ಅಲ್ಲಮಪ್ರಭುಗಳು ಪ್ರಖ್ಯಾತನಾಗಿರುವುದು ತಮ್ಮ ಬೆರಗಿನ ವಚನಗಳಿಂದ, ಬೆಡಗು ಎಂಬುದು ಒಗಟು ಮಾತು, ಒಗಟು ಮಾತಿನ ರೀತಿ ಅದು ಸಂಕೇತಗಳ ಮೂಲಕ ಮಾತನಾಡುತ್ತದೆ. ತಮ್ಮ ಬೆರಗಿನ ವಚನಗಳ ಮೂಲಕ ಸಮಾಜವನ್ನು ತಿದ್ದಿದರೂ ಎಂದು ಹತ್ತಿಮತ್ತೂರಿನ ನಿಜಗುಣ ಶಿವಯೋಗಿಗಳು ಹೇಳಿದರು.

ಹಾವೇರಿ: ಕಳೆದ ವರ್ಷ ನಡೆದ ಭೂಮಿ ಪೂಜೆಯ ಸಂದರ್ಭದಲ್ಲಿ ಘೋಷಣೆ ಮಾಡಿದಂತೆ ಈಗಾಗಲೇ ರಾಷ್ಟ್ರೋತ್ಥಾನ ಶಾಲಾ ಕಟ್ಟಡ ನಿಮ್ಮ ಮುಂದಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನೂ ಪೂರ್ಣಗೊಳಿಸಿ ಮೇ 21ಕ್ಕೆ ಹಾವೇರಿ ರಾಷ್ಟ್ರೋತ್ಥಾನ ಶಾಲೆಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಹೇಳಿದರು.

ನಗರದ ಹೊರವಲಯದಲ್ಲಿ ಆರಂಭಗೊಳ್ಳುತ್ತಿರುವ `ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಶಾಲಾ ದರ್ಶನ ಕಾರ್ಯಕ್ರಮದಲ್ಲಿ'''''''' ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಭೂಮಿ ಪೂಜೆಯ ಸಂದರ್ಭದಲ್ಲಿ ವಿಜಯ ದಶಮಿಗೆ 2026-27ನೇ ಸಾಲಿಗೆ ನೋಂದಣಿ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಣೆ ಮಾಡಿದ್ದೇವು. ಆ ಪ್ರಕಾರ ಈಗಾಗಲೇ ದಾಖಲಾತಿ ಆರಂಭಿಸಲಾಗಿದ್ದು, 500ಕ್ಕೂ ಹೆಚ್ಚು ಮಕ್ಕಳು ನೋಂದಣಿ ಮಾಡಿಕೊಂಡಿದ್ದು, 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಏಪ್ರಿಲ್ 30ರಂದು ರಾಷ್ಟ್ರೋತ್ಥಾನದ ಕಟ್ಟಡದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಮೇ 21ಕ್ಕೆ ಶಾಲಾ ಕಟ್ಟಡವನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗುವುದು ಬಳಿಕ ಅಕ್ಷರಭ್ಯಾಸ ಆರಂಭಗೊಳ್ಳಲಿದೆ ಎಂದರು.ಈಗಾಗಲೇ ಶಾಲಾ ಕಟ್ಟದ ದಕ್ಷಿಣಭಾಗ ಪೂರ್ಣಗೊಂಡು ಸುಮಾರು 20ತರಗತಿ ಕೊಠಡಿಗಳು ಸಿದ್ಧಗೊಂಡಿವೆ. ಅದರಲ್ಲಿ ಲ್ಯಾಬ್, ಗ್ರಂಥಾಲಯ, ಶಿಕ್ಷಕ ಸಿಬ್ಬಂದಿಗಳ ಕೊಠಡಿ, ಆಡಳಿತ ಕಚೇರಿ ಮತ್ತಿತರ ಸೌಲಭ್ಯಗಳಿರಲಿವೆ. ಒಟ್ಟು 7 ಎಕರೆ ವಿಸ್ತೀರ್ಣದಲ್ಲಿ 85000 ಚದರ ಅಡಿಯ ಕಟ್ಟಡದ ಮೇಲೆ ಒಟ್ಟು 1.40 ಲಕ್ಷ ಚದರ ಅಡಿಯ ಕಟ್ಟಡ ನಿರ್ಮಾಣಗೊಂಡು ಕಾರ್ಯಾರಂಭಿಸಲಿದೆ ಎಂದರು.