ಹೊಸ ಯೋಜನೆಗಳ ಮೂಲಕ ಜನಪರವಾಗಿ ಕಾರ್ಯ ನಿರ್ವಹಿಸಿ: ಶಾಸಕ ಜಿ.ಎಚ್.ಶ್ರೀನಿವಾಸ್ ಕರೆ

| Published : Aug 27 2024, 01:40 AM IST

ಹೊಸ ಯೋಜನೆಗಳ ಮೂಲಕ ಜನಪರವಾಗಿ ಕಾರ್ಯ ನಿರ್ವಹಿಸಿ: ಶಾಸಕ ಜಿ.ಎಚ್.ಶ್ರೀನಿವಾಸ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಶ್ರೀ ರೇವಣಸಿದ್ದೇಶ್ವರ ಸಂಘದಲ್ಲಿ ಹೊಸ ಯೋಜನೆಗಳನ್ನು ತರುವ ಮೂಲಕ ಜನಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆನೀಡಿದರು.

ಶ್ರೀ ರೇವಣಸಿದ್ದೇಶ್ವರ ಪ್ರಾ.ಕೃ.ಪ.ಸ. ಸಂಘಕ್ಕೆ ನೂತನ ಅಧ್ಯಕ್ಷರಾಗಿ ಟಿ.ಎಸ್.ಪ್ರಕಾಶ್ ವರ್ಮ ಆಯ್ಕೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ರೇವಣಸಿದ್ದೇಶ್ವರ ಸಂಘದಲ್ಲಿ ಹೊಸ ಯೋಜನೆಗಳನ್ನು ತರುವ ಮೂಲಕ ಜನಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆನೀಡಿದರು.

ಸೋಮವಾರ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಸ್.ಪ್ರಕಾಶ್ ವರ್ಮ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 105 ವರ್ಷಗಳ ಇತಿಹಾಸ, 2900 ಜನ ಸದಸ್ಯರನ್ನು ಹೊಂದಿದೆ. ಪ್ರಗತಿಗೆ ಪೂರಕವಾಗಿ, ರೈತರ ಪರವಾಗಿರುವ ಸಂಸ್ಥೆಯಿಂದ ವಾಹನ ಸಾಲ, ಅಡಕೆ ಸಾಲ ಇತ್ಯಾದಿ ವಿವಿಧ ಬಗೆ ಸಾಲ ನೀಡಿದೆ. ಹೊಸ ಯೋಜನೆಗಳನ್ನು ತರಬೇಕು. ಈ ನಿಟ್ಟಿನಲ್ಲಿ ಜನರ ಪರವಾಗಿ ಕಾರ್ಯ ಮಾಡಿರಿ ಎಂದು ಸಲಹೆ ನೀಡಿದರು.ಸಾಹಿತಿ ಮೋಹನ್ ಕುಮಾರ್ ಮಾತನಾಡಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭ್ರಷ್ಠಾಚಾರ ರಹಿತವಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದೆ. ಸಾರ್ವಜನಿಕವಾಗಿ ಕಾಳಜಿ ಹೊಂದಿದೆ ಎಂದ ಅವರು ನೂತನ ಅದ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಅವರು ಇನ್ನೂ ಉನ್ನತ ಸ್ಥಾನ ಹೊಂದಲಿ ಎಂದು ಆಶಿಸಿದರು.

ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವು ರೈತರಿಗೆ ಉತ್ತಮವಾದ ಸೇವೆ ಸಲ್ಲಿಸಿದೆ, ಸಂಘಕ್ಕೆ ಇತಿಹಾಸವಿದೆ,

