ಉಡುಪಿ: ಕರ್ನಾಟಕ ಸ್ಟೇಟ್ ಟೈಲರ್ಸ ಅಸೋಸಿಯೇಷನ್ ಶಿರಿಬೀಡು ನಗರ ಸಮಿತಿ ವತಿಯಿಂದ ಇಲ್ಲಿನ ಕಡಿಯಾಳಿಯ ಯು. ಕಮಲಾ ಬಾಯಿ ಹೈಸ್ಕೂಲ್‌ನಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಲೀಲಾವತಿ ಬೈಕಾಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಮಲಾ ಬಾಯಿ ಹೈಸ್ಕೂಲಿನ ನಿವೃತ್ತ ಅಧ್ಯಾಪಕಿ ಲಕ್ಷ್ಮಿನಾರಾಯಣ ಭಟ್, ಕುಂಜಿಬೆಟ್ಟು ಮಹಿಳಾ ಮಂಡಳಿ ಅಧ್ಯಕ್ಷೆ ಶಾರದಾ ರವೀಂದ್ರ, ಟೈಲರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ದಯಾನಂದ ಕೋಟ್ಯಾನ್, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಪಾಲನ್, ಕೋಶಾಧಿಕಾರಿ ದಯಾನಂದ ಪ್ರಭು ಹಿರಿಯಡಕ, ಹಿರಿಯರಾದ ವಿಠಲ ಶೆಟ್ಟಿ, ಗುರುರಾಜ್ ಶೆಟ್ಟಿ ಉಪಸ್ಥಿತರಿದ್ದರು. ಶಿರಿಬೀಡು ನಗರ ಸಮಿತಿ ಅಧ್ಯಕ್ಷ ರವಿ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟಿ ತಿಂಗಳ ಸಾಂಪ್ರದಾಯಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಾಲಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶಾರದಾ ಆಚಾರ್ಯ ಸ್ವಾಗತಿಸಿದರು. ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್, ಶಿರಿಬೀಡು ನಗರ ಸಮಿತಿ ಕೋಶಾಧಿಕಾರಿ ಉಷಾ ಭಟ್ ಸಹಕರಿಸಿದರು.
ಟೈಲರ್ಸ್ ಅಸೋಸಿಯೇಷನ್ನಿಂದ ‘ಆಟಿಡೊಂಜಿ ದಿನ’
ಕರ್ನಾಟಕ ಸ್ಟೇಟ್ ಟೈಲರ್ಸ ಅಸೋಸಿಯೇಷನ್ ಶಿರಿಬೀಡು ನಗರ ಸಮಿತಿ ವತಿಯಿಂದ ಇಲ್ಲಿನ ಕಡಿಯಾಳಿಯ ಯು. ಕಮಲಾ ಬಾಯಿ ಹೈಸ್ಕೂಲ್‌ನಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಲೀಲಾವತಿ ಬೈಕಾಡಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.