ಗಣಿತ ಕಲಿಕೆ ಮಕ್ಕಳ ವ್ಯಕ್ತಿತ್ವದ ಮೇಲೆ ಪರಿಣಾಮ

| Published : Sep 14 2024, 01:49 AM IST

ಸಾರಾಂಶ

ಗಣಿತ ಕಲಿಕಾ ಆಂದೋಲನದ ಗಣಿತ ಸ್ಪರ್ಧೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಇದ್ದು

ಲಕ್ಷ್ಮೇಶ್ವರ: ಮಕ್ಕಳಲ್ಲಿ ಗಣಿತ ಕಲಿಕೆ ದೃಢಗೊಂಡರೆ ಅದರ ಧನಾತ್ಮಕ ಪರಿಣಾಮ ವ್ಯಕ್ತಿತ್ವದ ಮೇಲೆ ಉಂಟಾಗುತ್ತದೆ. ಗಣಿತದ ಮೂಲಕ ನಾವು ನಮ್ಮ ವ್ಯಕ್ತಿತ್ವ ವಿಕಸಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎನ್.ನಾಯ್ಕ ಹೇಳಿದರು.

ಶುಕ್ರವಾರ ಸಮೀಪದ ಹುಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿರಹಟ್ಟಿ ಹಾಗೂ ಗ್ರಾಪಂ ಹುಲ್ಲೂರು ಸಹಯೋಗದಲ್ಲಿ ಜರುಗಿದಗಣಿತ ಕಲಿಕಾ ಆಂದೋಲನದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯ ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಣಿತ ವಿಷಯದಲ್ಲಿ ಮಕ್ಕಳಲ್ಲಿರುವ ಭಯ ದೂರ ಮಾಡಿ ಅವರಲ್ಲಿ ಗಣಿತ ಬಗ್ಗೆ ಆಶಕ್ತಿ ಹುಟ್ಟುವಂತೆ ಬೋಧಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಮಕ್ಕಳಿಗೆ ಗಣಿತದ ಸೂತ್ರಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಿ ಅವರಲ್ಲಿ ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲಿ ಅದು ಸಿಹಿ ಹೋಳಿಗೆಯಂತಾಗಬೇಕು. ಗಣಿತ ವಿಷಯದಲ್ಲಿ ಈಗ ಸಾಕಷ್ಟು ಬದಲಾವಣೆಗಳು ಆಗಿದ್ದು ವಿದ್ಯಾರ್ಥಿ ಸ್ನೇಹಿ ಪಠ್ಯದಲ್ಲಿ ಗಣಿತ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಸುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಹೇಳಿದರು.

ಈ ವೇಳೆ ಬಿಆರ್‌ಪಿ ಈಶ್ವರ ಮೆಡ್ಲೇರಿ ಮಾತನಾಡಿ, ಗಣಿತ ಕಲಿಕಾ ಆಂದೋಲನದ ಗಣಿತ ಸ್ಪರ್ಧೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಇದ್ದು, ಇದು ಅವರಲ್ಲಿ ಗಣಿತದ ಕಲಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.ಈ ಪರೀಕ್ಷೆಗಳ ಫಲಿತಾಂಶ ವಿಶ್ಲೇಷಿಸಿ ಗಣಿತದ ಕಲಿಕೆಗೆ ಮತ್ತಷ್ಟು ಪೂರಕ ಯೋಜನೆ ರೂಪಿಸಲಾಗುತ್ತದೆ ಎಂದರು.

ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಬರಮಪ್ಪ ಹಳ್ಳಿಗೊರವರ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪ್ರೌಢಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಸುರೇಶ ಸಾಸಲವಾಡ ಅತಿಥಿಪರ ಮಾತುಗಳನ್ನಾಡಿದರು.

ಗ್ರಾಪಂ ಸದಸ್ಯ ಪಿ.ಪಿ. ಪಾಟೀಲ,ಯಲ್ಲಪ್ಪ ನರಸೋಜಿ, ಶಿಕ್ಷಣ ಪ್ರೇಮಿ ಮಾಬೂಲಿ ಗಾಡಗೋಳಿ, ಶಂಕ್ರಪ್ಪ ಮಾಗಡಿ, ಹಸನಸಾಬ್‌ ನದಾಫ್‌, ಬಸವರಾಜ ಮೂಕಿ, ಬಸವರಾಜ ರಗಟಿ, ಫಕೀರೇಶ ರಗಟಿ. ಶಿಕ್ಷಕ ಎಸ್.ಜಿ. ರಾಜೋಳಿ, ಆರ್.ಜಿ. ಈಳಿಗೇರ, ಡಿ.ಎಲ್. ಪಾಟೀಲ, ಎಫ್.ಪಿ. ಡಂಬಳ, ಎಚ್.ಕೆ.ಮಸೂತಿ, ಜಿ.ಎಂ. ತಿರ್ಲಾಪುರ, ಜಿ.ಜಿ.ಸೂರಣಗಿ ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು. ಹುಲ್ಲೂರು ಗ್ರಾಪಂ ವ್ಯಾಪ್ತಿಯ 4,5 ಹಾಗೂ 6 ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಖ್ಯೋಪಾಧ್ಯಾಯ ಎಸ್.ಎಂ. ಲಮಾಣಿ ವಂದಿಸಿದರು. ದೈಹಿಕ ಶಿಕ್ಷಕ ಎ.ಎಂ.ಗುತ್ತಲ ನಿರೂಪಿಸಿದರು. ಸಿಆರ್ ಪಿ ಗಿರೀಶ ನೇಕಾರ ಸ್ವಾಗತಿಸಿದರು.ಲಾವಣ್ಯ ಮಾಗಡಿ ಪ್ರಾರ್ಥಿಸಿದಳು.