ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದೈವಭೂಮಿ ಎಂದು ಕರೆಸಿಕೊಳ್ಳುತ್ತಿರುವ ಡಾ. ರಾಜಕುಮಾರ್ ಪುಣ್ಯಭೂಮಿಯ ಬಗ್ಗೆ ನಟ ಚೇತನ್ ಹಗುರವಾಗಿ ಮಾತನಾಡಿರುವುದು ಸಣ್ಣತನವಾಗಿದ್ದು ಅಭಿಮಾನಿಗಳಿಗೆ ಮಾಡಿದ ಅವಮಾನವಾಗಿದೆ ಎಂದು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ತಹಸೀಲ್ದಾರ್ ಶಂಕರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪಟ್ಟಣದ ತಾಲೂಕು ಕಛೇರಿಯಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್, ಕನ್ನಡಿಗರ ಮನೆ ಮನೆಯ ಮನದ ಕನ್ನಡ ರಕ್ತ ಅಣ್ಣ ಅವರ ವ್ಯಕ್ತಿತ್ವ, ನಡೆ-ನುಡಿ ಸಮಾಜಕ್ಕೆ ನೀಡಿರುವ ಸಂದೇಶವಾಗಿದ್ದು ರಾಜ್ಯ, ರಾಷ್ಟ್ರ, ಅಮೆರಿಕಾದವರು ನೀಡಿರುವ ಪ್ರಶಸ್ತಿಗಳು ಬ್ರಿಟನ್ ಗ್ರಂಥಾಲಯದಲ್ಲಿ ಪ್ರಪಂಚದ ಮಹಾತ್ಮರ ದಾಖಲೆಯಲ್ಲಿ ಇದ್ದು ದೇಶದ ಹೆಸರಾಂತ ನಟರಿಂದ ಪ್ರಶಂಶಿತರಾದ ಡಾ. ರಾಜಕುಮಾರ್ ಅವರ ಬಗ್ಗೆ ಅಧ್ಯಯನ ಮಾಡದೆ ಅವರ ಸರಿಸಾಟಿ ಬಗ್ಗೆ ಅರಿವಿಲ್ಲದೆ ಅಹಿಂಸಾ ಚೇತನ್ ಮಾತನಾಡಿರುವುದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.
ಗೋಕಾಕ್ ಚಳುವಳಿ ಪ್ರಾರಂಭಿಕ ಹೋರಾಟಗಾರ ಪುಟ್ಟಣ್ಣ ಗೋಕಾಕ್, ಬಾಗೂರು ನವಿಲೆ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಸಿ. ಶಂಕರಲಿಂಗೇಗೌಡ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಣೇಶ್, ಡಾ. ರಾಜಕುಮಾರ್ ಸಂಘದ ಮಹೇಶ್ ಬಿ. ಎ. , ರವಿಕುಮಾರ್, ಅಕ್ಕನಹಳ್ಳಿ ಸುರೇಶ್, ಆದಿಶಕ್ತಿ ಇಂಡಸ್ಟ್ರೀಸ್ ಚಂದ್ರೇಗೌಡ, ಮೆಳೆಯಮ್ಮ ಆಟೋ ಸಂಘ ನಿಕಟ ಪೂರ್ವ ಅಧ್ಯಕ್ಷ ಅಶೋಕ್ ಮತ್ತಿತರರಿದ್ದರು.