ಸಾರಾಂಶ
ರಾಜ್ಯದಲ್ಲಿರುವುದು ರೈತ, ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರ. ಇದು ಅಲಿಬಾಬಾ ಚಾಲೀಸ್ ಚೋರ್ ಸರ್ಕಾರ. ಅತಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಹಾಪುರ : ರಾಜ್ಯದಲ್ಲಿರುವುದು ರೈತ, ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರ. ಇದು ಅಲಿಬಾಬಾ ಚಾಲೀಸ್ ಚೋರ್ ಸರ್ಕಾರ. ಅತಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವತಿಯಿಂದ ವಕ್ಫ್ ವಿರೋಧಿ ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಲು ಇಲ್ಲಿಗಾಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡುತ್ತ, ಮತಾಂಧ ಜಮೀರ್ ಅಹ್ಮದ್ ರಾಜ್ಯದಲ್ಲಿ ಮುಖ್ಯಮಂತ್ರಿ ಆದೇಶದ ಮೇರೆಗೆ ಪ್ರತಿ ಜಿಲ್ಲೆಯಲ್ಲಿ ವಕ್ಫ್ ಅದಾಲತ್ ನಡೆಸಿ ರೈತರ ಪಿತ್ರಾರ್ಜಿತ ಆಸ್ತಿಯನ್ನು ವಕ್ಫ್ ಹೆಸರಲ್ಲಿ ಜಮೀನು ಕಬಳಿಸಲು ವ್ಯವಸ್ಥಿತ ಜಾಲ ಬೀಸಿದ್ದಾನೆ. ಬಿಜೆಪಿ ರೈತರ ಜಮೀನು ಕಬಳಿಸಲು ಬಿಡುವುದಿಲ್ಲ. ನಮ್ಮ ಯುವನಾಯಕರಾದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರೈತರ ಜಮೀನು ಉಳಿಯುವುದಾಗಿ ಹೋರಾಟ ಮಾಡುತ್ತಿದ್ದಾರೆ. ಯಾವುದೇ ರೈತರು ಭಯಭೀತರಾಗುವ ಅಗತ್ಯವಿಲ್ಲ ನಿಮ್ಮ ಬೆನ್ನಿಗೆ ಬಿಜೆಪಿ ಇದೆ. ಯಾವುದೇ ಕಾರಣಕ್ಕೂ ರೈತರ ಜಮೀನು ಕಬಳಿಸಲು ಬಿಡುವುದಿಲ್ಲ ಎಂದರು.
ಕುರ್ಚಿ ಉಳಿಸಿಕೊಳ್ಳಲು ಡಿಕೆಶಿ ಅವರನ್ನು ಹಿಂದಿಕ್ಕಿ ಸಮಾವೇಶ ಮಾಡಲು ಹೊರಟಿರುವದನ್ನು ಗಮನಿಸಿ ನಿಮಗೆ ಅರ್ಥವಾಗುತ್ತದೆ ಎಂದರು. ವಾಲ್ಮೀಕಿ ಹಗರಣ, ವಿವಿಧ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಹಣದ ಅವ್ಯವಹಾರ ನಡೆದಿದೆ. ಈ ಪ್ರಕರಣದಲ್ಲಿ ಕೆಲವರು ಜೈಲಿಗೆ ಹೋಗಿದ್ದಾರೆ. ಇನ್ನು ಅಬಕಾರಿ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ರು. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ 900 ಕೋಟಿ ರು. ಲಂಚ ಪಡೆಯಲಾಗುತ್ತಿದೆ. ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ವಿವರಿಸಿದೆ ಎಂದರು.
ಕಾಂಗ್ರೆಸ್ ಸರ್ಕಾರ ಪತನ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಸರ್ಕಾರ ಪತನಾಗಲು ಬಹಳ ದಿನ ಉಳಿದಿಲ್ಲ ಎಂದರು.
ಇದೆ ವೇಳೆ ಪತ್ರಕರ್ತರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ, ಇದು ಸ್ವ ಪ್ರತಿಷ್ಠೆಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ ಎಂದಾಗ. ಖಂಡಿತವಾಗಿಯೂ ಇಲ್ಲ ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಈಗ ಬೇರೆ ವಿಷಯ ಮಾತನಾಡುವ ಸಮಯವಲ್ಲ. ವಕ್ಫ್ ಹೋರಾಟ ನಡೆಯುತ್ತಿದೆ ಅದರ ಬಗ್ಗೆ ಮಾತನಾಡಿ ಎಂದರು.