ವಿದ್ಯಾರ್ಥಿಗಳಿಂದ ಸಾರ್ವಜನಿಕರ ಆರೋಗ್ಯ ನಿರ್ವಹಣೆ

| Published : Oct 28 2024, 12:59 AM IST

ಸಾರಾಂಶ

ವಿಜಯಪುರ: ವಿಜ್ಞಾನ ವಿಶ್ವವಿದ್ಯಾಲಯದಿಂದ ೪೮ ವಿದ್ಯಾರ್ಥಿಗಳ ತಂಡ ಬಂದಿದ್ದು, ಒಬ್ಬೊಬ್ಬ ವಿದ್ಯಾರ್ಥಿ ೫ ಕುಟುಂಬಗಳ ಆರೋಗ್ಯ ನಿರ್ವಹಣೆ ನೋಡಿಕೊಳ್ಳುತ್ತಾರೆ. ಕುಟುಂಬದಲ್ಲಿನ ಸದಸ್ಯರ ಕುರಿತು ಅಧ್ಯಯನ ಮಾಡಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುಮನ್ ತಿಳಿಸಿದರು.

ವಿಜಯಪುರ: ವಿಜ್ಞಾನ ವಿಶ್ವವಿದ್ಯಾಲಯದಿಂದ ೪೮ ವಿದ್ಯಾರ್ಥಿಗಳ ತಂಡ ಬಂದಿದ್ದು, ಒಬ್ಬೊಬ್ಬ ವಿದ್ಯಾರ್ಥಿ ೫ ಕುಟುಂಬಗಳ ಆರೋಗ್ಯ ನಿರ್ವಹಣೆ ನೋಡಿಕೊಳ್ಳುತ್ತಾರೆ. ಕುಟುಂಬದಲ್ಲಿನ ಸದಸ್ಯರ ಕುರಿತು ಅಧ್ಯಯನ ಮಾಡಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುಮನ್ ತಿಳಿಸಿದರು.

ಹೋಬಳಿಯ ನಾರಾಯಣಪುರದಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮೂರು ವರ್ಷ ಸಾರ್ವಜನಿಕರ ಆರೋಗ್ಯ ನಿರ್ವಹಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗೆ ನಿಗದಿಯಾಗಿರುವ ಮನೆಗಳಿಗೆ ತೆರಳಿ, ಸಾರ್ವಜನಿಕರೊಂದಿಗೆ ತಮ್ಮ ಪರಿಚಯ ಮಾಡಿಕೊಂಡು, ಅವರ ಕುಶಲೋಪರಿ ವಿಚಾರಿಸಿದರು. ಮನೆಯಲ್ಲಿರುವವರ ಕಾರ್ಯಚಟುವಟಿಕೆ, ಅವರ ವಯಸ್ಸು, ಆರೋಗ್ಯ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು ಎಂದರು.

ಗ್ರಾಪಂ ಸದಸ್ಯ ಮುರಳೀಧರ್ ಮಾತನಾಡಿ, ಗ್ರಾಮೀಣರದ್ದು ವಿಶ್ರಾಂತಿ ರಹಿತ ಜೀವನ. ಹೆಚ್ಚು ಜನ ರೇಷ್ಮೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಆರೋಗ್ಯದ ಕಡೆ ಗಮನಹರಿಸುವುದಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳ ತಂಡ, ಪ್ರತಿಯೊಂದು ಮನೆಯ ಹೊಣೆಗಾರಿಕೆ ಹೊತ್ತು, ಅವರ ಆರೋಗ್ಯ ಸಮಸ್ಯೆಗಳು, ತೆಗೆದುಕೊಳ್ಳಬೇಕಾದಂತಹ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸುವುದರಿಂದ ಅನುಕೂಲವಾಗಲಿದೆ ಎಂದರು.

ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಪಿ.ಎಂ.ಕೊಟ್ರೇಶ್ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರೊಂದಿಗೆ ಬೆರೆತು ಕೆಲಸ ಮಾಡುವ ಅವಕಾಶಗಳು ಕೆಲವೊಮ್ಮೆ ಮಾತ್ರವೇ ಸಿಗುತ್ತದೆ. ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಸಾರ್ವಜನಿಕರು ಅವರಿಗೆ ಸಹಕರಿಸಿ ಆರೋಗ್ಯ ಸುಧಾರಣೆಗೆ ಗಮನಹರಿಸಬೇಕು ಎಂದರು.

ಡಾ.ರಾಘವೇಂದ್ರ, ಡಾ.ಚೇತನ್, ಗ್ರಾಪಂ ಸದಸ್ಯರಾದ ಕೋಮಲ, ಎಸ್‌ಡಿಎಂಸಿ ಅಧ್ಯಕ್ಷೆ ರೂಪ, ಶಿಕ್ಷಕರಾದ ಬಾಲಚಂದ್ರ, ವೆಂಕಟೇಶಪ್ಪ, ಆಂಜನೇಯರೆಡ್ಡಿ, ಯಾಸ್ಮಿನ್, ಸೌಂದರ್ಯ, ಅಂಗನವಾಡಿ ಕಾರ್ಯಕರ್ತೆ ಕವಿತ, ಆಶಾ ಕಾರ್ಯಕರ್ತೆ ಲಕ್ಷ್ಮೀದೇವಿ ಇತರರಿದ್ದರು.

ಫೋಟೋ:

ವಿಜಯಪುರ ಹೋಬಳಿಯ ನಾರಾಯಣಪುರದಲ್ಲಿ ಎಂ.ಎಸ್.ರಾಮಯ್ಯ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾರ್ವಜನಿಕರ ಆರೋಗ್ಯ ನಿರ್ವಹಣೆ ಕಾರ್ಯಕ್ರಮ ನಡೆಯಿತು.