ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಉಕ್ಕು ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬವನ್ನು ನಗರದ ಆಶಾನಿಲಯ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು.

ಉಡುಪಿ: ಜಿಲ್ಲಾ ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಉಕ್ಕು ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬವನ್ನು ನಗರದ ಆಶಾನಿಲಯ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ, ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಉಟೋಪಚಾರ ನೀಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು, ಆಶಾ ನಿಲಯದ ಸಿಬ್ಬಂದಿ ವರ್ಗ ದವರು ಸಹಕರಿಸಿದರು.

ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಮಾತನಾಡಿ, ಕುಮಾರಣ್ಣ 2 ಸಲ ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಟ್ಟಂತಹ ಕೊಡುಗೆ, ಕೇಂದ್ರ ಸಚಿವರಾಗಿ ದೇಶಕ್ಕೆ ಮಾಡಿರುವ ಸೇವೆ ಹಾಗೂ ವಿಶೇಷ ಮಕ್ಕಳು, ವಿಕಲಚೇತನರ ಬಗ್ಗೆ ಅವರ ಕರುಣೆಯ ಕಾರಣಕ್ಕೆ ಇಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಸಂತೋಷವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ವಾಸುದೇವ ರಾವ್, ಜಯಕುಮಾರ್ ಪರ್ಕಳ, ಜಯರಾಮ ಆಚಾರ್ಯ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಸುಧಾಕರ್ ಶೆಟ್ಟಿ, ಉದಯ್ ಹೆಗ್ಡೆ, ಗಂಗಾಧರ ಬಿರ್ತಿ, ದಕ್ಷಿತ್ ಶೆಟ್ಟಿ, ಉಮೇಶ್ ಕರ್ಕೇರ, ಶಾಲಿನಿ ಶೆಟ್ಟಿ ಕೆಂಚನೂರು, ದೇವರಾಜ್ ತೊಟ್ಟಂ, ರಮೇಶ್ ಕುಂದಾಪುರ, ಕಿಶೋರ್ ಬಳ್ಳಾಲ್, ರಾಮರಾವ್ ಉಡುಪಿ, ಕೀರ್ತಿರಾಜ್, ಅಶ್ರಫ್ ಪಡುಬಿದ್ರಿ, ವಿಶಾಲಾಕ್ಷಿ ಶೆಟ್ಟಿ, ವಸಂತಿ, ರಂಗ ಆರ್. ಕೋಟ್ಯಾನ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.