ಸಾರಾಂಶ
- ಸಂಕದಕುಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಕ್ಕಳ ಶಿಕ್ಷಣದ ಜೊತೆಗೆ ಸಂಸ್ಕಾರವೂ ಕಲಿಸಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ತಿಳಿಸಿದರು.
ಬುಧವಾರ ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕದಕುಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಳೆದ 23 ವರ್ಷದಿಂದಲೂ ಪ್ರತಿಭಾ ಕಾರಂಜಿ ನಡೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಪ್ರತಿಭಾವಂತ ಮಕ್ಕಳು ಉತ್ತಮ ಶಿಕ್ಷಕರಿದ್ದಾರೆ. ಮಗು ಪರಿಪೂರ್ಣವಾಗಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಯೂ ಅಗತ್ಯ. ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡರು ಈ ಭಾಗದವರು. ಶಿಕ್ಷಣ ಇಲಾಖೆಯಲ್ಲಿ ಅವರ ಪ್ರಾಮಾಣಿಕ ಸೇವೆಯಿಂದ ಲಕ್ಷಾಂತರ ಜನರಿಗೆ ಶಿಕ್ಷಕ ವೃತ್ತಿ ಸಿಕ್ಕಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆ ಉಳಿಯಲು ಶಿಕ್ಷಕರೊಂದಿಗೆ ಪೋಷಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಸೀತೂರು ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಮಾತನಾಡಿ, ಕಳೆದ 16 ವರ್ಷದ ಹಿಂದೆ ಹಳ್ಳಿಬೈಲು ಸರ್ಕಾರಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ ನಡೆದಿತ್ತು. 1964 ರಲ್ಲಿ ಹಳ್ಳಿಬೈಲು ಶೇಷಪ್ಪಗೌಡರ ಪ್ರಯತ್ನದಿಂದ ಹಳ್ಳಿಬೈಲು ಸರ್ಕಾರಿ ಶಾಲೆ ಪ್ರಾರಂಭವಾಗಿತ್ತು. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು. ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ಹಳ್ಳಿಬೈಲು ಕುಟುಂಬದವರಾಗಿದ್ದು ಸರ್ಕಾರಿ ಶಾಲೆಯಲ್ಲೇ ಕಲಿತವರು. ಖಾಸಗೀ ಶಾಲೆ ಪ್ರಭಾವದಿಂದ ಸರ್ಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂದು ವಿಷಾದಿಸಿದರು.ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಶಾಲೆ ಶಿಕ್ಷಣ ನಮ್ಮ ಜೀವನದ 30 ವರ್ಷದ ಸಾಧನೆಗೆ ಮುನ್ನುಡಿ ಬರೆಯಲಿದೆ. ಮಕ್ಕಳು ಪಠ್ಯ ಪುಸ್ತಕಗಳಲ್ಲಿ ಬರುವ ಸಾಧಕರ ಜೀವನ ಅನುಕರಣೆ ಮಾಡಬೇಕು.ಸರ್ಕಾರಿ ಶಾಲೆ, ನಾವು ಬಡವರು ಎಂಬ ಕೀಳಿರಿಮೆ ಮಾಡಿಕೊಳ್ಳಬಾರದು. ಗುರುಗಳ ದಿನ ನಿತ್ಯ ಪಾಠಗಳೇ ನಮ್ಮ ಮುಂದಿನ ಜೀವನದ ಮೆಟ್ಟಿಲು ಎಂದರು.ಅತಿಥಿಯಾಗಿದ್ದ ಗ್ರಾಪಂ ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಪ್ರತಿಭಾ ಕಾರಂಜಿಯಿಂದ ಮಕ್ಕಳ ಪ್ರತಿಭೆ ಅನಾವರಣ ಗೊಳ್ಳಲಿದೆ. ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದರೆ ಮುಂದೆ ಜೀವನದಲ್ಲಿ ಸಾಧನೆಗೆ ಅವಕಾಶ ಸಿಗಲಿದೆ.ಹಳ್ಳಿಬೈಲು ಸರ್ಕಾರಿ ಶಾಲೆ ಈಗ ಡಿಜಿಟಿಲೀಕರಣವಾಗಿದೆ. ಹಳೇ ವಿದ್ಯಾರ್ಥಿ ಸಂಘ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ವ್ಯವಸ್ಥೆ, ಸಿಗ್ನಲ್ ವ್ಯವಸ್ಥೆಗೆ ಬೂಸ್ಟ್ ಮಾಡಿಸಿದ್ದಾರೆ ಎಂದರು.
ಪ್ರತಿಭಾ ಕಾರಂಜಿಯಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯ, ನೇತ್ರ ತಜ್ಞೆ ಯಶಸ್ವಿನಿ ಜಯಣ್ಣರಿಂದ ಉಚಿತ ನೇತ್ರ ತಪಾಸಣೆ ನಡೆಯಿತು. ಹಳ್ಳಿಬೈಲು ಸರ್ಕಲ್ ನಿಂದ ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆನಡೆಸಿದರು. 11 ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು.ಇಸಿಒ ರಂಗಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್.ಡಿಎಂಸಿ ಅಧ್ಯಕ್ಷ ಅಕ್ಬರ್ ಆಲಿ ವಹಿಸಿದ್ದರು. ಎಸ್.ಡಿಎಂಸಿ ಉಪಾಧ್ಯಕ್ಷೆ ರೂಪ, ಗ್ರಾಪಂ ಸದಸ್ಯರಾದ ವಿಜಯ್, ಸುಜಾತ, ಜಿಲ್ಲಾ ಹಾಪ್ ಕಾಮ್ಸ್ ಉಪಾಧ್ಯಕ್ಷ ಎನ್.ಪಿ.ರವಿ, ಮಾಜಿ ಗ್ರಾಪಂ ಸದಸ್ಯ ಹೆಮ್ಮೂರು ಮಹೇಶ್, ಬಿಇಐಆರ್.ಟಿ ತಿಮ್ಮೇಶ್, ಪ್ರಾ.ಶಾ.ಶಿ.ಸಂಘದ ಆರ್.ನಾಗರಾಜ್, ಸರ್ಕಾರಿ ನೌಕರರ ಸಂಘದ ರಾಜಾನಾಯಕ್, ಗ್ರಾಮದ ಹಿರಿಯ ಶ್ರೀನಿವಾಸ ಗೌಡ, ಸೀತೂರು ಶಾಲೆ ಎಸ್.ಡಿಎಂಸಿ ಅಧ್ಯಕ್ಷೆ ಜ್ಯೋತಿ, ಬೆಮ್ಮನೆ ಶಾಲೆ ಎಸ್.ಡಿಎಂಸಿ ಅಧ್ಯಕ್ಷ ಕೊನೋಡಿ ಗಣೇಶ್, ಬಿಆರ್.ಸಿ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಭಡ್ತಿ ಮುಖ್ಯೋಪಾಧ್ಯಾ ಯರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಹಳ್ಳಿಬೈಲು ಶಾಲಾ ಮುಖ್ಯೋಪಾಧ್ಯಾಯ ಬಸವರಾಜ್, ಸಿ.ಆರ್.ಪಿ ಗಿರೀಶ್ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))