ಸಿಎಂ ಸೇರಿ ನಾಯಕರೆಲ್ಲ ರೈತರ ಕ್ಷಮೆ ಕೇಳಬೇಕು

| Published : Nov 11 2024, 01:10 AM IST / Updated: Nov 11 2024, 01:11 AM IST

ಸಿಎಂ ಸೇರಿ ನಾಯಕರೆಲ್ಲ ರೈತರ ಕ್ಷಮೆ ಕೇಳಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದಲ್ಲಿ ರೈತರ, ಮಠಮಾನ್ಯಗಳ, ಸರ್ಕಾರಿ ಆಸ್ತಿಗಳೆಲ್ಲವನ್ನೂ ವಕ್ಫ್‌ಗೆ ದಾಖಲು ಮಾಡಬೇಕು ಎಂದು ಕಾಂಗ್ರೆಸ್‌ ಸರ್ಕಾರ ನೋಟಿಸ್ ನೀಡಿತ್ತು. ರೈತರು, ಮಠಾಧೀಶರು ಹಾಗೂ ಬಿಜೆಪಿ ನಾಯಕರು ಹೋರಾಟಕ್ಕಿಳಿದ ತಕ್ಷಣ ಉಪಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎಂದು ಹೆದರಿ ನೋಟಿಸ್ ವಾಪಸ್ ಪಡೆದಿದ್ದಾರೆ. 1974ರ ಗೆಜೆಟ್ ಅನ್ನು ರದ್ದುಮಾಡಬೇಕು, ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ನಾಯಕರೆಲ್ಲ ರೈತ ಸಮುದಾಯದ ಕ್ಷಮೆ ಕೇಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ರೈತರ, ಮಠಮಾನ್ಯಗಳ, ಸರ್ಕಾರಿ ಆಸ್ತಿಗಳೆಲ್ಲವನ್ನೂ ವಕ್ಫ್‌ಗೆ ದಾಖಲು ಮಾಡಬೇಕು ಎಂದು ಕಾಂಗ್ರೆಸ್‌ ಸರ್ಕಾರ ನೋಟಿಸ್ ನೀಡಿತ್ತು. ರೈತರು, ಮಠಾಧೀಶರು ಹಾಗೂ ಬಿಜೆಪಿ ನಾಯಕರು ಹೋರಾಟಕ್ಕಿಳಿದ ತಕ್ಷಣ ಉಪಚುನಾವಣೆಯಲ್ಲಿ ಹಿನ್ನಡೆಯಾಗುತ್ತದೆ ಎಂದು ಹೆದರಿ ನೋಟಿಸ್ ವಾಪಸ್ ಪಡೆದಿದ್ದಾರೆ. 1974ರ ಗೆಜೆಟ್ ಅನ್ನು ರದ್ದುಮಾಡಬೇಕು, ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ ನಾಯಕರೆಲ್ಲ ರೈತ ಸಮುದಾಯದ ಕ್ಷಮೆ ಕೇಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಆಗ್ರಹಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ರೈತರ, ಬಡವರ, ಸರ್ಕಾರಿ, ಮಠಗಳ, ದೇವಸ್ಥಾನಗಳು ಅಷ್ಟೆ ಏಕೆ ಅಲ್ಪಸಂಖ್ಯಾತರ ಆಸ್ತಿಗಳೆಲ್ಲವೂ ವಕ್ಫ್‌ದೆ ಎನ್ನುತ್ತಿರಿ. ಸಂಬಂಧವೇ ಇಲ್ಲದ ಆಸ್ತಿಗಳೆಲ್ಲವನ್ನೂ 1974ರ ಗೆಜೆಟ್ ನಲ್ಲಿ ಸೇರಿಸಿ ಜನರಿಗೆ ತೊಂದರೆ ಕೊಡಲಾಗುತ್ತಿದೆ. ಹೀಗಾಗಿ 1974ರ ಗೆಜೆಟ್ ನ್ನು ರದ್ದು ಮಾಡಬೇಕು. ಈ ಮೊದಲು 1954ರಲ್ಲಿ ಕೇವಲ 8 ಸಾವಿರ ಎಕರೆ ಇದ್ದ ವಕ್ಫ್‌ ಆಸ್ತಿ ಈಗ 9.60 ಲಕ್ಷ ಎಕರೆ ಆಗಿದೆ. ಇಷ್ಟೊಂದು ಆಸ್ತಿ ಎಲ್ಲಿಂದ ಬಂತು?, ಯಾರು ಕೊಟ್ಟಿದ್ದಾರೆ ಎಂದು ಬಹಿರಂಗಪಡೆಸಬೇಕು. ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ ಆಸ್ತಿಗಳಿಗೂ ನೋಟಿಸ್ ನೀಡಲಾಗಿದೆ. ಈ ಕುರಿತು 2004ರಲ್ಲಿ ಅವೆಲ್ಲ ಆಸ್ತಿಗಳು ಸರ್ಕಾರದ್ದು ಎಂದು ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಮತ್ತೆ 20 ವರ್ಷಗಳ ಬಳಿಕ ನೋಟಿಸ್ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಕ್ಫ್ ಖಾತೆ ಸಚಿವ ಜಮೀರ್ ಅಹಮ್ಮದ ಖಾನ್ ಅವರು ಜಿಲ್ಲೆಗೆ ಬಂದು ವಕ್ಫ್ ಅದಾಲತ್‌ ಮಾಡಿ 1974ರ ಗೆಜೆಟ್ ಪ್ರಕಾರ ಇಂದೀಕರಣ ಮಾಡಲು ಹೇಳಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಬೇಕಾಬಿಟ್ಟಿ ದಾಖಲು ಮಾಡಿಕೊಂಡು 1.20 ಲಕ್ಷ ಎಕರೆ ನಮ್ಮದು ಎನ್ನುತ್ತೀರಿ. ಈ ಮೊದಲು ನಾವು ನೋಟಿಸ್ ಕೊಟ್ಟಿಲ್ಲ ಎಂದು ಹೇಳಿದ್ದೀರಿ, ಬಳಿಕ ನೋಟಿಸ್ ವಾಪಸ್ ತಗೊಂಡಿದ್ದೇವೆ ಎಂದು ಸುತ್ತೋಲೆ ಹೊರಡಿಸಿದ್ದೀರಿ. ಹೀಗೆ, ಜನರನ್ನು ಮರಳು ಮಾಡಿ 65 ವರ್ಷ ಅಧಿಕಾರ ಮಾಡಿದ್ದೀರಿ ಎಂದು ಟೀಕಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, 1994 ರಿಂದಲೂ ಜನರ ಆಸ್ತಿಗಳನ್ನು ಇಂದೀಕರಣ ಮಾಡಿ ಕೊಳ್ಳೆ ಹೊಡೆಯುತ್ತಲೇ ಇದ್ದಾರೆ. ಈಗ ದೊಡ್ಡ ಪ್ರಮಾಣದಲ್ಲಿ ಇಂದೀಕರಣ ಮಾಡಲು ಹೊರಟಿದ್ದಾರೆ. ಈಗ ಇವರ ಕುತಂತ್ರ ಗೊತ್ತಾಗಿ ರೈತರು ಹೋರಾಟಕ್ಕೆ ಇಳಿದಿದ್ದಾರೆ ಎಂದರು.

