾಜಿ ಸದಸ್ಯರುಗಳು, ಪೌರ ಕಾರ್ಮಿಕರು ಸೇರಿಕೊಂಡು ಹೂ ಮಾಲೆ, ಶಾಲು, ಪೇಠಾ , ಸಿಹಿತಿಂಡಿಗಳು ನೀಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಟ್ಟರು.ಸಾರ್ವಜನಿಕ ಕ್ಷೇತ್ರದಲ್ಲಿರುವ ವೆಂಕಟೇಶ್ ತೆಲಂಗ ಅವರು, ತಮ್ಮ ಕರ್ತವ್ಯದ ಅವಧಿಯಲ್ಲಿ ಯಾರ ಮನಸ್ಸು ನೋಯಿಸುವ ಸಂಗತಿಯನ್ನು ತಂದುಕೊಳ್ಳದೇ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿ, ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆಯದೇ ಸರ್ವರನ್ನು ಸಮಾನವಾಗಿ ಕಂಡು ಪಟ್ಟಣದಲ್ಲಿ ಕುಡಿಯುವ ನೀರು, ವಿಧ್ಯುತ್ ವ್ಯವಸ್ಥೆ, ಮುಖ್ಯ ರಸ್ತೆಗಳ ಸುಚಿತ್ವ, ಒಳ ಚರಂಡಿಗಳ ವ್ಯವಸ್ಥೆ ಸಾರ್ವಜನಿಕ ಕ್ಷೇತ್ರಗಳ ರಕ್ಷಣೆ ಸೇರಿದಂತೆ ಅನೇಕ ಜನೋಪಯೋಗಿ ಕೆಲಸ ಮಾಡಿ ವರ್ಗಾವಣೆಗೊಂಡು ಹೊಗುತ್ತಿರುವ ಕರ್ತವ್ಯ ನಿಷ್ಠ ಅಧಿಕಾರಿಗೆ ಪಟ್ಟಣದ ಜನತೆ ಕಣ್ಣಿರ ವಿದಾಯ ಹೇಳಿದರು.
ನೂತನ ಮುಖ್ಯಾಧಿಕಾರಿಯಾಗಿ ಆಗಮಿಸಿದ ಪಂಕಜ ಅವರನ್ನು ವೆಂಕಟೇಶ್ ತೆಲಂಗ ಅವರ ಮಾದರಿಯಲ್ಲಿ ಉತ್ತಮ ಕೆಲಸವನ್ನು ಮಾಡಿ ಪಟ್ಟಣದ ಏಳಿಗೆಗಾಗಿ ಶ್ರಮಿಸುವಂತೆ ಕೋರುತ್ತ ಸ್ವಾಗತಿಸಿದರು.ಪಪಂ ಮಾಜಿ ಸದಸ್ಯ ಪ್ರಶಾಂತ ಕದಂ, ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ವೇದ ಪ್ರಕಾಶ ಮೋಟಗಿ, ಜಗನ್ನಾಥ ಚಂದನಕೇರಿ, ಗೌರಿಶಂಕರ ಗುತ್ತೇದಾರ, ವಿಠೋಬಾ ಸೇಗಾಂವಕರ, ಶಿವುಕುಮಾರ ಚಿಂತಕೋಟಿ, ನೀಲಕಂಠ ಮಡಿವಾಳ, ಸಂತೋಷ ಪತಂಗೆ, ಅವಿನಾಶ ಗುತ್ತೇದಾರ, ರವಿದಾಸ ಪತಂಗೆ, ಶಾಂತಕುಮಾರ ಗುತ್ತೇದಾರ, ರೇವಣಸಿದ್ದ ಕಲಶೇಟ್ಟಿ, ನಿಂಗಯ್ಯ ಸುಂಠಾಣ, ಶ್ರೀನಿವಾಸ ಗುರುಮಠಕಲ್, ಭೀಮರಾಯ ಮಲಘಾಣ, ಕೃಷ್ಣ ಸಿಂಗಶೇಟ್ಟಿ, ಗುರುರಾಜ ಆಚಾರಿ, ರಾಜೇಂದ್ರಬಾಬು ಹೀರಾಪೂರಕರ್, ದತ್ತಾತ್ರೇಯ ಕಲಾಲ್, ಕಾಳೇಶ್ವರ ಮಡಿವಾಳ, ಸಾಜಿದ್ ರಾಯಚೂರಕರ್ ಉಪಸ್ಥಿತರಿದ್ದರು.