ಕನ್ನಡಪ್ರಭ ವಾರ್ತೆ ನಾಪೋಕ್ಲು

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಅಕಾಡೆಮಿ‌ ಪ್ರಕಟಿತ‌ ಪುಸ್ತಕ ಬಿಡುಗಡೆ ಹಾಗೂ‌ ವಾದ್ಯ ಪರಿಕರಗಳ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಶುಕ್ರವಾರ ಮಂಗಳೂರಿನ ತುಳುಭವನದ ಸಿರಿಚಾವಡಿಯಲ್ಲಿ‌ ಆಯೋಜಿಸಲಾಯಿತು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಮುಂಬರುವ ಮಾ. 14ರಂದು‌ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಸಲುದ್ದೇಶಿಸಿರುವ 2025ನೇ ಸಾಲಿನ‌ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಅಕಾಡೆಮಿ‌ ಪ್ರಕಟಿತ‌ ಪುಸ್ತಕ ಬಿಡುಗಡೆ ಹಾಗೂ‌ ವಾದ್ಯ ಪರಿಕರಗಳ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆಯು‌ ಮಂಗಳೂರಿನ ಉರ್ವಾಸ್ಟೋರ್‌ನಲ್ಲಿರುವ‌ ತುಳುಭವನದ ಸಿರಿಚಾವಡಿಯಲ್ಲಿ ‌ಶುಕ್ರವಾರ‌ ನಡೆಯಿತು.

ಅಕಾಡೆಮಿ ಅಧ್ಯಕ್ಷ ಸದಾನಂದ‌ ಮಾವಜಿಯವರ ಅಧ್ಯಕ್ಷತೆಯಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗೌಡ ಸಮಾಜ, ಅರೆಭಾಷೆ ಸಂಘಟನೆಗಳ ಮುಖ್ಯಸ್ಥರು,

ಅಕಾಡೆಮಿಯ ಹಾಲಿ‌ ಹಾಗೂ‌ ಮಾಜಿ‌ ಸದಸ್ಯರು ಭಾಗವಹಿಸಿದ್ದರು.