ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ನೇಮಕ

| Published : Oct 28 2024, 12:59 AM IST / Updated: Oct 28 2024, 01:00 AM IST

ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟರನ್ನು ಅವರ ನಿವಾಸದಲ್ಲಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ) ನೇತೃತ್ವದಲ್ಲಿ ನಾಲ್ವರು ನಾಮನಿರ್ದೇಶನ ಸದಸ್ಯರಾದ ಎಸ್.ರಾಜು, ಪುಟ್ಟಸ್ವಾಮಿ, ದ್ವಾರಕಿ, ಅಂಬಿಕಾ ಅವರು ಭಾರಿ ಗಾತ್ರದ ಹೂವಿನ ಹಾರಹಾಕಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ತಾಪಂ ಮಾಜಿ ಸದಸ್ಯ ಎಸ್.ರಾಜು, ನಗರಸಭಾ ಮಾಜಿ ಸದಸ್ಯ ಪುಟ್ಟಸ್ವಾಮಿ, ರಾಜೇಂದ್ರ (ದ್ವಾರಕಿ) ಹಾಗೂ ಅಂಬಿಕಾ ಅವರನ್ನು ನಗರಾಭಿವೃದ್ಧಿ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಶಾಸಕ ಸಿ.ಪುಟ್ಟರಂಗಶೆಟ್ಟರ ಶಿಫಾರಸ್ಸಿನ ಮೇರೆಗೆ ನಾಲ್ವರನ್ನು ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟರನ್ನು ಅವರ ನಿವಾಸದಲ್ಲಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ) ನೇತೃತ್ವದಲ್ಲಿ ನಾಲ್ವರು ನಾಮನಿರ್ದೇಶನ ಸದಸ್ಯರಾದ ಎಸ್.ರಾಜು, ಪುಟ್ಟಸ್ವಾಮಿ, ದ್ವಾರಕಿ, ಅಂಬಿಕಾ ಅವರು ಭಾರಿ ಗಾತ್ರದ ಹೂವಿನ ಹಾರ ಹಾಕಿ, ಶಾಲು ಹೊದಿಸಿ, ಫಲತಾಂಬುಲ ನೀಡಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಪಟ್ಟಣದ ಅಭಿವೃದ್ಧಿಯಲ್ಲಿ ಎಲ್ಲ ಸದಸ್ಯರು ಕೈ ಜೋಡಿಸುವ ಮೂಲಕ ಅಧ್ಯಕ್ಷರಿಗೆ ಹೆಚ್ಚಿನ ಬಲ ನೀಡಬೇಕು.

ಈಗಾಗಲೇ ನಗರಾಭಿವೃದ್ಧಿ ಸಚಿವರಿಗೆ ಮೂಲಸೌಲಭ್ಯಗಳು ಹಾಗೂ ನೂತನ ಬಡಾವಣೆಗೆಗಳ ನಿರ್ಮಾಣ ಸಂಬಂಧ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಸಿಎಂ ಸಹ ಜಿಲ್ಲೆಗೆ ಭೇಟಿ ನೀಡುವವರಿದ್ದು, ಇದಕ್ಕು ಮುನ್ನ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಮತ್ತು ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳುತ್ತೇನೆ. ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಎಲ್ಲರೂ ಒತ್ತು ನೀಡಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಚ್. ನಾಗರಾಜು, ತುಳಸಿದಾಸ್, ಬಿಸಲವಾಡಿ ಪಿ. ಮಹದೇವಪ್ಪ ಇತರರರು ಇದ್ದರು.