ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಕ್ರಿ.ಪೂ. 4 ರ ಶತಮಾನದಲ್ಲಿ ಜನಿಸಿದ ಯೇಸು ಮಹಾ ಪ್ರಭು 33 ವರ್ಷಗಳು ಜೀವಿಸಿದ್ದರು ಆ ಮಹಾನ್ ಪುರುಷನ ಸಾಧನೆ ಲೋಕವಿರುವ ತನಕ ಬೆಳಕಿನಂತೆ ಪ್ರಜ್ವಲಿಸಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ತಾಲೂಕಿನ ಡೋರ್ನಹಳ್ಳಿ ಸಂತ ಅಂತೋಣಿ ಬಸಿಲಿಕಾ ದಲ್ಲಿ ನಡೆದ ಕ್ರಿಸ್ ಮಸ್ ಹಬ್ಬದಲ್ಲಿ ಪಾಲ್ಗೊಂಡು ಚರ್ಚ್ನ ಧರ್ಮಗುರುಗಳಾದ ಎನ್.ಟಿ. ಜೋಸೆಫ್ ಮತ್ತು ಪ್ರವೀಣ್ ಪೆದ್ರು ಹಾಗೂ ಇತರರಿಗೆ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು, ಬೈಬಲ್ ಗ್ರಂಥ ಕ್ರಿಸ್ಟಿಯನರಿಗೆ ಮಾತ್ರವಲ್ಲದೆ ಒಳಿತನು ಪ್ರೀತಿಸುವ ಎಲ್ಲರಿಗೂ ಅದು ಸದ್ಬಾವನಾ ಗ್ರಂಥವಾಗಿದೆ ಎಂದರು. ಪಾಪಿಗಳನ್ನು ರಕ್ಷಿಸುವುದೇ ತನ್ನ ಜೀವನದ ಉದ್ದೇಶ ಎಂದು ಯೇಸು ದೇವ ಸ್ಪಷ್ಟ ಸಂದೇಶ ನೀಡಿದ್ದು, ಇದನ್ಬು ಅರಿತು ಎಲ್ಲರೂ ತಮ್ಮ ಜೀವನ ರೂಪಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು. ಚರ್ಚ್ ನ ಫಾದರ್ ಗಳಾದ ಎನ್.ಟಿ. ಜೋಸೆಫ್, ಪ್ರವೀಣ್ ಪೆದ್ರು, ಜಿಪಂ ಮಾಜಿ ಸದಸ್ಯರಾದ ಶಿವರಾಮ್ , ಸಿದ್ದಪ್ಪ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ಪಿಎಲ್.ಡಿ ಬ್ಯಾಂಕ್ ನಿರ್ದೇಶಕರಾದ ಬಿ. ಸಿದ್ದೇಗೌಡ, ಪ್ರದೀಪ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಗ್ರಾಪಂ ಸದಸ್ಯರಾದ ಕೆ.ಪಿ. ಜಗದೀಶ್, ಉಮೇಶ, ಕುಮಾರ್, ಭಾಗ್ಯಕರಿಗೌಡ, ಪುರಸಭೆ ಸದಸ್ಯ ನಟರಾಜು, ಮುಖಂಡರಾದ ಕಾಳಿಕುಮಾರ್, ಪುಟ್ಟೇಗೌಡ, ವಿಜಯಕುಮಾರ್, ಲೋಕೇಶ್, ಪ್ರಕಾಶ್, ಗೋವಿಂದ, ಮಹೇಶ್ ಇದ್ದರು.