ಮಣಿಪಾಲ ಸೆಂಟರ್ ಫಾರ್ ಇನ್‌ಫೆಕ್ಷಿಯಸ್ ಡಿಸೀಸಸ್ ವತಿಯಿಂದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೆದುಳಿನ ಸೋಂಕುಗಳ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಮಣಿಪಾಲ: ಮಣಿಪಾಲ ಸೆಂಟರ್ ಫಾರ್ ಇನ್‌ಫೆಕ್ಷಿಯಸ್ ಡಿಸೀಸಸ್ ವತಿಯಿಂದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೆದುಳಿನ ಸೋಂಕುಗಳ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಈ ವಿಚಾರಸಂಕಿರಣವನ್ನು ಸಿಐಡಿಎಸ್ ಟ್ರಾಪಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಉಪಸಮಿತಿ ಅಧ್ಯಕ್ಷರು ಹಾಗೂ ಕಾಶ್ಮೀರದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಾಂಕ್ರಾಮಿಕ ರೋಗಗಳ ವಿಭಾಗ ಮುಖ್ಯಸ್ಥ ಪ್ರೊ. ಅಜಾಜ್ ನಬಿ ಕೌಲ್ ಉದ್ಘಾಟಿಸಿದರು.ನಂತರ ನಡೆದ ವೈಜ್ಞಾನಿಕ ಗೋಷ್ಠಿಯಲ್ಲಿ ಕೆಎಂಸಿ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥೆ ಡಾ. ಕವಿತಾ ಸರವು ಅವರು, ನಮ್ಮ ಪ್ರದೇಶದಲ್ಲಿ ಬದಲಾಗುತ್ತಿರುವ ಹವಾಮಾನ ಮತ್ತು ಮಳೆ ಮಾದರಿ ಸೋಂಕುಗಳ ಹರಡುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.

ಎಂಸಿಎಚ್‌ಪಿಯ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಶೆಟ್ಟಿಗಾರ್, ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಮಹಾವಿದ್ಯಾಲಯದ ನರವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಏಂಜಲ್ ಮಿರಾಕ್ಲಿನ್ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸಿದರು.

ಉಪನ್ಯಾಸಗಳ ಬಳಿಕ ಮೆದುಳಿನ ಸೋಂಕುಗಳ ಮುಖ್ಯ ಪ್ರಕರಣಗಳ ಕುರಿತು ಮಣಿಪಾಲ ಕೆಎಂಸಿಯ ಡಾ. ಅರವಿಂದ್ ಎನ್. ಪ್ರಭು, ಡಾ. ಮುರಳೀಧರ ವರ್ಮ, ಡಾ. ಪೃಥ್ವಿಶ್ರೀ ರವೀಂದ್ರ ಮತ್ತು ಮಂಗಳೂರು ಕೆಎಂಸಿಯ ಡಾ. ಶರತ್ ಪಿ. ಎಸ್. ಸಂವಾದ ನಡೆಸಿದರು. ಮೆದುಳಿನ ಸೋಂಕುಗಳು ಈ ಪ್ರದೇಶದ ಹವಾಮಾನ ಪರಿಸ್ಥಿತಿಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದವರು ಅಭಿಪ್ರಾಯಪಟ್ಟರು.ವಿಚಾರ ಸಂಕಿರಣದಲ್ಲಿ 50ಕ್ಕೂ ಹೆಚ್ಚು ಪ್ರತಿನಿಧಿಗಳು ಖುದ್ದಾಗಿ ಹಾಗೂ 50ಕ್ಕೂ ಹೆಚ್ಚು ಮಂದಿ ಆನ್‌ಲೈನ್ ಮೂಲಕ ಭಾಗವಹಿಸಿದರು. ಅಧೀನಾ ಜೋಮನ್ ಕಾರ್ಯಕ್ರಮ ನಿರೂಪಿಸಿ, ಗೌತಮಿ ಎ. ಅವರು ವಂದಿಸಿದರು.