ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ, ಸಾಹಿತ್ಯದ ಪಾಠ ಮಾಡುವ ಕೆಲಸವನ್ನು ಅಕಾಡೆಮಿ, ವಿಶ್ವವಿದ್ಯಾಲಯ ಮಾಡಬೇಕು. ಆದರೆ, ಅಂತ ಕೆಲಸ ನಡೆಯದೆ ದೊಡ್ಡ ನಿರಾಸೆ ಮೂಡಿಸಿವೆ. ಇವತ್ತಿನ ಮಕ್ಕಳೇ ನಾಳಿನ ಸಾಹಿತ್ಯದ ಊರುಗೋಲು. ಆದರೆ, ಅವರನ್ನು ಪ್ರೋತ್ಸಾಹಿಸುವ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೋಲಾರಕನ್ನಡದ ಕೆಲಸ ಮಾಡಲು ರಾಜ್ಯದಲ್ಲಿ ಹಲವಾರು ಅಕಾಡೆಮಿ, ವಿಶ್ವವಿದ್ಯಾಲಯ, ಸಂಸ್ಥೆಗಳು ಇವೆ. ಅವುಗಳಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯತರ ರುಪಾಯಿ ಅನುದಾನ ನೀಡುತ್ತದೆ. ಆದರೆ, ಅವು ನಿಜವಾಗಿಯೂ ಕನ್ನಡ ಕಟ್ಟುವ, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸ ಮಾಡುತ್ತಿವೆಯೇ ಎಂದು ಸಾಹಿತಿ ಚ.ಹ ರಘುನಾಥ ಪ್ರಶ್ನಿಸಿದರು. ನಗರದ ರೈಲು ನಿಲ್ದಾಣದ ಬಳಿಯ ಚಿನ್ಮಯ ವಿದ್ಯಾಲಯದಲ್ಲಿ ಮೊರಸುನಾಡು ಪ್ರಕಾಶನ ಬಳಗದಿಂದ ಮಕ್ಕಳ ರಚನೆಯ, ಸ.ರಘುನಾಥ್ ಸಂಪಾದನೆಯ ‘ಬಿತ್ತನೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.ಸಾಹಿತ್ಯ ಅಕಾಡೆಮಿ ನಿರ್ಲಕ್ಷ್ಯ
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ, ಸಾಹಿತ್ಯದ ಪಾಠ ಮಾಡುವ ಕೆಲಸವನ್ನು ಅಕಾಡೆಮಿ, ವಿಶ್ವವಿದ್ಯಾಲಯ ಮಾಡಬೇಕು. ಆದರೆ, ಅಂತ ಕೆಲಸ ನಡೆಯದೆ ದೊಡ್ಡ ನಿರಾಸೆ ಮೂಡಿಸಿವೆ. ಇವತ್ತಿನ ಮಕ್ಕಳೇ ನಾಳಿನ ಸಾಹಿತ್ಯದ ಊರುಗೋಲು. ಆದರೆ, ಅವರನ್ನು ಪ್ರೋತ್ಸಾಹಿಸುವ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಇಂಥ ನಿರ್ಲಕ್ಷ್ಯಗಳ ನಡುವೆ ೩೨ ಮಕ್ಕಳನ್ನು ಒಂದು ಕಡೆ ಸೇರಿಸಿ ಸಾಹಿತ್ಯದ ಪಾಠ ಮಾಡುತ್ತಿರುವ ರಘುನಾಥ ಮೇಸ್ಟ್ರ ಕೆಲಸ ಅಭಿನಂದನಾರ್ಹ ಎಂದರು.ಮೊಬೈಲ್ ಇಂದು ಶಾಪವಾಗಿ ಪರಿಣಮಿಸಿದೆ. ಆ ಶಾಪವನ್ನು ಮಕ್ಕಳ ಕೈಗೂ ವರ್ಗಾಯಿಸಿದ್ದೇವೆ. ಇದರ ಬದಲು ಮಕ್ಕಳಿಗೆ ಪುಸ್ತಕ ಕೊಡುವುದರಿಂದ ಅವರ ಮನೋವಿಕಾಸ ಆಗುತ್ತದೆ. ಪುಸ್ತಕ ಓದಿ ಯಾರೂ ಕೆಟ್ಟವರಿಲ್ಲ. ಕಲ್ಪನಾಶಕ್ತಿಯೂ ಬೆಳೆಯುತ್ತದೆ. ಸದಾಶಯದ ಮೌಲ್ಯಗಳ ಬಿತ್ತನೆ, ವಿಚಾರಗಳ ಬಿತ್ತನೆ ನಿರಂತರವಾಗಿ ನಡೆಯಬೇಕು. ಮಕ್ಕಳ ಬಗ್ಗೆ ಪ್ರೀತಿ, ಕಾಳಜಿ ಇದ್ದರೆ ಮೊದಲು ಪೋಷಕರು ಮಕ್ಕಳ ಸಾಹಿತ್ಯ ಓದಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೃತಿ ಬಿಡುಗಡೆ ಮಾಡಿ ಮಾತನಾಡಿದ ತಾರಾ ಡಾಕ್ಟರ್ ವೆಂಕಟಪ್ಪ, ’ಮಕ್ಕಳಲ್ಲಿ ಸುಪ್ತವಾಗಿರುವ ಸಾಹಿತ್ಯ ಉತ್ತೇಜಿಸುವ ಕೆಲಸ ನಡೆಯಬೇಕು. ಮಕ್ಕಳೇ ರಚಿಸಿರುವ ಕವಿತೆ ಹಾಗೂ ರೇಖಾ ಚಿತ್ರ ಸೊಗಸಾಗಿ ಮೂಡಿಬಂದಿವೆ’ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, ‘ಮಕ್ಕಳ ದನಿಗೆ ಪುಸ್ತಕ ರೂಪ ಕೊಟ್ಟು ಸಾಹಿತ್ಯ ಲೋಕಕ್ಕೆ ಮಕ್ಕಳನ್ನು ಪದಾರ್ಪಣೆ ಮಾಡಿಸಿದ್ದಾರೆ. ಕನಸು ಕಟ್ಟಿಕೊಡುವ ಪ್ರಯತ್ನ ನಡೆದಿದೆ. ಇದರ ರೂವಾರಿ ಸ.ರಘುನಾಥ’ ಎಂದು ಹೇಳಿದರು.ರಿಸರ ಲೇಖಕ ಎಚ್.ಎ.ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸಪುರದ ವೈದ್ಯ ಡಾ.ವೆಂಕಟಾಚಲ, ಕೃತಿಯ ಸಂಪಾದಕ ಸ.ರಘುನಾಥ ಮಾತನಾಡಿದರು.