ಸಾರಾಂಶ
ರೋಟರಿ ಸಂಸ್ಥೆ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಹಿರಿಯ ರೋಟರಿ ಸದಸ್ಯ ಎಸ್.ಎಸ್.ಶಾಂತಕುಮಾರ್ ಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರೋಟರಿ ಸಂಸ್ಥೆಯ ಹಿರಿಯ ಸದಸ್ಯ ಎಸ್.ಎಸ್.ಶಾಂತಕುಮಾರ್ ಅವರ ಶಿಸ್ತು, ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ ಅನುಕರಣೀಯ ಎಂದು ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ರೋಟರಿ ಮಿಲನ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಹಿರಿಯ ಸದಸ್ಯ, ಪಿಸಿಎಆರ್ ಡಿ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಎಸ್. ಶಾಂತ ಕುಮಾರ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕಷ್ಟದಲ್ಲಿರುವರಿಗೆ ಸ್ಫಂದಿಸಿ ಶಾಂತಕುಮಾರ್ ನೆರವು ನೀಡುತ್ತಾರೆ. ಯಾವುದೇ ಕೆಲಸ ಮಾಡಿದರೂ ಅಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾರೆ ಎಂದರು.ರೋಟರಿ ಸದಸ್ಯ ಇ.ಸಿ.ಜೋಯಿ ಮಾತನಾಡಿ, ಎಸ್.ಎಸ್.ಶಾಂತಕುಮಾರ್ ಪಿಸಿಎಆರ್ ಡಿ ಬ್ಯಾಂಕಿನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾಗ ರಬ್ಬರ್ ಕೃಷಿ ಮಾಡಲು ಬ್ಯಾಂಕಿನಿಂದ ರೈತರಿಗೆ ಕೋಟ್ಯಂತರ ರು. ಸಾಲ ಒದಗಿಸಿ ರಬ್ಬರ್ ಕೃಷಿಗೆ ಉತ್ತೇಜನ ನೀಡಿದ್ದರು. ಕೇರಳದಿಂದ ನರಸಿಂಹರಾಜಪುರಕ್ಕೆ ವಲಸೆ ಬಂದ ರೈತರು ಆರ್ಥಿಕವಾಗಿ ಸಬಲರಾಗಲು ಎಸ್.ಎಸ್.ಶಾಂತಕುಮಾರ್ ಕಾರಣರಾಗಿದ್ದಾರೆ ಎಂದು ನೆನಪಿಸಿಕೊಂಡರು. ರೋಟರಿ ಸದಸ್ಯರಾದ ಎಚ್.ಟಿ.ಧನಂಜಯ್, ಟಿ.ವಿ.ವಿಜಯ, ಕಣಿವೆ ವಿನಯ್, ಕೆ.ಎಸ್.ರಾಜಕುಮಾರ್, ಮನೀಶ್, ಪಿ.ಎಸ್. ವಿದ್ಯಾನಂದಕುಮಾರ್, ಎಂ.ಆರ್.ಸುಂದರೇಶ್, ಶಾಂತಕುಮಾರ್ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎನ್.ಕೆ.ಕಿರಣ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಿ.ಆರ್.ದಿವಾಕರ್, ವಕೀಲ ಜಿ.ದಿವಾಕರ್, ಎನ್.ಟಿ.ಶೇಷಾಚಲ,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಶ್ಮಿ ದಯಾನಂದ್, ಕಾರ್ಯದರ್ಶಿ ಶ್ಯಾಮಲ ಸತೀಶ್ ಹಾಗೂ ಇತರ ಸದಸ್ಯರು ಇದ್ದರು.