ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ -ಪರ್ಪಸ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್‌ನ 213ನೇ ಶಾಖೆಯು ಚನ್ನಗಿರಿ ಪಟ್ಟಣದಲ್ಲಿ ಆರಂಭ ಆಗಿರುವುದು ಈ ಭಾಗದ ಜನರಿಗೆ ವರದಾನವಾಗಿದೆ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ.
- 213ನೇ ಶಾಖೆ ಉದ್ಘಾಟಿಸಿ ಮಾಜಿ ಸಂಸದ ಸಿದ್ದೇಶ್ವರ್ ಅಭಿಮತ । ಶಾಸಕ ಯತ್ನಾಳ್ ಭಾಗಿ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ -ಪರ್ಪಸ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್‌ನ 213ನೇ ಶಾಖೆಯು ಚನ್ನಗಿರಿ ಪಟ್ಟಣದಲ್ಲಿ ಆರಂಭ ಆಗಿರುವುದು ಈ ಭಾಗದ ಜನರಿಗೆ ವರದಾನವಾಗಿದೆ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.ಪಟ್ಟಣದ ಜಿ.ಎಂ.ಎಸ್. ಕಾಂಪ್ಲೆಕ್ಸ್‌ನಲ್ಲಿ 213ನೇ ಶಾಖೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಈ ಸಂಸ್ಥೆ ಅಧ್ಯಕ್ಷರಾಗಿರುವ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ದೂರದೃಷ್ಠಿ ಇಟ್ಟುಕೊಂಡು ಪ್ರಾರಂಭಿಸಿರುವ ಸಂಸ್ಥೆಯಾಗಿದೆ. ಸಂಸ್ಥೆ ಪ್ರಾರಂಭಗೊಂಡು 20 ವರ್ಷ ಕಳೆದಿದ್ದು ಈ ಅವಧಿಯಲ್ಲಿ 83843 ಜನ ಸದಸ್ಯರನ್ನು ಹೊಂದಿ ₹79.75 ಕೋಟಿ ಷೇರು ಬಂಡವಾಳ ಹೊಂದಿರುವುದು ಈ ಸೊಸೈಟಿ ಪ್ರಗತಿಗೆ ಹಿಡಿದ ಕೈಗನ್ನಡಿ. ಈ ಸಂಸ್ಥೆ ವತಿಯಿಂದ 5 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿರುವುದು ಶ್ಲಾಘನೀಯ ಎಂದರು.
ಸೊಸೈಟಿ ಸಂಸ್ಥಾಪಕ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ನನ್ನ ಸೊಸೈಟಿ ವತಿಯಿಂದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಜೋತೆಗೆ ಕೇವಲ ಮೂರು ಜನ ಸದಸ್ಯರ ಜಾಮೀನನ್ನು ಪಡೆದು ₹5 ಲಕ್ಷದವರೆಗೆ ಸಾಲ ನೀಡಲಿದೆ. ಸೊಸೈಟಿಯೊಂದಿಗೆ ಉತ್ತಮ ವ್ಯವಹಾರ ಇಟ್ಟುಕೊಂಡವರಿಗೆ ₹10 ಲಕ್ಷದವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ. ವಿಜಯಪುರ ನಗರದಲ್ಲಿ ವರ್ಷದ 365 ದಿನಗಳು ದಿನದ 24 ಗಂಟೆಗಳ ಕಾಲ ಹಣಕಾಸು ವ್ಯವಹಾರ ನಿರ್ವಹಿಸುವ ಶಾಖೆ ತೆರೆಯಲಾಗಿದೆ. ನಮ್ಮ ಸಂಸ್ಥೆ ವತಿಯಿಂದ ಸಕ್ಕರೆ ಕಾರ್ಖಾನೆ, ಗೋಶಾಲೆ, ಪೆಟ್ರೊಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸೊಸೈಟಿಯ ಠೇವಣಿಗಳ ಬಗ್ಗೆ ವಿವರಿಸಿದರು.ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ತುಮ್ ಕೋಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಸೊಸೈಟಿ ಅಧ್ಯಕ್ಷ ರಾಮನಗೌಡ ಬ. ಪಾಟೀಲ, ತಿಪ್ಪಗೊಂಡನಹಳ್ಳಿ ಶಿವಲಿಂಗಪ್ಪ, ಹೊನ್ನೇಬಾಗಿ ಓಂಕಾರಪ್ಪ, ಡಿ.ಎಂ.ಮಂಜುನಾಥ್, ನವೀನ್, ತಿಮ್ಮೇಶ್, ಸೋಸೈಟಿಯ ವ್ಯವಸ್ಥಾಪಕ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.- - -
-2ಕೆಸಿಎನ್ಜಿ1:ಚನ್ನಗಿರಿ ಪಟ್ಟಣದ ಜಿ.ಎಂ.ಎಸ್. ಕಾಂಪ್ಲೆಕ್ಸ್‌ನಲ್ಲಿ 213ನೇ ಶಾಖೆ ಉದ್ಘಾಟನೆಯನ್ನು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನೆರವೇರಿಸಿದರು. ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತರರು ಇದ್ದರು.