ಕೋಲಾರ ನಗರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಬಂಗಾರಪೇಟೆ ಮಾರ್ಗದ ಜಿಗ್‌ಜಾಗ್ ಬಳಿ ಸಂಘಟಿತರಾಗಿ ಕಾಂಗ್ರೆಸ್ ಬಾವುಟಗಳನ್ನು ಹಿಡಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಮಿತ್‌ಷಾವಿರುದ್ದ ಘೋಷಣೆಗಳು ಕೂಗಿದರು.
ಕನ್ನಡಪ್ರಭ ವಾರ್ತೆ ಕೋಲಾರನ್ಯಾಷನಲ್ ಹೆರಾಲ್ಡ್ (ಯಂಗ್ ಇಂಡಿಯ) ಸಂಸ್ಥೆಯ ಮೇಲೆ ಬಿಜೆಪಿ ಹೊಡಿರುವ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸುವ ಮೂಲಕ ಮುಖ ಭಂಗವುಂಟು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ನಗರದ ಬೈಪಾಸ್ ಬಳಿ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಬಿಜೆಪಿ ಕಚೇರಿಗೆ ಮುತ್ತಿಕೆ ಹಾಕಲು ಪ್ರಯತ್ನಿಸಿ ಬಂಧನಕ್ಕೆ ಒಳಗಾದರು.ನಗರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ನೂರಾರು ಮಂದಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಬಂಗಾರಪೇಟೆ ಮಾರ್ಗದ ಜಿಗ್‌ಜಾಗ್ ಬಳಿ ಸಂಘಟಿತರಾಗಿ ಕಾಂಗ್ರೆಸ್ ಬಾವುಟಗಳನ್ನು ಹಿಡಿದು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಮಿತ್‌ಷಾವಿರುದ್ದ ಘೋಷಣೆಗಳು ಕೂಗುತ್ತಾ ಬಿಜೆಪಿ ವಿರುದ್ದ ಪ್ರತಿಭಟನಾ ಮೆರವಣಿಗೆ ಮೂಲಕ ಬಿಜೆಪಿ ಕಚೇರಿಯತ್ತಾ ಧಾವಿಸಿ ಮುತ್ತಿಗೆ ಹಾಕಲು ಹೋರಾಟಗ ಮಾರ್ಗದ ಮಧ್ಯೆ ಪೊಲೀಸರು ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನು ತಡೆದರು. ಇದಕ್ಕೂ ಮುನ್ನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಯಾವುದೇ ಎಫ್.ಐ.ಆರ್ ದಾಖಲಾಗಿಲ್ಲ. ಯಾವುದೇ ಅಕ್ರಮ ಹಣ ವರ್ಗಾವಣೆಯಾಗಿಲ್ಲಿ ಎಂಬುದನ್ನು ನ್ಯಾಯಾಲಯದ ಮುಂದೆ ಸಾಭೀತು ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಯಾವುದೇ ರೀತಿ ಅಕ್ರಮವಾದ ಆದಾಯ ಅಥವಾ ಆಸ್ತಿಗಳು ವರ್ಗಾವಣೆ ಆಗಿರುವುದು ಕಂಡು ಬಂದಿಲ್ಲ ಎಂಬುವುದನ್ನು ವಿಚಾರಣೆಯಲ್ಲಿ ಸಾಕ್ಷಧಾರಗಳು ರುಜುವಾತು ಆಗಿರುವುದು ಎಂದರು.
ಪ್ರತಿಭಟನಾ ರ್‍ಯಾಲಿಯಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಕೆ.ಯು.ಡಿ.ಯ ಅಧ್ಯಕ್ಷ ಮಹಮ್ಮದ್ ಹನೀಫ್, ಹಾಲು ಒಕ್ಕೂಟದ ನಿರ್ದೇಶಕ ಷರೀಫ್, ನಗರ ಘಟಕದ ಅಧ್ಯಕ್ಷ ಸೈಯದ್ ಅಪ್ಸರ್, ಜಿಲ್ಲಾ ಕಾರ್ಯದರ್ಶಿ ವೆಂಕಟಪತಪ್ಪ, ನಗರಸಭಾ ಸದಸ್ಯರಾದ ಅಂಬರೀಷ್, ಮುರಳಿಗೌಡ, ಅಮರ್‌ನಾಥ್, ರಾಮಯ್ಯ, ಮಾಜಿ ನಗರಸಭಾ ಸದಸ್ಯ ಜಾಫರ್, ಸಾಧಿಕ್ ಪಾಷ, ಸಿ.ಸೋಮಶೇಖರ್, ಮುಖಂಡರಾದ ನರೇಂದ್ರಬಾಬು (ಗಂಗಣ್ಣ) ಬಾಲು, ಮಂಜುನಾಥ್ ಇದ್ದರು.ಸಜ್ಜಾಗಿದ್ದ ಬಿಜೆಪಿ ಕಾರ್ಯಕರ್ತರು
ಕಾಂಗ್ರೆಸ್ ಪಕ್ಷದವರು ಬಿಜೆಪಿ ಪಕ್ಷಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂಬ ಮಾಹಿತಿ ದೊರೆತು ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಪ್ರವೇಶಿಸುವುದನ್ನು ದೂರದಿಂದಲೇ ತಡೆಯಲೂ ಸಕಲ ರೀತಿಯಲ್ಲೂ ಸಿದ್ದತೆ ಮಾಡಿಕೊಂಡಿದ್ದರು. ವಿಷಯ ಎಸ್‌ಪಿ ನಿಖಿಲ್.ಬಿ ಗಮನಕ್ಕೆ ಬಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಕುಮಾರ್ ಡಿ.ವೈ.ಎಸ್.ಪಿ ಹೆಚ್.ಎಂ.ನಾಗ್ತೆ, ಸಿಪಿಐ. ಲೋಕೇಶ್ ಹಾಗೂ ಕಾಂತರಾಜ್ ನೇತೃತ್ವದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಆಯೋಜಿಸಿದ್ದು ಮಾರ್ಗದ ಮಧ್ಯೆ ಕಾಂಗ್ರೆಸ್ ಪಕ್ಷದವರನ್ನು ತಡೆ ಹಿಡಿದ ಹಿನ್ನಲೆಯಲ್ಲಿ ಉಂಟಾಗಬಹುದಾದ ದೊಡ್ಡ ಅನಾಹುತ ತಪ್ಪಿಸಿದರು.