ವಕ್ಫ್‌ ಸಚಿವರು ಜಿಲ್ಲೆಗೆ ಬಂದು ಅವರ ಕ್ಷೇತ್ರದಲ್ಲಿನ ಹಲವು ಆಸ್ತಿಗಳನ್ನು ವಕ್ಫ್‌ಗೆ ಸೇರ್ಪಡೆ ಮಾಡಿ ಹೋಗಿದ್ದಾರೆ. ಆದರೆ, ಈ ವಿಚಾರ ಉಸ್ತುವಾರಿ ಸಚಿವರಿಗೆ ಗೊತ್ತಿಲ್ಲ. ಇದು ಕಾಂಗ್ರೆಸ್‌ನಲ್ಲಿಯೇ ಎಂ.ಬಿ.ಪಾಟೀಲ ಅವರ ವಿರುದ್ಧ ಷಡ್ಯಂತ್ರ ನಡೆದಿದೆ. ಇದನ್ನು ಕ್ಯಾಬಿನೆಟ್ ಸಚಿವರಾದ ಎಂ.ಬಿ.ಪಾಟೀಲರು ವಕ್ಫ್‌ ಪರವಾಗಿ ಸಮರ್ಥನೆ ಮಾಡಿಕೊಳ್ಳದ ಸ್ಥಿತಿ ಇವರಿಗೆ ಬಂದಿದೆ. ಎಂ.ಬಿ.ಪಾಟೀಲರಿಗೆ ವಕ್ಫ್ ತಪ್ಪು ಮಾಡಿದೆ ಎಂಬ ಮನವರಿಕೆ ಆಗಿದೆ. ಇದೀಗ ಬಿಜೆಪಿ ತರಲು ಹೊರಟಿರುವ ವಕ್ಫ್‌ ತಿದ್ದುಪಡಿಗೆ ಅವರು ಬೆಂಬಲಿಸಲಿ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ವಿಜಯ ಜೋಶಿ ಇತರರು ಉಪಸ್ಥಿತರಿದ್ದರು.

