ಪರಿಶ್ರಮವನ್ನು ಗಮನಿಸಿ ಅವರ ದ್ಯೇಯೋದ್ದೇಶದ ಈಡೆರಿಕೆಗೆ ಪ್ರಯತ್ನಿಸು
ಕನ್ನಡಪ್ರಭ ವಾರ್ತೆ ಬನ್ನೂರುಸ್ವದೇಶಿ ವಸ್ತುಗಳನ್ನು ಬಳಸಿ ಸಾಂಪ್ರದಾಯಕ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯ ಮತ್ತು ದೇಶದ ಬೆನ್ನೆಲುಬಾದ ರೈತರನ್ನು ಬೆಳಸಿ ಎಂದು ಮೈಸೂರು ಗ್ರಾಮಾಂತರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಎನ್.ಎಂ. ರಾಮಚಂದ್ರ ತಿಳಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್‌ವತಿಯಿಂದ ಸ್ವದೇಶಿ ಬಳಸಿ ದೇಶ ಬೆಳಸಿ ಎಂದು ಹಮ್ಮಿಕೊಂಡಿದ್ದ ಸೈಕಲ್ ಜಾಗೃತಿ ಜಾಥ ಮಂಡ್ಯದಿಂದ ಭಾನುವಾರ ಪಟ್ಟಣಕ್ಕೆ ಆಗಮಿಸಿದ ವೇಳೆ ಸ್ವಾಗತಿಸಿ ಅವರು ಮಾತನಾಡಿದರು.ಇಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್, ರೋಟರಿ ಸಂಸ್ಥೆ, ಆರ್‌ಎಸ್‌ಎಸ್, ಕ್ರೀಡಾಭಾರತಿ ಸಹಯೋಗದಲ್ಲಿ ನಡೆಯುತ್ತಿರುವ ಈ ಅಭಿಯಾನ ಭಾನುವಾರ ಬೆಂಗಳೂರಿನಿಂದ ಮಂಡ್ಯ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿ ಜನರಿಗೆ ಜಾಗೃತಿ ಮೂಢಿಸುತ್ತಿರುವುದು ಶ್ಲಾಘನೀಯವಾಗಿದ್ದು, ಎಲ್ಲರು ಅವರ ಪರಿಶ್ರಮವನ್ನು ಗಮನಿಸಿ ಅವರ ದ್ಯೇಯೋದ್ದೇಶದ ಈಡೆರಿಕೆಗೆ ಪ್ರಯತ್ನಿಸುವ ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.ನಂತರ ಮಾತನಾಡಿದ ರವಿ ಮಿನಿಸ್ವಾಮಿ, ನಮ್ಮ 16 ಜನರ ತಂಡ ಸ್ವದೇಶಿ ಬಳಸಿ ದೇಶ ಬೆಳಸಿ ಎನ್ನುವಂತ ಉದ್ದೇಶದಿಂದ 3500 ಕಿ.ಮೀ. ಕ್ರಮಿಸಿ ಜನರಿಗೆ ಜಾಗೃತಿ ನೀಡುವಂತ ಕಾರ್ಯಕ್ರಮ ಹಮ್ಮಿಕೊಂಡು, ಸಂಸ್ಕೃತಿ ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಾರ್ಯಕ್ರಮ ಜಾಥ ಹೊರಟಿದ್ದೇವೆ ಎಂದರು.ಸ್ವದೇಶಿ ವಸ್ತುಗಳ ಬಳಕೆ ಮತ್ತು ಸ್ವದೇಶಿ ಆಹಾರ ಸೇವನೆ ಮೂಲಕ ದೇಶದ ಪ್ರಗತಿಗೆ ನಾಂದಿ ಹಾಡೋಣ ಎಂದು ಹೇಳಿದರು.ಬಿಜೆಪಿ ಟೌನ್ ಅಧ್ಯಕ್ಷ ಕಾಳೇಗೌಡ, ಗಣೇಶ್, ಅತ್ತಳ್ಳಿ ದೇವರಾಜು, ಮೆಡಿಕಲ್ ಚನ್ನೇಗೌಡ ಸೇರಿದಂತೆ ಎಲ್ಲಾ ಮುಖಂಡರು ಇದ್ದರು.