ಚಿನಕುರಳಿ ಕೃಷಿ ಪತ್ತಿನ ಸಂಘಕ್ಕೆ ಜೆಡಿಎಸ್ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು

| Published : Jan 28 2025, 12:45 AM IST

ಚಿನಕುರಳಿ ಕೃಷಿ ಪತ್ತಿನ ಸಂಘಕ್ಕೆ ಜೆಡಿಎಸ್ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನ ಚಿನಕುರಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನದಲ್ಲೂ ಜೆಡಿಎಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದಾರೆ. ರೈತ ಸಂಘ-ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಹೀನಾಯ ಸೋಲುಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನದಲ್ಲೂ ಜೆಡಿಎಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸಿದ್ದಾರೆ. ರೈತ ಸಂಘ-ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಹೀನಾಯ ಸೋಲುಂಡಿದ್ದಾರೆ.

ಸಂಘದ ಒಟ್ಟು 11 ನಿರ್ದೇಶಕ ಸ್ಥಾನಗಳ ಪೈಕಿ 10 ಮಂದಿ ಸಾಲಗಾರರ ಕ್ಷೇತ್ರಕ್ಕೆ 22 ಮಂದಿ ಹಾಗೂ 1 ಸಾಲಗಾರರಲ್ಲದ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ3 ಮಂದಿ ಸ್ಪರ್ಧಿಸಿದ್ದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ನಂತರ ಮತ ಎಣಿಕೆ ಕಾರ್ಯ ನಡೆದು ಸಾಲಗಾರ ಕ್ಷೇತ್ರದ ಒಟ್ಟು 362 ಮತಗಳ ಪೈಕಿ 355 ಮತಗಳ ಚಲಾವಣೆಗೊಂಡಿದ್ದವು. ಚುನಾವಣೆಯಲ್ಲಿ ಎಲ್ಲಾ 11 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತರು ಭರ್ಜರಿ ಗೆಲುವು ಸಾಧಿಸುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾದರು. ರೈತಸಂಘ-ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಸೋಲು ಅನುಭವಿಸಿದರು.

ಚುನಾವಣೆಯಲ್ಲಿ ಸಿ.ಎಂ.ಕಾಳೇಗೌಡ (255), ಸಿ.ಎಸ್.ಗೋಪಾಲಗೌಡ (255), ಕೆ.ವೈ.ಭವ್ಯ (245), ಕೆ.ಎ.ಸ್ವಾಮೀಗೌಡ (244), ರಾಮಕೃಷ್ಣೇಗೌಡ ಆರ್.ಕೆ (243), ಜಿ.ಕೆ.ಕುಮಾರ್ (243), ಕೆ.ಎಸ್.ಚಂದ್ರು (241), ತಾಯಮ್ಮ (218), ಸಿ.ಸುರೇಂದ್ರ (215), ಸಿಂಗ್ರಯ್ಯ (195) ಮತ ಪಡೆದು ಭರ್ಜರಿಗೆಲುವು ಸಾಧಿಸಿದ್ದಾರೆ. ರೈತಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸಿ.ಎಂ.ರಮೇಶ್ (130), ಪ್ರಕಾಶ್ (110), ಸಿ.ಆರ್.ಅಭಿನಂದನ (90), ಕೆ.ರಮೇಶ್ (89), ವಿಶಾಲಾಕ್ಷಿಮ್ಮ (74), ಕೆ.ಸಿ.ಗೀತಾ (71) ಶಾಂತಮ್ಮ (67), ಸೋಮಶೇಖರ್ (66), ಪಿ.ಪಾಪೇಗೌಡ (65), ನರಸಮ್ಮ (56) ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ರಾಜಮ್ಮ (15), ಎಂ.ಚಿಕ್ಕಣ್ಣ (46) ಪಡೆದು ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಸ್ವಾಮಿಗೌಡ (601) ಮತಪಡೆದು 410 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ರೈತಸಂಘ-ಕಾಂಗ್ರೆಸ್ ಬೆಂಬಲಿತ ಸಿ.ಎಸ್.ನಾಗೇಶ್ (198) ಹಾಗೂ ಪಕ್ಷೇತರ ಅಭ್ಯರ್ಥಿ (16) ಮತಗಳನ್ನು ಪಡೆದರು.

ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿಎಸ್.ಪುಟ್ಟರಾಜು ಮತ್ತು ಬೆಂಬಲಿಗರು ಅಭಿನಂದಿಸಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಸೊಸೈಟಿ ಅಧ್ಯಕ್ಷ ಸಿ.ಎಸ್.ಮಂಜುನಾಥ್, ಮಾಜಿ ಅಧ್ಯಕ್ಷರಾದ ಮೊಗ್ಗಣ್ಣಗೌಡ, ವಾಸುದೇವಯ್ಯ ಸೇರಿದಂತೆ ಚಿನಕುರಳಿ, ಗುಮ್ಮನಹಳ್ಳಿ, ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್ ನ ಎಲ್ಲಾ ಮುಖಂಡರು ಹಾಜರಿದ್ದರು.ಚುನಾವಣೆಯಲ್ಲಿ ಚಿನಕುರಳಿ, ಗುಮ್ಮನಹಳ್ಳಿ ಹಾಗೂ ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿ ಗ್ರಾಮಗಳ ರೈತರು ನಮ್ಮ ಎಲ್ಲಾ ಅಭ್ಯರ್ಥಿಗಳಿಗೆ ಅಧಿಕ ಮತ ಕೊಟ್ಟು ಗೆಲ್ಲಿಸಿ ಆಯ್ಕೆ ಮಾಡಿರುವುದುಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಹಿಂದಿನ ಆಡಳಿತ ಮಂಡಳಿ ಉತ್ತಮವಾಗಿ ಕೆಲಸ ಮಾಡಿದೆ. ವಾಣಿಜ್ಯ ಸಂಕೀರಣದ ಮಳಿಗೆ ಕಟ್ಟಡ ನಿರ್ಮಾಣ ಮಾಡಿ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ಸೂಪರ್ ಮಾರ್ಕೆಟ್ ಆರಂಭಿಸಿದ್ದಾರೆ. ಅಲ್ಲದೇ, ಪಡಿತರ ಶಾಖೆ, ಗೊಬ್ಬರ ಶಾಖೆಯನ್ನು ಪ್ರತ್ಯೇಕವಾಗಿ ನಡೆಸುತ್ತಿದ್ದಾರೆ. ಅದೇ ರೀತಿ ನೂತನ ನಿರ್ದೇಶಕರು ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು.

-ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು