ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕಾಡಿನ ಸುತ್ತ ಆನೆ ಕಂದಕ ಮತ್ತು ಬೆಂಕಿ ಲೈನ್‌ ಮಾಡುವಂತೆ ಒತ್ತಾಯಿಸಿ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸಮೀಪದ ಸಿದ್ಧಲಿಂಗಪುರ ಗ್ರಾಮದ ಸುತ್ತ ಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಡಿನ ಸುತ್ತ ಆನೆ ಕಂದಕ ಮತ್ತು ಬೆಂಕಿ ಲೈನ್ ಮಾಡುವಂತೆ ಒತ್ತಾಯಿಸಿ ಇಲ್ಲಿನ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.ನಿಡ್ತ ಮೀಸಲು ಅರಣ್ಯ, ಭುವಂಗಾಲ ಮತ್ತು ಬಾಣಾವಾರ ಅರಣ್ಯ ಪ್ರದೇಶಗಳಲ್ಲಿ ನಿರ್ಮಿಸಿರುವ ಆನೆ ಕಂದಕ ತುಂಬಾ ಹಳೆಯದಾಗಿದ್ದು, ಕಂದಕಕ್ಕೆ ಮಣ್ಣು ತುಂಬಿರುವುದರಿಂದ ಕಾಡಾನೆಗಳು ಮತ್ತು ಪ್ರಾಣಿಗಳು ಸುಲಭವಾಗಿ ಅದನ್ನು ದಾಟಿ ಕೃಷಿ ಜಮೀನಿಗೆ ಲಗ್ಗೆ ಇಡುತ್ತಿವೆ. ಇದರೊಂದಿಗೆ ರಸ್ತೆ ಬದಿಯಲ್ಲಿ ಕಾಡು ಬೆಳೆದಿರುವುದರಿಂದ, ಕಾಡು ಪ್ರಾಣಿಗಳು ಈ ಪ್ರದೇಶದಲ್ಲಿ ನಿಂತರು ಗೊತ್ತಾಗದ ಪರಿಸ್ಥಿತಿ ಇದೆ. ಯಾವಾಗ ಬೇಕಾದರೂ ಕಾಡು ಪ್ರಾಣಿಗಳ ದಾಳಿ ಮಾಡಬಹುದು ಎಂದು ಭಯದಿಂದಲೇ ಕೃಷಿ ಚಟುವಟಿಕೆ ನಡೆಸುವಂತಾಗಿದ್ದು, ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಎಸ್.ಕೆ. ಗೋವಿಂದಪ್ಪ ತಿಳಿಸಿದರು.ಮನವಿಯನ್ನು ಅರಣ್ಯ ಇಲಾಖೆ ಎಸಿಎಫ್ ಎ.ಎ. ಗೋಪಾಲ ಅವರಿಗೆ ಸಲ್ಲಿಸಿದರು. ಈ ಸಂದರ್ಭ ಗ್ರಾಮಸ್ಥರಾದ ಕೆ.ವಿ. ರೋಹಿ, ಬಿ.ಸಿ. ಮಂಜುನಾಥ್, ವೆಂಕಪ್ಪ ಇದ್ದರು.