ಚಿತ್ರ: 10BIJ01

ಬರಹ: ಕಾಂಗ್ರೆಸ್ ನಾಯಕರೆಲ್ಲ ರೈತ ಸಮುದಾಯದ ಕ್ಷಮೆ ಕೇಳಬೇಕು: ಕುಚಬಾಳಬಾಕ್ಸ್‌

ಕೊಳ್ಳೆ ಹೊಡೆಯದಂತೆ ವಕ್ಫ್‌ ಕಾಯ್ದೆ ತಿದ್ದುಪಡಿಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಬಿಜೆಪಿ ಅಧಿಕಾರದಲ್ಲಿನ ಸರ್ಕಾರಿ ಸುತ್ತೋಲೆಗಳನ್ನು ಹಿಡಿದು ಸುದ್ದಿಗೋಷ್ಠಿ ನಡೆಸಿದ್ದಾರೆ. ವಕ್ಫ್‌ ಕುರಿತು ಅವರು ತೋರಿಸಿದ ಬಿಜೆಪಿ ಅಧಿಕಾರದಲ್ಲಿನ ಆದೇಶಗಳು, ಬಿಜೆಪಿ ಪ್ರಣಾಳಿಕೆಯಲ್ಲಿ ಹಾಕಿದ್ದು, ಸಚಿವೆ ಶೋಭಾ ಕರಂದ್ಲಾಜೆ ಅವರು ಸದನದಲ್ಲಿ ಪ್ರಶ್ನಾವಳಿ ಕೇಳಿದ್ದು ಎಲ್ಲವೂ ಸತ್ಯವೇ. ಆದರೆ, ಸಾವಿರಾರು ಎಕರೆ, ಲಕ್ಷಾಂತರ ಕೋಟಿ ಮೌಲ್ಯದ ವಕ್ಫ್ ಆಸ್ತಿಯನ್ನು ಕಾಂಗ್ರೆಸ್‌ನವರು ಕೊಳ್ಳೆ ಹೊಡೆಯುತ್ತಿರುವುದನ್ನು ತಡೆಗಟ್ಟಬೇಕು ಎಂದು ನಮ್ಮ‌ ನಾಯಕರು ಇದೆಲ್ಲ ಮಾಡಿದ್ದಾರೆ. ಇದೀಗ ವಕ್ಫ್‌ನಿಂದ ಯಾರಿಗೂ ಅನ್ಯಾಯ ಆಗಬಾರದು, ಯಾರು ವಕ್ಫ್ ಆಸ್ತಿ ಕೊಳ್ಳೆ ಹೊಡೆಯಬಾರದು ಎಂದು ಪ್ರಧಾನಿ ಮೋದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ ಎಂದು ಪಾಟೀಲ ಮಾಹಿತಿ ನೀಡಿದರು.ಕೋಟ್‌ಕೇರಳದ ವೈಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರೇಡ್ ಮಾಡಿದಾಗ ರಾಜ್ಯದಲ್ಲಿ ಬಡವರಿಗೆ ಹಂಚುವ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಭಾವಚಿತ್ರವಿರುವ ಅಕ್ಕಿ ಮೂಟೆಗಳು ಸಿಕ್ಕಿವೆ. ಅವುಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.ರಮೇಶ ಜಿಗಜಿಣಗಿ, ಸಂಸದ