ಅಧಿಕಾರಿಗಳ ದುರ್ನಡತೆ ಬಗ್ಗೆ ದೂರು ನೀಡಿದರೆ ಕ್ರಮ

| Published : Sep 14 2024, 01:49 AM IST

ಅಧಿಕಾರಿಗಳ ದುರ್ನಡತೆ ಬಗ್ಗೆ ದೂರು ನೀಡಿದರೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ವೈಯಕ್ತಿಕ ತೊಂದರೆಗಳು ಹಾಗೂ ನ್ಯಾಯಾಲಯದ ವ್ಯಾಜ್ಯ ಸಮಸ್ಯೆಗಳನ್ನು ಬಿಟ್ಟು ಸರ್ಕಾರಿ ಅಧಿಕಾರಿಗಳ ದುರ್ನಡತೆ, ಕೆಲಸ ಮಾಡಲು ಆಡಳಿತದ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟು ಕೆಲಸ ವಿಳಂಬ ಮಾಡುತ್ತಿದ್ದರೆ, ಲೋಕಾಯುಕ್ತ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರಾದ ಟಿ.ಮಲ್ಲೇಶ ಹೇಳಿದರು.

ಕನ್ನಡಪ್ರಭ ವಾರ್ತೆ ನಿಡಗುಂದಿ

ವೈಯಕ್ತಿಕ ತೊಂದರೆಗಳು ಹಾಗೂ ನ್ಯಾಯಾಲಯದ ವ್ಯಾಜ್ಯ ಸಮಸ್ಯೆಗಳನ್ನು ಬಿಟ್ಟು ಸರ್ಕಾರಿ ಅಧಿಕಾರಿಗಳ ದುರ್ನಡತೆ, ಕೆಲಸ ಮಾಡಲು ಆಡಳಿತದ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟು ಕೆಲಸ ವಿಳಂಬ ಮಾಡುತ್ತಿದ್ದರೆ, ಲೋಕಾಯುಕ್ತ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರಾದ ಟಿ.ಮಲ್ಲೇಶ ಹೇಳಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ನಡೆದ ಲೋಕಾಯುಕ್ತ ಕಚೇರಿಯಿಂದ ಸಾರ್ವಜನಿಕ ದೂರು ಅರ್ಜಿಗಳ ಸ್ವೀಕಾರ, ಅಹವಾಲುಗಳ ವಿಲೇವಾರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವೈಯಕ್ತಿಕ ಸಮಸ್ಯೆಗಳನ್ನು ಇಲ್ಲಿ ಪರಿಹಾರ ಮಾಡಲಾಗಲ್ಲ ಹಾಗೂ ನ್ಯಾಯಾಲಯ ವ್ಯಾಜ್ಯಗಳ ಬಗ್ಗೆ ನ್ಯಾಯಾಲಯದಲ್ಲಿ ಪರಿಹಾರ ಮಾಡಿಕೊಳ್ಳಬೇಕು. ಸರ್ಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳು ಕಚೇರಿಗಳಲ್ಲಿ ವಿನಾಕಾರಣ ತೊಂದರೆ ಕೊಡುತ್ತಿದ್ದರೆ ಮತ್ತು ಹಣ ಬೇಡಿಕೆ ಇಟ್ಟಿದ್ರೆ ಈ ಬಗ್ಗೆ ದೂರು ನೀಡಿದರೆ, ಖಂಡಿತ ತಮಗೆ ನ್ಯಾಯ ಒದಗಿಸಲಾಗುವುದು ಎಂದರು.