ಷೇರುದಾರರ ಆಶಯಕ್ಕೆ ತಕ್ಕಂತೆ ಸ್ಪಂದಿಸಿದೆ, ರೈತರಿಗೆ ಇದರಿಂದ ಸಹಕಾರ ದೊರೆಯಲಿ ಎಂದು ಅವರು ಹೇಳಿದರು. ಸಂಘದ ನಿರ್ದೇಶಕ ಟಿ.ಜಿ.ಮಂಜುನಾಥ್ ಮಾತನಾಡಿ ಸಹಕಾರ ಸಂಘವನ್ನು ಉನ್ನತೀಕರಿಸಿ, ರೈತರಿಗೆ ಹೆಚ್ಚಿನ ಸಹಕಾರ ನೀಡಲು ಪ್ರಯತ್ನಿಸಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ದೇಶದಲ್ಲಿ 9 ಲಕ್ಷ ಪತ್ತಿನ ಸಹಕಾರ ಸಂಘಗಳು, ಇಡೀ ದೇಶದಲ್ಲಿ 7ವರೆ ಲಕ್ಷ ಹಳ್ಳಿಗಳಲ್ಲಿ 6,44,000 ಗ್ರಾಮಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು ಸಹಕಾರಿ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರವಾಗಿದೆ. ಸಹಕಾರಿ ಸಂಘಗಳು ಜನರ ಜೀವನದ ಗುಣಮಟ್ಟ ಕಾಪಾಡಬೇಕು ಶ್ರೀ ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕಿನ ರೈತರ ವಿಶ್ವಾಸಾರ್ಹ ಸಹಕಾರ ಸಂಘವಾಗಿದ್ದು ಷೇರುದಾರರ ಹಿತ ಕಾಪಾಡುತ್ತಿದೆ ಎಂದು ತಿಳಿಸಿದರು.

ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಶ್ರೀ ರೇವಣಸಿದ್ದೇಶ್ವರ ಸಹಕಾರ ಸಂಘ 1919ರಲ್ಲಿ ಪ್ರಾರಂಭವಾಯಿತು. ಸಂಘದ ಹಿರಿಯರು, ಮಹನೀಯರನ್ನುನಾವು ಸ್ಮರಿಸಬೇಕು, ಶೂನ್ಯ ಬಂಡವಾಳದಿಂದ ಆರಂಭವಾದ ಸಂಘ ಇಂದು 2900 ಸದಸ್ಯರನ್ನು ಹೊಂದಿದ್ದು, 600 ಜನರಿಗೆ ಶೇ. ಸೊನ್ನೆ ಬಡ್ಡಿಯಲ್ಲಿ ಅರ್ಥಿಕ ನೆರವು ನೀಡಿದೆ. ಸಂಘದ ಚುನಾವಣೆಗಳಲ್ಲಿ ಎಲ್ಲ ಸಮಾಜದವರಿಗೂ ಸಾಮಾಜಿಕ ನ್ಯಾಯ ಕೊಡಲಾಗಿದೆ. ಸಂಘಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ನನಗೆ ಹೆಚ್ಚು ಖುಷಿ ತಂದಿದೆ. ರೈತರಿಗೆ ಕೋಟ್ಯಂತರ ರು. ಅರ್ಥಿಕ ನೆರವು ನೀಡಿ, ಎಲ್ಲರ ಸಹಕಾರದಿಂದ ಸಂಘವನ್ನು ಹೆಚ್ಚು ಉತ್ತಮವಾಗಿ ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು.

ಪುರಸಭಾಧ್ಯಕ್ಷ ವಸಂತಕುಮಾರ್ (ಕವಾಲಿ) ಸಂಘದ ಉಪಾಧ್ಯಕ್ಷ ಪರುಶುರಾಮ್, ನಿರ್ದೇಶಕರಾದ ಟಿ.ವಿ.ಗಿರಿರಾಜ್, ಸುರೇಶ್, ರಾಮಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ಬೈಟು ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮತ್ತಿತರರು ಮಾತನಾಡಿದರು.ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಕಾರ್ಯದರ್ಶಿ ಮೋಹನ್ ರಾಜ್, ಸಂಘದ ಸಿಬ್ಬಂದಿ ಭಾಗವಹಿಸಿದ್ದರು. 26ಕೆಟಿಆರ್.ಕೆ.04ಃ

ತರೀಕೆರೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಅವರ ಅಭಿನಂದನಾ ಸಮಾರಂಭದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಸಂಘದ ನಿರ್ದೇಶಕರು ಇದ್ದರು.