ಪ್ರಸ್ತುತ ರಾಷ್ಟ್ರೋತ್ಥಾನ ಪರಿಷತ್‌ಗೆ 60 ಸಂವತ್ಸರಗಳು ತುಂಬಿದ ಬೆನ್ನಲ್ಲೇ ಇದೀಗ ಹಾವೇರಿ ನಗರದಲ್ಲೂ ಶಾಲೆ ಆರಂಭಗೊಳ್ಳುತ್ತಿದೆ. ಇದು ರಾಜ್ಯದ 21ನೇ ಶಾಲೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 30 ಶಾಲೆಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ ಎಂದರು.ಒಳ್ಳೆಯ ಪ್ರಜೆಗಳ ನಿರ್ಮಾಣ, ಉತ್ತಮ ರಾಷ್ಟçದ ನಿರ್ಮಾಣದ ಕಲ್ಪನೆಯೊಂದಿಗೆ ದೇಶದ ಚಿಂತನೆ, ಸಮಾಜಕ್ಕೆ ಬದ್ದತೆ ಉಳ್ಳವರನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಶಾಲೆಗಳು ಕೆಲಸ ಮಾಡುತ್ತಿವೆ. ನಮ್ಮ ಹಿರಿಯರು ರಾಮಾಯಣ, ಭಗವದ್ಗೀತೆಗಳ ಸಾರ ಹೇಳಿಕೊಡುತ್ತಿದ್ದರು. ಆದರೆ ಇಂದಿನ ತಂದೆ-ತಾಯಿಗಳಿಗೆ ಕೌಟುಂಬಿಕ ಹೊಣೆಗಾರಿಕೆ, ಒತ್ತಡದ ಕಾರ್ಯಗಳ ನಡುವೆ ಈ ಸಂಸ್ಕಾರ ಸಾಧ್ಯವಾಗುತ್ತಿಲ್ಲ. ಸಮಾಜದ ಪರಿವರ್ತನೆಗೆ ನಮ್ಮ ಮಕ್ಕಳನ್ನು ಸಿದ್ಧಪಡಿಸಬೇಕೆಂಬ ಕಳಕಳಿ ಪ್ರತಿ ತಂದೆ-ತಾಯAದಿರಲ್ಲಿದೆ. ಇದನ್ನು ನೀಡುವ ನಿಟ್ಟಿನಲ್ಲಿ ಹಾಗೂ ಸಾಮಾಜಿಕ ಚಟುವಟಿಕೆ ಮೂಲಕ ಸಮಾಜಕ್ಕೆ, ದೇಶಕ್ಕೆ, ವಿಶ್ವಕ್ಕೆ ಶಕ್ತಿಗಳಾಗಿ, ಆಸ್ತಿಗಳನ್ನಾಗಿ ನಿರ್ಮಾಣ ಮಾಡುವ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್ ಮಾಡುತ್ತಿದೆ ಎಂದರು.ರಾಷ್ಟ್ರೋತ್ಥಾನ ಪರಿಷತ್ ಸದಸ್ಯರಾದ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಪವನ ಬಹಾದ್ದೂರ ದೇಸಾಯಿ ವೇದಿಕೆ ಮೇಲಿದ್ದರು. ಕಾವೇರಿ ಮಾತಾಜಿ ವಂದಿಸಿದರು.ನಮ್ಮ ದೇಶದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರ ಪ್ರತಿಭೆ ದೇಶಕ್ಕೆ ಸದ್ವಿನಿಯೋಗ ಆದಾಗ ದೇಶ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ. ಮೇಕ್ ಇನ್ ಇಂಡಿಯಾ ಮೂಲಕ ಈಗಾಗಲೇ ಹಡಗು ನಿರ್ಮಾಣ ತಜ್ಞತೆಯನ್ನು ಅಳವಡಿಸಿಕೊಂಡು ಸಾಧನೆಯಲ್ಲಿ ತೊಡಗಿದ್ದೇವೆ. ಅದೇ ರೀತಿ ವಿಶ್ವದಲ್ಲಿನ ಯುದ್ಧದ ಕಾಮೋಡಕ್ಕೆ ಭಾರತವೇ ಪರಿಹಾರ ಸೂತ್ರ ಒದಗಿಸಬಲ್ಲುದು ಎಂದು ಹಲವರು ಭಾರತದತ್ತ ನೋಡುತ್ತಿದ್ದಾರೆ. ಯುದ್ಧ ನಿಲ್ಲಿಸಲು, ತೈಲ ಸಂದಿಗ್ಧತೆ ನಿವಾರಣೆಗೆ ಭಾರತ ಪ್ರಯತ್ನಿಸಲಿ ಎಂಬುದಾಗಿ ಕೇಳಿಬರುತ್ತಿದೆ. ಇದು ಅತ್ಯುತ್ತಮ ಬೆಳವಣಿಗೆ ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ ದಿನೇಶ ಹೆಗ್ಡೆ ಹೇಳಿದರು.