ತೆಕ್ಕಲಕೋಟೆ: ಸಮೀಪದ ಹೋಳಗುಂದ ಗ್ರಾಮದಲ್ಲಿ ಎಚ್‌ಎಫ್‌ಟಿಎಸ್ ಫೌಂಡೇಶನ್ ಆಶ್ರಯದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ''''ಅಲ್ ಹಿದಾಯಾ ಹಿಫ್ಜುಲ್ ಕುರಾನ್ ಅಕಾಡೆಮಿಯನ್ನು ಗಣ್ಯರು ಉದ್ಘಾಟಿಸಿದರು.ಅಕಾಡೆಮಿಯ ಪ್ರಧಾನ ಶಿಕ್ಷಕ ಮಾತನಾಡಿ, ಪ್ರಸ್ತುತ ಸಂಸ್ಥೆಯಲ್ಲಿ ಸುಮಾರು 50 ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲಿ 30 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮತ್ತು ಆಧುನಿಕ ವಸತಿ ಸೌಲಭ್ಯಗಳನ್ನು ಹಂತ-ಹಂತವಾಗಿ ಒದಗಿಸಲು ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದರು.
ವಿದ್ಯಾರ್ಥಿಗಳು ಪವಿತ್ರ ಕುರಾನ್ ಕಂಠಪಾಠ ಮಾಡುವುದರ ಜೊತೆಗೆ ಉತ್ತಮ ನಡತೆ, ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಈ ಭಾಗದಲ್ಲಿ ಇಂತಹ ಸಂಸ್ಥೆ ಆರಂಭವಾಗಿರುವುದು ಸಮುದಾಯದ ಶೈಕ್ಷಣಿಕ ಪ್ರಗತಿಗೆ ಹಾಗೂ ಸಮಾಜಕ್ಕೆ ಅತ್ಯಂತ ಉಪಯುಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೇರಳದ ಅಲ್ ಉಸ್ತಾದ್ ಹಫೀಜ್ ಹಾರಿಸ್ ಸಲಾಫಿ, ಮಂಗಳೂರಿನ ಡಿ.ಎಸ್. ಅಬ್ದುಲ್ ರಹಮಾನ್, ಸೈಯದ್ ಅಬುಬಕರ್ ಸಿದ್ದಿಕ್ ಅಲ್ ಹಾದಿ, ಶಿವಮೊಗ್ಗದ ಅಲ್ ಉಸ್ತಾದ್ ಅಬ್ದುಲ್ ಖಾದರ್ ಮಿಸ್ಬಾಹಿ ಅಲ್ ಕಾಮಿಲ್, ಕರ್ನೂಲ್‌ನ ಸೈಯದ್ ಯೂಸುಫ್ ಅಲ್ ಹಾದಿ, ಗುಂತಕಲ್‌ನ ಸೈಯದ್ ಅಬ್ದುಲ್ ರಜಾಕ್ ಪೀರಸಾಹೇಬ್, ಬಳ್ಳಾರಿಯ ಖಾಜಿ ಮೊಹಮ್ಮದ್, ಗುಂತಕಲ್‌ನ ಮುಫ್ತಿ ಹಫೀಜ್ ಮನ್ಸೂರ್ ಅಲಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಆಗಮಿಸಿದ್ದರು.
ಸಮಾರಂಭದಲ್ಲಿ ರೌತ್‌ನಗರ್ ನೂರಾನಿ ಮಸೀದಿ ಕಮಿಟಿ ಸದಸ್ಯರಾದ ಅಲ್ಲಾಸಾಬ್, ಸನಾವುಲ್ಲಾ, ಮೆಡಿಕಲ್ ಹುಸೇನ್, ಪೀರಾಸಾಬ್, ಹುಸೇನಿ, ಐ.ಜೆ.ಸಾಬ್, ದಾದಾವಲಿ, ಶೇಕ್ ಪಾಷಾವಲಿ, ರಫೀಕ್, ಅದಾನಸಾಬ್, ಎಂಪಿಟಿಸಿ ಸದಸ್ಯ ಶೇಕ್ ಶಾವಲಿ, ಬೇಲ್ಲಾಡು ಹುಸೇನ್ ಪೀರಾ, ವಿವಿಧ ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಇದ್ದರು.