ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ ವಿಜಯಪುರ ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆರ್‌ಎಂಎಸ್‌ಎ ಕುಪಕಡ್ಡಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ವೇತಾ ನಿಂಗೊಂಡ ಬಾಡಿಗಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಪ್ರವೀಣ ಸಂಗಮೇಶ ಹುನಗುಂದ 5 ಕಿ.ಮೀ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಇಬ್ಬರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದೀಪಾ ಪುಂಡಿಬೀಜ 400 ಮೀಟರ್ ಹಡಲ್ಸ್ ಸ್ಪರ್ಧೆಯಲ್ಲಿ ತೃತೀಯ, ಅಭಿಷೇಕ ಬೀಳಗಿ 5 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಶಿವಕುಮಾರ ಹಿರೇಮಠ ಹಾಗೂ ತಂಡದ ಮೇಲ್ವಿಚಾರಕರಾದ ಸುಮನ ಗಿರಣಿವಡ್ಡರ ಶಿಕ್ಷಕರಿಗೆ ಶಾಲೆಯ ಮುಖ್ಯೋಪಾಧ್ಯಾಯ ಎನ್.ಪಿ.ಹೊನ್ನಾಕಟ್ಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರಣಗೌಡ ಬಿರಾದಾರ ಹಾಗೂ ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷ ಚನಗೊಂಡಪ್ಪ ಬಿರಾದಾರ, ನಿಕಟಪೂರ್ವ ಅಧ್ಯಕ್ಷ ಉದಯಕುಮಾರ ದೊಡ್ಡಪ್ಪಹಳ್ಳಿ ಸಂಗನಗೌಡ ಬಿರಾದಾರ ಹಾಗೂ ಸದಸ್ಯರು. ಶಿಕ್ಷಕರಾದ ಮಂಜುಳಾ ಸಾರ್ವಾಡ, ಜಗದೀಶ ಪತ್ತಾರ, ಪ್ರೇಮ ಡವಳಗಿ, ಮಲ್ಲಪ್ಪ ಭೂತಾಳಿ, ಸುರೇಶ ಅಭಿನಂಧಿಸಿದ್ದಾರೆ
;Resize=(128,128))
;Resize=(128,128))