ಜಾತಿ ಕಾಲಂನಲ್ಲಿ ಗೌಡ ನಮೂದಿಗೆ ಮನವಿ

| Published : Sep 21 2025, 02:03 AM IST

ಸಾರಾಂಶ

ಶೈಕ್ಷಣಿಕ ಜಾತಿ ಗಣತಿಯಲ್ಲಿ ಗೌಡ ಬಾಂಧವರು ತಮ್ಮ ಜಾತಿ ಕಾಲಂನಲ್ಲಿ ಗೌಡ ಎಂದು ನಮೂದಿಸುವಂತೆ ಚಿಲ್ಲನ ಗಣಿ ಪ್ರಸಾದ್‌ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಸಪ್ಟೆಂಬರ್ 22 ರಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಜಾತಿ ಗಣತಿಯಲ್ಲಿ ಕುಶಾಲನಗರ ಮತ್ತು ಜಿಲ್ಲೆ ಗೌಡ ಬಾಂಧವರು ಭಾಗವಹಿಸುವ ಮೂಲಕ ತಮ್ಮ ಜಾತಿ ಕಾಲಂ ನಲ್ಲಿ ಗೌಡ (Gowda) ಎಂದು ನಮೂದಿಸುವಂತೆ ಕುಶಾಲನಗರ ಗೌಡ ಸಮಾಜ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್ ಮನವಿ ಮಾಡಿದ್ದಾರೆ. ಕುಶಾಲನಗರ ಗೌಡ ಸಮಾಜದಲ್ಲಿ ಗೌಡ ಸಮಾಜ ಗೌಡ ಯುವಕ ಸಂಘ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವಸಹಾಯ ಸಂಘ, ಗೌಡ ನಿವೃತ್ತ ಸೈನಿಕ ಸಂಘ ಮತ್ತು ಗೌಡ ಸಾಂಸ್ಕೃತಿಕ ವೇದಿಕೆ ಪ್ರಮುಖರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ, ಹಿಂದೂ ಜಾತಿ, ಗೌಡ ಉಪಜಾತಿ ಕಲಮ್ ನಲ್ಲಿ ಅರೆ ಭಾಷೆ ಗೌಡ ಜಾತಿಗೆ ಇರುವ ಇನ್ನಿತರ ಸಮಾನಾರ್ಥಕ ಪದದಲ್ಲಿ ಒಕ್ಕಲಿಗ ಮಾತೃಭಾಷೆಯನ್ನು ಅರೆಭಾಷೆ ಎಂಬುದಾಗಿ ನಮೂದಿಸಲು ಕೋರಿದ್ದಾರೆ.ಒಂದು ವೇಳೆ ಹಿಂದಿನ ದಾಖಲಾತಿಗಳಲ್ಲಿ ಜಾತಿ ಒಕ್ಕಲಿಗ ಎಂದು ನಮೂದಾಗಿದ್ದರೆ ಅಂತಹವರು ಜಾತಿ ಒಕ್ಕಲಿಗ ಎಂದು ತಿಳಿಸಬಹುದು.ಈ ಬಾರಿ ಬದಲಾವಣೆ ಮಾಡಿದಲ್ಲಿ ಜನಾಂಗದ ಮುಂದಿನ ಭವಿಷ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಅಧಿಕ ಎಂದರು. ಈಗಾಗಲೇ ಕೊಡಗು ಗೌಡ ಸಮಾಜಗಳ ಒಕ್ಕೂಟವು ಸಮಾಜದ ಮೈಸೂರು, ಭಾಗಮಂಡಲ, ಸುಳ್ಯ, ಮೈಸೂರು ಬೆಂಗಳೂರು ಹಾಗೂ ಪುತ್ತೂರು ಮುಂತಾದ ಸಮಾಜಗಳ ಹಾಗೂ ಸಮುದಾಯದ ಹಿರಿಯರೊಂದಿಗೆ ವಿವಿಧ ಸಂಘಟನೆಗಳೊಂದಿಗೆ ಕಳೆದ ಒಂದು ತಿಂಗಳಿನಿಂದ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸಮೀಕ್ಷೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಕುಟುಂಬದ ನಿಖರವಾದ ಮಾಹಿತಿಯನ್ನು ನೀಡುವಂತೆ ಅವರು ತಿಳಿಸಿದ್ದಾರೆ. ಮುಂಬರುವ ಕೇಂದ್ರ ಸರ್ಕಾರದ ಸಮೀಕ್ಷೆ ಸಂದರ್ಭದಲ್ಲಿ ಇದೇ ಮಾಹಿತಿಯನ್ನು ಮುಂದುವರಿಸಲು ಸೂಚಿಸಿದ್ದಾರೆ. ಹಿಂದಿನ ಸಮೀಕ್ಷೆಗಳಲ್ಲಿ ಉಪಜಾತಿ ಕಲಂ ನಲ್ಲಿ ಅರೆಭಾಷೆ ಗೌಡ ಎಂದು ಇಲ್ಲದಿರುವುದನ್ನು ಮನಗಂಡು ಕೊಡಗು ಗೌಡ ಸಮಾಜದ ಒಕ್ಕೂಟ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿ ಅರೆಭಾಷೆ ಗೌಡ ಎಂಬ ಪ್ರತ್ಯೇಕ ಕಾಲಮ್ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗಣಿ ಪ್ರಸಾದ್ ತಿಳಿಸಿದರು. ಗೋಷ್ಠಿಯಲ್ಲಿ ಗೌಡ ಸಮಾಜ ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚೀಯಂಡಿ ಶಾಂತಿ, ಗೌಡ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಕುದುಪಜೆ ದೇವಕಿ, ಗೌಡ ಮಾಜಿ ನಿವೃತ್ತ ಸೈನಿಕರ ಒಕ್ಕೂಟದ ಅಧ್ಯಕ್ಷರಾದ ದೇವ ಜನ ಚಿನ್ನಪ್ಪ, ಗೌಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಸೂಧನ ಗೋಪಾಲ ಮತ್ತು ವಿವಿಧ ಘಟಕಗಳ ನಿರ್ದೇಶಕರು ಇದ್ದರು.