ನಾಯಿಯನ್ನು ಸ್ಕೂಟರಿಗೆ ಕಟ್ಟಿ ಎಳೆದೊಯ್ದ ಕಟುಕ

| Published : Jul 21 2024, 01:15 AM IST

ಸಾರಾಂಶ

ಈತನ ಈ ಕುಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಕೆಲವರು ಆ ನಾಯಿಯು ಸತ್ತಿದೆ ಎಂದೂ, ಆತ ಮಾನಸಿಕ ಅಸ್ವಸ್ಥನೆಂದೂ ಆತನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶಿರ್ವ ಪೇಟೆಯಲ್ಲಿ ನಾಯಿಯೊಂದನ್ನು ಸ್ಕೂಟರಿನ ಹಿಂಭಾಗಕ್ಕೆ ಕಟ್ಟಿ ಅಮಾನುಷವಾಗಿ ಕಿ.ಮೀ.ಗಟ್ಟಲೇ ಎಳೆದೊಯ್ದ ಬಗ್ಗೆ ಕೊಂಬಗುಡ್ಡೆ ನಿವಾಸಿ ಅಬ್ದುಲ್ ಖಾದರ್ ಎಂಬಾತನ ವಿರುದ್ಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈತ ನಾಯಿಯ ಕುತ್ತಿಗೆಗೆ ಹಗ್ಗ ಹಾಕಿ ಶಿರ್ವ ಪಂಚಾಯಿತಿ ಕಚೇರಿಯ ಎದುರಿನಲ್ಲಿಯೇ ಅಮಾನೀಯವಾಗಿ ಎಳೆದುಕೊಂಡು ಸುಮಾರು 5 ಕಿ.ಮೀ. ಸಂಚರಿಸಿದ್ದನ್ನು ಬೇರೆ ವಾಹನ ಸವಾರರು ಚಿತ್ರೀಕರಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈತನ ಈ ಕುಕೃತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಕೆಲವರು ಆ ನಾಯಿಯು ಸತ್ತಿದೆ ಎಂದೂ, ಆತ ಮಾನಸಿಕ ಅಸ್ವಸ್ಥನೆಂದೂ ಆತನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯೆ ಮಂಜುಳಾ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿರ್ವ ಪೊಲೀಸ್ ಠಾಣೆ ದೂರು ನೀಡಿದ್ದು, ಪ್ರಿವೆನ್ಸನ್‌ ಆಫ್‌ ಕ್ರೂಯಲಿಟಿ ಟು ಎನಿಮಲ್‌ ಆ್ಯಕ್ಟ್‌ 1960 ರಂತೆ ಪ್ರಕರಣ ದಾಖಲಾಗಿದೆ.