ಸಾರಾಂಶ
ಕಣಕಟ್ಟೆ ಹೋಬಳಿ ಕಾಮಸಮುದ್ರ ಗ್ರಾಮದಲ್ಲಿ ನೆಹರೂ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಿನ, ಶಿಕ್ಷಕರ ಪೋಷಕರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೋಕ್ಸೋ ಕಾಯಿದೆ, ಮಕ್ಕಳ ರಕ್ಷಣೆ ಸಂಬಂಧಿ ಕಾನೂನುಗಳ ಬಗ್ಗೆ ಪೋಷಕರು, ಶಿಕ್ಷಕರು ಮತ್ತು ಮಕ್ಕಳು ಪೂರ್ಣ ಅರಿವು ಹೊಂದಿಲ್ಲದಿರುವುದರಿಂದ ಅನೇಕ ಪ್ರಕರಣಗಳು ವರದಿಗೂ ಬರುವುದಿಲ್ಲ. ಆದ್ದರಿಂದ ಅರಿವು ಮೂಡಿಸುವುದು ಅತ್ಯಾವಶ್ಯಕ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಪೋಕ್ಸೋ ಕಾಯಿದೆ, ಬಾಲ್ಯ ವಿವಾಹ ನಿರ್ಮೂಲನೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಪೋಷಕರು ಅಗತ್ಯವಾದ ಅರಿವು ಹೊಂದುವುದು ಅತ್ಯಂತ ಮುಖ್ಯ ಎಂದು ಕಾಮಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೈ.ಎಸ್. ಶಂಕರಪ್ಪ ಹೇಳಿದರು.ಕಣಕಟ್ಟೆ ಹೋಬಳಿ ಕಾಮಸಮುದ್ರ ಗ್ರಾಮದಲ್ಲಿ ನೆಹರೂ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಿನ, ಶಿಕ್ಷಕರ ಪೋಷಕರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೋಕ್ಸೋ ಕಾಯಿದೆ, ಮಕ್ಕಳ ರಕ್ಷಣೆ ಸಂಬಂಧಿ ಕಾನೂನುಗಳ ಬಗ್ಗೆ ಪೋಷಕರು, ಶಿಕ್ಷಕರು ಮತ್ತು ಮಕ್ಕಳು ಪೂರ್ಣ ಅರಿವು ಹೊಂದಿಲ್ಲದಿರುವುದರಿಂದ ಅನೇಕ ಪ್ರಕರಣಗಳು ವರದಿಗೂ ಬರುವುದಿಲ್ಲ. ಆದ್ದರಿಂದ ಅರಿವು ಮೂಡಿಸುವುದು ಅತ್ಯಾವಶ್ಯಕ, ಎಂದು ಹೇಳಿದರು.ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವುದು ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳ ನಿಷ್ಠಾವಂತ ಸೇವೆಯನ್ನು ಗಮನಿಸಿ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸುವಂತೆ ಪೋಷಕರಿಗೆ ಕರೆ ನೀಡಿದರು.ಪ್ರಾಥಮಿಕ ಆರೋಗ್ಯ ಘಟಕದ ವೈದ್ಯ ಡಾ. ರವೀಶ್ ಮಾತನಾಡಿ, ಶಾಲಾ ಮಕ್ಕಳು ಭವಿಷ್ಯದ ಪ್ರಜೆಗಳು, ಉತ್ತಮ ಕುಟುಂಬದ ಆಧಾರಸ್ತಂಭಗಳು. ಆದ್ದರಿಂದ ಪೋಷಕರು ಮಕ್ಕಳಲ್ಲಿ ಹಂತಹಂತವಾಗಿ ಅಗತ್ಯ ವಿಷಯಗಳ ಅರಿವು ಮೂಡಿಸಬೇಕು, ಎಂದು ಸಲಹೆ ನೀಡಿದರು.ಸಭೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಪ್ರಭು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ, ಗ್ರಾಮದ ಹಿರಿಯ ಮಲ್ಲಪ್ಪ, ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘದ ಸದಸ್ಯೆ ಶೀಲಾ, ಎಸ್‌ಡಿಎಂಸಿ ಅಧ್ಯಕ್ಷೆ ಶ್ವೇತಾ, ಶಿಕ್ಷಕರಾದ ಕೆ.ಜಿ. ನಿರಂಜನಮೂರ್ತಿ, ಲತಾ, ಚಂದ್ರಮ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ದಮಲ್ಲಪ್ಪ, ಮಮತಾ, ನವೀನ್, ಸವಿತಾ, ಗಂಗಮ್ಮ ಸೇರಿದಂತೆ ಅನೇಕ ಪೋಷಕರು ಉಪಸ್ಥಿತರಿದ್ದರು.;Resize=(128,128))
;Resize=(128,128))