ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂಗೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಭೇಟಿ ಮಾದಕ ವಸ್ತುಗಳ ಮತ್ತು ವ್ಯಸನಗಳ ಬಗ್ಗೆ ಯುವಕರು ಸೇರಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.ಬಾಲಕರು ಮಾದಕ ವ್ಯಸನಕ್ಕೆ (ಡ್ರಗ್ಸ್) ಬಲಿಯಾಗುತ್ತಿರುವ ಬಗ್ಗೆ ಏ.15ರಂದು ‘ಅಪ್ರಾಪ್ತರಿಂದ ಮಾದಕ ಸೇವನೆ, ದೃಶ್ಯ ವೈರಲ್’ ‘ಕನ್ನಡಪ್ರಭ ಪತ್ರಿಕೆ’ ವರದಿ ಮಾಡಿತ್ತು. ಜೊತೆಗೆ ಯುವಕರು ಮಾದಕ ಸೇವನೆ ಮಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲೆ ಸ್ಥಳಕ್ಕೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಪೋಷಕರಿಂದ ಮಾಹಿತಿ ಪಡೆದು ಮಕ್ಕಳಿಗೆ ಮಾದಕ ವಸ್ತುಗಳಿಂದ ದೂರ ಇರುವಂತೆ ಅನುಸರಿಸಬೇಕಾದ ಸಲಹೆ ನೀಡಿ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಿದರು. ಆ ವೈರಲ್ ವಿಡಿಯೋದಲ್ಲಿನ ಮಕ್ಕಳು ಅಪ್ರಾಪ್ತರಾದ ಕಾರಣಕ್ಕೆ ಅವರ ಪೋಷಕರು ಮತ್ತು ಮಕ್ಕಳಿಗೆ ತಿಳಿ ಹೇಳಿದರು.ಗ್ರಾಮದಲ್ಲಿ ಗಾಂಜಾ, ಚರಸ್ ಯಾವುದು ಇಲ್ಲ. ಮಕ್ಕಳ ಕೇವಲ ಸೆಲೂಶನ್ ಮತ್ತು ವೇಟ್ನರ್ ಬಳಸಿದ್ದಾರೆ. ಗಾಂಜಾಂ ಸೇರಿದಂತೆ ಇನ್ನಿತರ ಮಾದಕ ವಸ್ತುಗಳು ಕಂಡು ಬಂದದಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸಿದರು. ಪಟ್ಟಣವನ್ನು ಮಾದಕ ವ್ಯಸನ ಮುಕ್ತ ಮಾಡಲು ನಮ್ಮ ಇಲಾಖೆ ಬದ್ದವಾಗಿದೆ ಎಂದರು.
ಈ ವೇಳೆ ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.
ನಾಳೆ ಶ್ರೀರಂಗಮುಡಿ ಮಹೋತ್ಸವ: ವಿಜಯಸಾರಥಿ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಏ.23ರಂದು ಶ್ರೀರಂಗಮುಡಿ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಲಿದೆ ಎಂದು ದೇವಾಲಯದ ಶ್ರೀ ರಂಗಮುಡಿ ಕೈಂಕರ್ಯ ಸಭಾ ಮುಖ್ಯಸ್ಥ ಅರ್ಚಕ ವಿಜಯಸಾರತಿ ತಿಳಿಸಿದರು.ಶ್ರೀರಂಗನಾಥನ ಜಯಂತಿ ಪ್ರಯುಕ್ತ ಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಶ್ರೀ ರಂಗ ಮುಡಿ ಉತ್ಸವವನ್ನು ದೇವಾಲಯದ ಆಡಳಿತ ಮಂಡಳಿ ಯೊಂದಿಗೆ ಶ್ರೀರಂಗನ ಉತ್ಸವಮೂರ್ತಿಗೆ ವಜ್ರಖಚಿತ ಕಿರುಮುಡಿಯ ಧಾರಣೆ ಮಾಡಿ ನಂತರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಗುವುದು.ಶ್ರೀರಂಗಮುಡಿ ಉತ್ಸವ ಮೂರ್ತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಜೊತೆ ಶಾಸಕರು, ದೇಗುಲದ ಇಒ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಸದಸ್ಯರು ಒಟ್ಟುಗೂಡಿ ಚಾಲನೆ ನೀಡುವರು.
ಶ್ರೀರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಕ್ಕೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ದೇವರಿಗೆ ಮಹಾಭಿಷೇಕವನ್ನು ಅರ್ಚಕರ ನೆರವೇಸುವರು. ಮಧ್ಯಾಹ್ನ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ನಿಯೋಗ, ನಂತರ ಸಂಜೆ ಪಟ್ಟಣದ ಉಪ ಖಜಾನೆಯಿಂದ ವಿತರಿಸಲಾದ ವಜ್ರ ಖಚಿತ ಚಿನ್ನದ ಕಿರೀಟವನ್ನು ರಂಗನಾಥಸ್ವಾಮಿಗೆ ಕಿರೀಟ ಧಾರಣೆ ಮಾಡಿ ಪಲ್ಲಕಿ ಮೇಲಿರಿಸಿ ಪಟ್ಟಣದ ರಾಜಬೀದಿ, ಪೂರ್ಣಯ್ಯ ಬೀದಿ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಮಾಡಲಾಗುತ್ತದೆ ಎಂದು ತಿಳಿಸಿದರು.