ಪ್ರಸ್ತುತ ಕಾಲ ಘಟ್ಟದಲ್ಲಿ ಎಐ, ಎಂಐ ನೂತನ ತಂತ್ರಜ್ಞಾನಗಳ ಅಳವಡಿಕೆ ಅಗತ್ಯ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಜೆ.ದಿವ್ಯಶ್ರೀ ಹೇಳಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಎಐ, ಎಂಐ ನೂತನ ತಂತ್ರಜ್ಞಾನಗಳ ಅಳವಡಿಕೆ ಅಗತ್ಯ-ದಿವ್ಯಶ್ರೀ

ಕೃತಕ ಬುದ್ದಿಮತ್ತೆ (ಎಐ) ನಾಳೆಯ ನೈಜಪ್ರಪಂಚದ ಪರಿಕಲ್ಪನೆ ಕುರಿತ ಉಪನ್ಯಾಸಕನ್ನಡಪ್ರಭ ವಾರ್ತೆ, ಚಾಮರಾಜನಗರ

ಪ್ರಸ್ತುತ ಕಾಲ ಘಟ್ಟದಲ್ಲಿ ಎಐ, ಎಂಐ ನೂತನ ತಂತ್ರಜ್ಞಾನಗಳ ಅಳವಡಿಕೆ ಅಗತ್ಯ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಜೆ.ದಿವ್ಯಶ್ರೀ ಹೇಳಿದರು.

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜು ಸಭಾಂಗಣದಲ್ಲಿ ಗಣಕವಿಜ್ಞಾನ ವಿಭಾಗ ಹಾಗೂ ಕಾಲೇಜು ಆಂತರೀಕ ಗುಣಮಟ್ಟ ಖಾತರಿ ಸಮಿತಿ ವತಿಯಿಂದ ಏರ್ಪಡಿಸಿದ್ದ ಕೃತಕ ಬುದ್ದಿಮತ್ತೆ (ಎಐ) ನಾಳೆಯ ನೈಜಪ್ರಪಂಚದ ಪರಿಕಲ್ಪನೆ’ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸಹೊಸ ತಂತ್ರಜ್ಞಾನಗಳನ್ನು ಅನುಸರಣೆ ಮಾಡುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.

ಇಂದಿನ ಕಂಪ್ಯೂಟರ್ ಯುಗದಲ್ಲಿ ಎಲ್ಲ ಕೆಲಸಗಳು ಸ್ಮಾರ್ಟ್ ಆಗುತ್ತಿವೆ. ೧೦ ಮಂದಿ ಮಾಡುವ ಕೆಲಸವನ್ನು ಒಂದು ಯಂತ್ರ ಮಾಡುತ್ತಿದೆ. ’ ಕೃತಕಬುದ್ದಿಮತ್ತೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ನೂತನ ತಂತ್ರಜ್ಞಾನವನ್ನು ಶೈಕ್ಷಣಿಕ ಅವಧಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ರಾಜೇಶ್ ಮಾತನಾಡಿ, ಮಿಷನ್ ಲರ್ನಿಂಗ್, ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಇವು ರಕ್ತ ಸಂಬಂಧದಂತೆ ಕೆಲಸ ಮಾಡುತ್ತವೆ. ಮನುಷ್ಯನು ಯಾವ ರೀತಿ ಕೆಲಸ ಮಾಡಲು ಸೂಚಿಸುತ್ತಾನೆ. ಇವು ಉಳುಮೆ ಮಾಡುವ ರೈತ ಹಾಗೂ ಎತ್ತುಗಳ ಸಂಬಂಧಂತೆ ಇವುಗಳ ಕಾರ್ಯವೈಖರಿ ಇರುತ್ತದೆ. ಮನುಷ್ಯನಿಗೆ ಭಾವನೆಗಳಿದ್ದರೆ ಯಂತ್ರಗಳು ಭಾವನೆರಹಿತವಾಗಿರುತ್ತವೆ ಎಂದು ಹೇಳಿದರು.

ಜೆಎಸ್‌ಎಸ್ ಬಿಇಡಿ ಕಾಲೇಜು ಪ್ರಾಂಶುಪಾಲ ಕೆ.ಸಿ. ಬಸವಣ್ಣ ಮಾತನಾಡಿ, ಎಐ ತಂತ್ರಜ್ಞಾನ ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜ್ಞಾನ ಆವರಿಸಿದೆ. ಇವುಗಳಿಂದ ಸಮಾಜಕ್ಕೆ ಅನೂಕೂಲವಾಗಬೇಕೆ ಹೊರತು ಮಾರಕವಾಗಬಾರದು, ಇವು ಬಂದಿರುವ ಪರಿಣಾಮ, ಮನುಷ್ಯನ ಬುದ್ಧಿಮತ್ತೆ ಕಡಿಮೆಯಾಗಬಾರದು, ಆಲೋಚನ ಶಕ್ತಿ ಕ್ಷೀಣಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಚಾಮರಾಜನಗರ ವಿಶ್ವವಿದ್ಯಾನಿಲಯದ ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಜೆ.ದಿವ್ಯಶ್ರೀ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಾಗಾರ ನಡೆಸಿಕೊಟ್ಟರು. ಕಾಲೇಜು ಆಂತರೀಕ ಗುಣಮಟ್ಟ ಖಾತರಿ ಸಮಿತಿ ಸಂಚಾಲಕ ಮಲ್ಲಿಕಾರ್ಜುನಸ್ವಾಮಿ ಸೇರಿ ಗಣಕವಿಜ್ಞಾನ ವಿಭಾಗದ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.-------

೧ಸಿಎಚ್‌ಎನ್೧

ಚಾಮರಾಜನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜು ಸಭಾಂಗಣದಲ್ಲಿ ಗಣಕವಿಜ್ಞಾನ ವಿಭಾಗ ಹಾಗೂ ಕಾಲೇಜು ಆಂತರಿಕ ಗುಣಮಟ್ಟ ಖಾತರಿ ಸಮಿತಿ ವತಿಯಿಂದ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ನಾಳೆಯ ನೈಜಪ್ರಪಂಚದ ಪರಿಕಲ್ಪನೆ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಚಾಮರಾಜನಗರ ವಿಶ್ವವಿದ್ಯಾನಿಲಯದ ಗಣಕವಿಜ್ಞಾನ ವಿಭಾಗದ ಪ್ರಾದ್ಯಾಪಕಿ ಜೆ.ದಿವ್ಯಶ್ರೀ ಉದ್ಘಾಟಿಸಿದರು,