ಸಾರಾಂಶ
ಕೆರೂರ ಸಮೀಪದ ಯಂಕಂಚಿ ಗ್ರಾಮದ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಪೊಲೀಸ್ ಪೇದೆ ಸಾವಿಗೀಡಾದ ಘಟನೆ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕೆರೂರ
ಸಮೀಪದ ಯಂಕಂಚಿ ಗ್ರಾಮದ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಪೊಲೀಸ್ ಪೇದೆ ಸಾವಿಗೀಡಾದ ಘಟನೆ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಬಾದಾಮಿಯಲ್ಲಿ ಪೊಲೀಸ್ ಪೇದೆಯಾಗಿ ಸೆವೆ ಸಲ್ಲಿಸುತ್ತಿದ್ದ ಸಿದ್ದಪ್ಪ ಲಕ್ಷ್ಮಪ್ಪ ಚಲುವಣ್ಣವರ (37) ಮೃತರು. ಕರ್ತವ್ಯ ಮುಗಿಸಿಕೊಂಡು ಬೈಕ್ ಮೇಲೆ ಸ್ವಗ್ರಾಮ ಬಂದಕೇರಿಗೆ ಹೊರಟಿದ್ದಾಗ ರಾತ್ರಿ 9 ಗಂಟೆ ಸುಮಾರಿಗೆ ಯಂಕಂಚಿ ಗ್ರಾಮದ ಹತ್ತಿರ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದು, ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಕೆಚ್ಚುವರಿ ಅಧೀಕ್ಷಕ ಮಹಾಂತೇಶ್ವರ ಜಿದ್ದಿ, ಡಿಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಬಿ.ಎಂ. ರಭಕವಿ ಭೇಟಿ ನೀಡಿ ಪರಿಶೀಲಿಸಿದರು. ಮೃತನ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಬಂದಕೇರಿ ಗ್ರಾಮದಲ್ಲಿ ನಡೆಯಿತು. ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.