ಲೋಕಾಯುಕ್ತ ಸಂಸ್ಥೆಯು ಕಾನೂನು ಪ್ರಕ್ರಿಯೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸುತ್ತದೆ. ನೊಂದವರು ನಿರ್ಭಿತಿಯಿಂದ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಲು ಮುಂದಾಗಬೇಕು. ಸಂಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇಡಬೇಕು. ನೊಂದವರ, ಅನ್ಯಾಯಕ್ಕೆ ಒಳಗಾದವರ ಬೆಂಬಲಕ್ಕೆ ಸಂಸ್ಥೆ ದೃಢವಾಗಿ ನಿಲ್ಲುತ್ತದೆ. ಈ ಬಗ್ಗೆ ಯಾವುದೇ ಸಂಶಯಬೇಡ ಎಂದು ಭರವಸೆ ನೀಡಿದರು.ದೂರು ನೀಡುವ ಸಾರ್ವಜನಿಕರು ಸಂಬಂಧಿಸಿದ ಇಲಾಖೆಯ ವಿರುದ್ಧದ ದೂರುಗಳಿಗೆ ಕನಿಷ್ಠ ದಾಖಲೆಗಳನ್ನು ಸಲ್ಲಿಸಬೇಕು. ದಾಖಲೆಗಳಿಲ್ಲದೇ ದೂರು ಸಲ್ಲಿಸಿದರೆ ಪ್ರಯೋಜನವಿಲ್ಲ. ಆದ್ದರಿಂದ ಸ್ವಲ್ಪವಾದ್ರೂ ದಾಖಲೆ ನೀಡಬೇಕು. ರೈತರ ಜಮೀನಿನಲ್ಲಿ ಅಳವಡಿಸಿಲಾದ 400 ಕೆವಿ ವಿದ್ಯುತ್ ಕಂಬಗಳ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಪಾಲುದಾರಿಕೆಯಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿ ಪರಿಹಾರ ನೀಡಿ ಅನ್ಯಾಯ ಮಾಡಲಾಗಿದೆ ಎಂದು ರೈತರೊಬ್ಬರು ದಾಖಲೆರಹಿತ ಅರ್ಜಿ ಸಲ್ಲಿಸಿದ್ದಾರೆ. ಆದರೆ, ತಾರತಮ್ಯವಾದ ರೈತರ ಪರಿಹಾರದ ಮಾಹಿತಿ ಪಡೆದು ದಾಖಲೆ ಸಹಿತ ದೂರು ನೀಡಿದರೆ, ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಂದಾಗಬಹುದು ಎಂದರು.ಒಟ್ಟು ಎಂಟು ದೂರುಗಳು ಬಂದಿದ್ದು, ಕ್ಷಣದಲ್ಲಿ ಮೂರು ದೂರುಗಳ ಪರಿಹಾರ ಮಾಡಲಾಗಿದೆ. ಉಳಿದಂತೆ ಒಂದು ವೈಯಕ್ತಿಕ ದೂರು ಬಂದಿದ್ದು, ಅದು ನಮಗೆ ಬರುವುದಿಲ್ಲ. ಮತ್ತೊಂದು ನ್ಯಾಯಾಲಯ ವ್ಯಾಜ್ಯದ ದೂರು ಬಂದಿದ್ದು. ಅದನ್ನು ನ್ಯಾಯಾಲಯ ತೀರ್ಪು ನೀಡುತ್ತದೆ. ಅದರಲ್ಲಿ ನಮ್ಮ ಪಾಲುದಾರಿಕೆ ಇರಲ್ಲ. ಇನ್ನುಳಿದ ಮೂರು ದೂರುಗಳ ಬಗ್ಗೆ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಡಿವೈಎಸ್‌ಪಿ ಸುರೇಶ ರೆಡ್ಡಿ ಎಂ.ಎಸ್, ಆನಂದ ಟಕ್ಕಣ್ಣವರ, ಆನಂದ ಡೋಣಿ, ತಹಸೀಲ್ದಾರ್ ಎ.ಡಿ.ಅಮರವಾದಗಿ, ತಾಪಂ ಇಒ ವೆಂಕಟೇಶ ವಂದಾಲ, ಎ.ಜಿ ಪಡಶೆಟ್ಟಿ, ಎಸ್.ಟಿ.ಕಟ್ಟೆ ಸೇರಿದಂತೆ ಇತರರಿದ್ದರು.